ಆ್ಯಪ್ನಗರ

ಡಿ.ಕೆ.ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ ಆಶಾ ಕಾರ್ಯಕರ್ತೆಯರು

ಕನಕಪುರ ಮತ್ತು ರಾಮನಗರ ಭಾಗದ ಆಶಾ ಕಾರ್ಯಕರ್ತರು ಡಿ.ಕೆ.ಶಿವ ಕುಮಾರ್ ಅವರ ಸದಾಶಿವ ನಗರದ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಸರ್ಕಾರ ತಮಗೆ ನೀಡುತ್ತಿರುವ ವೇತನ ಯಾವುದಕ್ಕೂ ಸಾಲುತ್ತಿಲ್ಲ ಎಂದು ಹೇಳಿರುವ ಆಶಾ ಕಾರ್ಯಕರ್ತರು ಸರ್ಕಾರದ ವೇತನ ನಮ್ಮ ಪ್ರಯಾಣಕ್ಕೆ ಸರಿ ಹೋಗುತ್ತದೆ ಎಂದಿದ್ದಾರೆ.

Vijaya Karnataka Web 10 Jul 2020, 4:27 pm
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದಿನಿಂದ ರಾಜ್ಯಾದ್ಯಂತ ಆಶಾ ಕಾರ್ಯಕರ್ತರು ಹಮ್ಮಿಕೊಂಡಿರುವ ಪ್ರತಿಭಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಥ್ ನೀಡಿದ್ದಾರೆ.
Vijaya Karnataka Web DKS WITH ASHA KARYAKRTHAS


ಬೆಂಗಳೂರು: ಬ್ರಿಗೇಡ್‌ ಗೇಟ್‌ ವೇ ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿ ಸಾವು..! ಕೊರೊನಾ ಶಂಕೆ

ರಾಜ್ಯದ ವಿವಿದೆಡೆ ಇಂದಿನಿಂದ ಆಶಾ ಕಾರ್ಯಕರ್ತರು ಪ್ರತಿಭಟನೆ ಶುರು ಮಾಡಿದ್ದಾರೆ. ಈ ಹಿನ್ನೆಲೆ ಕನಕಪುರ ಮತ್ತು ರಾಮನಗರ ಭಾಗದ ಆಶಾ ಕಾರ್ಯಕರ್ತರು ಡಿ.ಕೆ.ಶಿವ ಕುಮಾರ್ ಅವರ ಸದಾಶಿವ ನಗರದ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಸರ್ಕಾರ ತಮಗೆ ನೀಡುತ್ತಿರುವ ವೇತನ ಯಾವುದಕ್ಕೂ ಸಾಲುತ್ತಿಲ್ಲ ಎಂದು ಹೇಳಿರುವ ಆಶಾ ಕಾರ್ಯಕರ್ತರು ಸರ್ಕಾರದ ವೇತನ ನಮ್ಮ ಪ್ರಯಾಣಕ್ಕೆ ಸರಿ ಹೋಗುತ್ತದೆ ಎಂದಿದ್ದಾರೆ.

ಕೊರೊನಾ ನಿಯಂತ್ರಣ: ಕಾರ್ಪೋರೇಟರ್ ಗಳೊಂದಿಗೆ ಸಭೆ ನಡೆಸಲು ಮುಂದಾದ ಎಸ್. ಟಿ ಸೋಮಶೇಖರ್

ಅಲ್ಲದೇ ಸರ್ಕಾರದ ಮೇಲೆ ನೀವು ಒತ್ತಡ ಹೇರಿ ನಮ್ಮ ಬೇಡಿಕೆ ಈಡೇರುವಂತೆ ಮಾಡಬೇಕು ಎಂದಿರುವ ಆಶಾ ಕಾರ್ಯಕರ್ತರು, ನಮ್ಮ ಹೋರಾಟಕ್ಕೆ ನೀವು ಬೆಂಬಲ ನೀಡಬೇಕು ಡಿ.ಕೆ.ಶಿವಕುಮಾರ್ ಬಳಿ ಮನವಿ ಮಾಡಿದ್ದಾರೆ. ಈ ವೇಳೆ ಆಶಾ ಕಾರ್ಯಕರ್ತೆಯರ ಮನವಿಗೆ ಸ್ಪಂದಿಸಿರುವ ಡಿಕೆಶಿ, ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. ಈ ಹೋರಾಟದಲ್ಲಿ ನಿಮ್ಮ ಬೆನ್ನಿಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.

ಸಿಡಿದ ಆಶಾ ಕಾರ್ಯಕರ್ತೆಯರು: ವಿವಿಧ ಬೇಡಿಕೆ ಈಡೇರಿಸುವಂತೆ, ಕೆಲಸ ನಿಲ್ಲಿಸಿ ಇಂದಿನಿಂದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ