ಆ್ಯಪ್ನಗರ

ಜೂಮ್ ಕಾರಲ್ಲಿ ಬಂದು ಮನೆ ಲೂಟಿ ಮಾಡಿ ಅಲ್ಲೇ ಪಾರ್ಟಿ ಮಾಡ್ತಿದ್ದ ಫಟಿಂಗರು ಅಂದರ್..!

ಮನೆ ಮುಂದೆ ಪೇಪರ್‌, ಹಾಲಿನ ಪಾಕೆಟ್‌ ಬಿದ್ದಿರುವ, ರಂಗೋಲಿ ಹಾಕದ ಮನೆಗಳನ್ನು ಗುರುತಿಸುತ್ತಿದ್ದ. ನಂತರ ಸಹಚರರನ್ನು ಕಾರಿನಲ್ಲಿ ಕೂರಿಸಿಕೊಂಡು ಮನೆ ಬಳಿ ಹೋಗುತ್ತಿದ್ದ. ​​ಇಬ್ಬರನ್ನು ಕಾವಲಿಗೆ ಮನೆಯ ಹೊರಗೆ ನಿಲ್ಲಿಸಿ ತಾನು ಒಳಗೆ ಪ್ರವೇಶಿಸುತ್ತಿದ್ದ.

Vijaya Karnataka 8 Feb 2020, 12:50 pm
ಬೆಂಗಳೂರು: ಜೂಮ್‌ ಬಾಡಿಗೆ ಕಾರಿನಲ್ಲಿ ತೆರಳಿ ಕಳ್ಳತನ ಮಾಡಿ, ಅದೇ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಖದೀಮರ ಗ್ಯಾಂಗ್‌ನ ಏಳು ಜನರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web home theft
ಜೂಮ್ ಕಾರಲ್ಲಿ ಬಂದು ಮನೆ ಲೂಟಿ ಮಾಡಿ ಅಲ್ಲೇ ಪಾರ್ಟಿ ಮಾಡ್ತಿದ್ದ ಫಟಿಂಗರು ಅಂದರ್..!


ಗಣೇಶ ಅಲಿಯಾಸ್‌ ಟಚ್ಚು (29), ಗಂಗಾಧರ್‌(22), ಮನೋಜ್‌ ಕುಮಾರ್‌ (24), ನಾಗರಾಜು (23), ಚೇತನ್‌(22), ರಘು(22) ಹಾಗೂ ಕದ್ದ ವಸ್ತುಗಳನ್ನು ವಿಲೇವಾರಿ ಮಾಡುತ್ತಿದ್ದ ನೇತ್ರಾವತಿ(43) ಬಂಧಿತರು.

ಆರೋಪಿಗಳಿಂದ 260 ಗ್ರಾಂ ಚಿನ್ನಾಭರಣ, 1.4 ಕೆ.ಜಿ ಬೆಳ್ಳಿ ವಸ್ತುಗಳು, ವಿದೇಶಿ ಕರೆನ್ಸಿ ಸೇರಿ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಜೂಮ್‌ ಕಾರ್‌ ಸೇರಿದಂತೆ 13 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಕೋಣನಕುಂಟೆ ಮತ್ತು ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದ್ದ 3 ಪ್ರಕರಣಗಳು ಪತ್ತೆಯಾಗಿವೆ ಎಂದು ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್‌ ಸೆಪಟ್‌ ತಿಳಿಸಿದರು.

ಅಪಘಾತಕ್ಕೆ ಕಾರಣವಾಗಿದ್ದ ಬೈಕ್ ಬಿಡುಗಡೆ ಮಾಡಲು ಲಂಚ: ರೆಡ್‌ ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಬಿದ್ದ ಹೆಡ್‌ ಕಾನ್ಸ್‌ಟೇಬಲ್

ಜೂಮ್‌ ಕಾರಲ್ಲಿ ಓಡಾಟ

ಪ್ರಮುಖ ಆರೋಪಿ ಗಣೇಶ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಕೆಲಸ ಕಾರ್ಯವಿಲ್ಲದೇ ಓಡಾಡುವ ಪುಂಡರನ್ನು ಸೇರಿಸಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ. ಸಹಚರರ ಹೆಸರಿನಲ್ಲಿನ ಡಿಎಲ್‌ ಮತ್ತು ಗುರುತಿನ ದಾಖಲೆ ನೀಡಿ ಜೂಮ್‌ ಕಾರು ಬಾಡಿಗೆ ಪಡೆಯುತ್ತಿದ್ದ ಗಣೇಶ, ವಿವಿಧ ಪ್ರದೇಶಗಳಲ್ಲಿಓಡಾಡುತ್ತಿದ್ದ. ಮನೆ ಮುಂದೆ ಪೇಪರ್‌, ಹಾಲಿನ ಪಾಕೆಟ್‌ ಬಿದ್ದಿರುವ, ರಂಗೋಲಿ ಹಾಕದ ಮನೆಗಳನ್ನು ಗುರುತಿಸುತ್ತಿದ್ದ. ನಂತರ ಸಹಚರರನ್ನು ಕಾರಿನಲ್ಲಿ ಕೂರಿಸಿಕೊಂಡು ಮನೆ ಬಳಿ ಹೋಗುತ್ತಿದ್ದ. ಇಬ್ಬರನ್ನು ಕಾವಲಿಗೆ ಮನೆಯ ಹೊರಗೆ ನಿಲ್ಲಿಸಿ ತಾನು ಒಳಗೆ ಪ್ರವೇಶಿಸುತ್ತಿದ್ದ. ಬೀರು, ಲಾಕರ್‌ಗಳನ್ನು ಒಡೆದು ಆಭರಣ, ಎಲೆಕ್ಟ್ರಾನಿಕ್‌ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ಅಲ್ಲದೇ, ಕನ್ನ ಹಾಕಿದ ಮನೆಯಲ್ಲೇ ಅಮ್ಲೇಟ್‌ ಮಾಡಿಕೊಂಡು ತಿಂದು ಪಾರ್ಟಿ ಮಾಡಿ ಅಲ್ಲಿಂದ ಹೊರಡುತ್ತಿದ್ದ ಎಂದು ಇನ್ಸ್‌ಪೆಕ್ಟರ್‌ ಧರ್ಮೇಂದ್ರ ತಿಳಿಸಿದರು.

ಬಾಲಕಿಯರ ರೇಪ್ ಮಾಡಿ ಕೊಲ್ಲೋದೇ ಕೆಲಸ..! ವಿಕೃತ ಕಾಮಿಗೆ ಗಲ್ಲು ಶಿಕ್ಷೆಯಾದಾಗ ನಿಟ್ಟುಸಿರಿಟ್ಟ ಆತ್ಮಗಳು..!

ಕಳ್ಳತನ ಮಾಡಿದ ವಸ್ತುಗಳನ್ನು ನೇತ್ರಾವತಿ ಮೂಲಕ ಮಣಪ್ಪುರಂ ಗೋಲ್ಡ್‌ಲೋನ್‌ನಲ್ಲಿ ಅಡ ಇಟ್ಟು ಹಣ ಪಡೆದುಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳ್ಳತನ ವಸ್ತುಗಳ ವಿಲೇವಾರಿಗೆ ಸಾಥ್‌ ನೀಡುತ್ತಿದ್ದ ನೇತ್ರಾವತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇತ್ತೀಚಿಗೆ ನಡೆದ ಕಳ್ಳತನ ಕೇಸ್‌ನಲ್ಲಿ ಆರೋಪಿಗಳು ಜೂಮ್‌ ಕಾರಿನಲ್ಲಿ ಬಂದಿದ್ದರು. ಆ ಪ್ರದೇಶದಲ್ಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ಜೂಮ್‌ ಕಾರು ಮಾಹಿತಿ ಆಧರಿಸಿ ಕಂಪನಿಯಿಂದ ಮಾಹಿತಿ ಸಂಗ್ರಹಿಸಲಾಯಿತು. ನಂತರ ಜೂಮ್‌ ಬಾಡಿಗೆ ಪಡೆಯಲು ನೀಡಿದ್ದ ಗುರುತಿನ ದಾಖಲೆ ಆಧಾರಿಸಿ ನಾಗರಾಜ್‌ ಎಂಬಾತನನ್ನು ಬಂಧಿಸಿ ನಂತರ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಮಗಳ ಮೇಲೆ ಅತ್ಯಾಚಾರ ಮಾಡಲು ಫ್ರೆಂಡ್‌ಗೆ ಅನುಮತಿ ಕೊಟ್ಟಿದ್ದ ಮಹಾತಾಯಿ..! 14 ವರ್ಷದ ಬಾಲಕಿ ಈಗ ಗರ್ಭಿಣಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ