ಆ್ಯಪ್ನಗರ

ವಿದೇಶಿ ಪ್ರಜೆ ಚಿಕಿತ್ಸೆಗೆ ಸಿಗ್ನಲ್‌ ಫ್ರೀ ವ್ಯವಸ್ಥೆ; ಬೆಂಗಳೂರು ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ

ಜುಗ್ಗಿ ಮರ್‌ವುಹಾ ಎಂಬುವವರು ತುರ್ತಾಗಿ ಮೊಹಮ್ಮದ್‌ ಅವರನ್ನು ಆಸ್ಪತ್ರೆಗೆ ತಲುಪಿಸಲು ಅವಕಾಶ ಮಾಡಿಕೊಡುವಂತೆ ಸಂಚಾರ ಪೊಲೀಸರಿಗೆ ಮನವಿ ಮಾಡಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಸಂಚಾರ ವಿಭಾಗ, ಏರ್‌ಪೋರ್ಟ್‌ನಿಂದ ಅಪೋಲೊ ಆಸ್ಪತ್ರೆಯವರೆಗೆ ಸಂಪೂರ್ಣ ಸಿಗ್ನಲ್‌ ಫ್ರೀ ಮಾಡಿಕೊಟ್ಟಿತ್ತು. ಪರಿಣಾಮ ಕೇವಲ 40 ನಿಮಿಷಗಳಲ್ಲಿ ಮೊಹಮದ್‌ ಅವರಿದ್ದ ಆ್ಯಂಬುಲೆನ್ಸ್‌ ಆಸ್ಪತ್ರೆ ತಲುಪಲು ಸಾಧ್ಯವಾಗಿತ್ತು.

Vijaya Karnataka Web 9 Jan 2021, 7:14 am
ಬೆಂಗಳೂರು: ಚಿಂತಾಜನಕ ಸ್ಥಿತಿಯಲ್ಲಿದ್ದ ವಿದೇಶಿ ಪ್ರಜೆಯನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ತಲುಪಿಸಲು ಸಿಗ್ನಲ್‌ ಫ್ರೀ (ಗ್ರೀನ್‌ ಕಾರಿಡಾರ್‌) ವ್ಯವಸ್ಥೆ ಮಾಡಿಕೊಟ್ಟ ನಗರ ಸಂಚಾರ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
Vijaya Karnataka Web Apollo hospital ambulance


ಜಿನೆವಾದ ಪ್ರಜೆ ಮೊಹಮ್ಮದ್‌ ಸುಲ್ತಾನ್‌ (62) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಜಯನಗರದ ಅಪೋಲೊ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಗುರುವಾರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್‌ಆ್ಯಂಬುಲೆನ್ಸ್‌ ಮೂಲಕ ಮೊಹಮದ್‌ ಅವರನ್ನು ಕರೆತಂದಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಟ್ರಾಫಿಕ್‌ನಲ್ಲಿ ಆಸ್ಪತ್ರೆಗೆ ತಲುಪಿಸುವುದು ಸವಾಲಿನ ಕೆಲಸವಾಗಿತ್ತು.

ಪ್ರಯಾಣಿಕರೇ ಗಮನಿಸಿ..! ಜ.10ರಂದು ನ್ಯಾಷನಲ್‌ ಕಾಲೇಜು-ಯಲಚೇನಹಳ್ಳಿ ಮೆಟ್ರೊ ಸೇವೆ ಸ್ಥಗಿತಗೊಳ್ಳಲಿದೆ.!

ಈ ವೇಳೆ ಜುಗ್ಗಿ ಮರ್‌ವುಹಾ ಎಂಬುವವರು ತುರ್ತಾಗಿ ಮೊಹಮ್ಮದ್‌ ಅವರನ್ನು ಆಸ್ಪತ್ರೆಗೆ ತಲುಪಿಸಲು ಅವಕಾಶ ಮಾಡಿಕೊಡುವಂತೆ ಸಂಚಾರ ಪೊಲೀಸರಿಗೆ ಮನವಿ ಮಾಡಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಸಂಚಾರ ವಿಭಾಗ, ಏರ್‌ಪೋರ್ಟ್‌ನಿಂದ ಅಪೋಲೊ ಆಸ್ಪತ್ರೆಯವರೆಗೆ ಸಂಪೂರ್ಣ ಸಿಗ್ನಲ್‌ ಫ್ರೀ ಮಾಡಿಕೊಟ್ಟಿತ್ತು. ಪರಿಣಾಮ ಕೇವಲ 40 ನಿಮಿಷಗಳಲ್ಲಿ ಮೊಹಮದ್‌ ಅವರಿದ್ದ ಆ್ಯಂಬುಲೆನ್ಸ್‌ ಆಸ್ಪತ್ರೆ ತಲುಪಲು ಸಾಧ್ಯವಾಗಿತ್ತು.

ಒಂದೇ ಒಂದು ಇಂಜೆಕ್ಷನ್‌ ಕೊಡ್ತೀನಿ ಸರ್.. ಸ್ವಲ್ಪ ಶರ್ಟ್‌ ಹಿಂದಕ್ಕೆ ಎಳ್ಕೊಳ್ಳಿ’; ಡಿಸಿಎಂಗೆ ಲಸಿಕೆ ನೀಡಿದ ನರ್ಸ್..!

ಸಂಚಾರ ಪೊಲೀಸರ ತಕ್ಷಣ ಸ್ಪಂದನೆಯನ್ನು ಶ್ಲಾಘಿಸಿರುವ ಜುಗ್ಗಿ ಮರ್‌ವುಹಾ ಅವರು ಟ್ವಿಟರ್‌ನಲ್ಲಿ ಅಭಿನಂದನೆ ತಿಳಿಸಿದ್ದಾರೆ. ‘ಸಾಮಾನ್ಯ ವ್ಯಕ್ತಿಯೊಬ್ಬ ಮಾಡಿದ ಮನವಿಗೆ ಬೆಂಗಳೂರು ಪೊಲೀಸರು ನೀಡಿದ ಸ್ಪಂದನೆ ಹಾಗೂ ಸಹಕಾರ ಹೃದಯಸ್ಪರ್ಶಿಯಾಗಿದೆ’ ಎಂದು ಧನ್ಯವಾದ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವೀಟಿಗರು ಪೊಲೀಸರ ಕಾರ್ಯಕ್ಕೆ ಶಹಬ್ಬಾಸ್‌ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ