ಆ್ಯಪ್ನಗರ

ಇನ್ನೂ ಉಪಯೋಗಿಸದ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರಿಗೆ ಗಾಯ..!

ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಿಲಿಂಡರ್‌ ಸ್ಫೋಟಿಸಿದಾಗ ಅಲ್ಲೇ ಇದ್ದ ನಾಗರಾಜ್‌ ಮತ್ತು ಮನೋಜ್‌ ಕುಮಾರ್‌ ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ಮನೆ ಮುಂದೆ ಬೆಂಕಿ ಹೊತ್ತಿಕೊಂಡಿದೆ. ಈ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

Vijaya Karnataka Web 28 Oct 2020, 6:31 am
ಬೆಂಗಳೂರು: ಜ್ಞಾನಭಾರತಿ ಬಡಾವಣೆ ಸಮೀಪದ ಮನೆಯೊಂದರಲ್ಲಿಅಡುಗೆ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಗಾಯಗೊಂಡಿದ್ದಾರೆ.
Vijaya Karnataka Web cylinder 4324
Picture used for representational purpose only


ಉಲ್ಲಾಳದ ಮುನೇಶ್ವರನಗರದ ನಿವಾಸಿ ಮನೋಜ್‌ ಕುಮಾರ್‌ (20) ಹಾಗೂ ನಾಗರಾಜ್‌ (60)ಗೆ ಅವರ ಮನೆಯ ಮುಂದಿನ ಮೆಟ್ಟಿಲು ಕೆಳಭಾಗದಲ್ಲಿ ಇಟ್ಟಿದ್ದ ಅಡುಗೆ ಸಿಲಿಂಡರ್‌ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜ್ಞಾನಭಾರತಿ ಠಾಣಾ ಪೊಲೀಸರು ತಿಳಿಸಿದ್ದಾರೆ.

ಗೆಳೆಯನಿಗೆ ಮದ್ಯ ಕುಡಿಸಿ ಕೊಲೆ ಮಾಡಿ ಜಮೀನಿನಲ್ಲಿ ಶವ ಹೂತು ಹಾಕಿದ್ದ ಕಿರಾತಕರು..!

ಘಟನೆಯ ಹಿನ್ನೆಲೆ:
ಕೆನರಾ ಬ್ಯಾಂಕ್‌ ನೌಕರರಾದ ರವಿ, ಕುಟುಂಬದ ಜತೆ ಉಲ್ಲಾಳದ ಮುನೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಮನೆಯ ಮುಂದೆ ಮೆಟ್ಟಿಲು ಕೆಳಭಾಗದಲ್ಲಿ ಅಡುಗೆ ಸಿಲಿಂಡರ್‌ ಇಟ್ಟಿದ್ದರು. ಮಂಗಳವಾರ ಬೆಳಗ್ಗೆ 10 ಗಂಟೆಯಲ್ಲಿ ಅಡುಗೆ ಸಿಲಿಂಡರ್‌ ಸೋರಿಕೆಯಾಗಿರುವುದು ಕಂಡು ಬಂದಿತ್ತು. ಇದನ್ನು ಗಮನಿಸಿದ ನಾಗರಾಜ್‌ ಸಿಲಿಂಡರ್‌ ಹೊರತೆಗೆದು, ಸರಿಪಡಿಸಲು ಮುಂದಾಗಿದ್ದರು.

ಮಹಿಳೆಯರ ನೋವಿಗೆ ಸ್ಪಂದಿಸಲು ರಾಜಕೀಯದಲ್ಲಿ ಮಹಿಳೆಯರಿರಬೇಕು: ಡಿಕೆಶಿ

ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಿಲಿಂಡರ್‌ ಸ್ಫೋಟಿಸಿದಾಗ ಅಲ್ಲೇ ಇದ್ದ ನಾಗರಾಜ್‌ ಮತ್ತು ಮನೋಜ್‌ ಕುಮಾರ್‌ ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ಮನೆ ಮುಂದೆ ಬೆಂಕಿ ಹೊತ್ತಿಕೊಂಡಿದೆ. ಈ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಮದ್ಯಪ್ರಿಯರೇ ಇತ್ತ ಗಮನಿಸಿ.. ಇಂದು ನಾಳೆ ಬೆಂಗಳೂರಲ್ಲಿ ಎಣ್ಣೆ ಸಿಗಲ್ಲ..!

ಅಗ್ನಿ ಅವಘಡದಿಂದ ದ್ವಿಚಕ್ರ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆಯ ಕಿಟಕಿ, ಬಾಗಿಲು ಜಖಂಗೊಂಡಿವೆ. ಹೆಚ್ಚಿನ ಜನರು ಇಲ್ಲದಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅವಘಡಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ