ಆ್ಯಪ್ನಗರ

ಮೈಸೂರು- ಬೆಂಗಳೂರು ನಡುವೆ ಆರಂಭವಾದ KSRTC EV Power ಬಸ್ ಟಿಕೆಟ್ ಬೆಲೆ ವೋಲ್ವೋ ಬಸ್ ಗಿಂತ ಕಡಿಮೆ!

E Bus service between Mysore - Bangalore - ಬೆಂಗಳೂರು, ಮೈಸೂರು ನಡುವೆ ಕೆಎಸ್ ಆರ್ ಟಿಸಿ ಇವಿ ಪವರ್ ಬಸ್ ಸೇವೆಯು ಸೋಮವಾರದಿಂದ (ಮಾ. 20) ಆರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಹೊಸ ಬಸ್ ಗಳಿಗೆ ಚಾಲನೆ ನೀಡಿದರು. ಮೈಸೂರು - ಬೆಂಗಳೂರು ನಡುವೆ ಆರಂಭವಾಗಿರುವ ಇ-ಬಸ್ ನ ಪ್ರತಿ ಟಿಕೆಟ್ ಬೆಲೆ 300 ರೂ. ಆಗಿದ್ದು, ಇದು ವೋಲ್ವೋ ಬಸ್ ಟಿಕೆಟ್ ದರಕ್ಕಿಂತ 30 ರೂ. ಕಡಿಮೆ ಎನ್ನಲಾಗಿದೆ.

Edited byಚೇತನ್ ಓ.ಆರ್. | Vijaya Karnataka Web 20 Mar 2023, 7:10 pm

ಹೈಲೈಟ್ಸ್‌:

  • ಮೈಸೂರು- ಬೆಂಗಳೂರು ನಡುವೆ ಕೆಎಸ್ಸಾರ್ಟಿಸಿ ಇವಿ ಪವರ್ ಎಂಬ ವಿದ್ಯುತ್ ಚಾಲಿತ ಬಸ್ ಸೇವೆ ಆರಂಭ.
  • ಈ ಬಸ್ ನಲ್ಲಿ ಒಂದು ಕಡೆಯ ಟ್ರಿಪ್ ನ ಟಿಕೆಟ್ ಬೆಲೆ ಒಬ್ಬರಿಗೆ 300 ರೂ. ಎಂದು ಹೇಳಲಾಗಿದೆ.
  • ಈ ನಗರಗಳ ನಡುವೆ ಸಂಚರಿಸುವ ವೋಲ್ವೋ ಬಸ್ ನಲ್ಲಿನ ಟಿಕೆಟ್ ಬೆಲೆ ಒಬ್ಬರಿಗೆ 330 ರೂ. ಆಗಿದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ticket Price of newly started KSRTC EV Power Bus ticket price less than Volvo Bus ticket rate
ಮೈಸೂರು, ಬೆಂಗಳೂರು ನಡುವೆ ಕೆಎಸ್ಸಾರ್ಟಿಸಿ ಇವಿ ಪವರ್ ಬಸ್ ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ಬೆಂಗಳೂರು: ಮೈಸೂರು ಹಾಗೂ ಬೆಂಗಳೂರಿನ ನಡುವೆ ಹೊಸದಾಗಿ ವಿದ್ಯುತ್ ಚಾಲಿತ ಬಸ್ ಗಳ ಸೇವೆಯನ್ನು ಕೆಎಸ್ ಆರ್ ಟಿಸಿ ಆರಂಭಿಸಿದೆ. ಈ ಸೇವೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾ. 20ರಂದು ವಿಧಾನಸೌಧದ ಮುಂದೆ ನಡೆದ ಸಮಾರಂಭದಲ್ಲಿ ಉದ್ಘಾಟಿಸಿದರು. ನಂತರ, ವಿದ್ಯುತ್ ಚಾಲಿತ ಬಸ್ಸೊಂದನ್ನು ಏರಿ, ಅದರೊಳಗಿನ ಆಸನಗಳು ಹಾಗೂ ಮತ್ತಿರರ ಸೌಕರ್ಯಗಳನ್ನು ಪರಿಶೀಲಿಸಿದರು.
ಅಂದಹಾಗೆ, ಈ ಬಸ್ ಗಳನ್ನು ಪರಿಸರ ಸ್ನೇಹಿ ಬಸ್ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇವುಗಳಿಗೆ ಇವಿ- ಪವರ್ ಪ್ಲಸ್ ಎಂದು ಹೆಸರಿಡಲಾಗಿದೆ. ಇವುಗಳನ್ನು ಫೇಮ್ - 2 (ಹೈಬ್ರೀಡ್ ಹಾಗೂ ವಿದ್ಯುತ್ ಚಾಲಿತ ವಾಹನಗಳ ತ್ವರಿತ ಅಳವಡಿಕೆ ಹಾಗೂ ತಯಾರಿಕೆ ಯೋಜನೆಯ 2ನೇ ಹಂತ) ಅಡಿಯಲ್ಲ ತಯಾರಿಸಲಾಗಿದೆ. ಹೈದರಾಬಾದ್ ನ ಒಲೆಕ್ಟ್ರಾ ಸಂಸ್ಥೆಯು ಈ ಬಸ್ ಗಳನ್ನು ಅಭಿವೃದ್ಧಿಪಡಿಸಿದೆ.

ಮೈಸೂರು-ಬೆಂಗಳೂರು ಇ-ಬಸ್‌, ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್‌ ರೈಲಿಗೆ ಪ್ರಯಾಣಿಕರು ಫಿದಾ
ಸಾಮಾನ್ಯವಾಗಿ ಮೈಸೂರು - ಬೆಂಗಳೂರು ನಡುವಿನ ಬಸ್ ಗಳಲ್ಲಿ ನಾನ್ ಸ್ಟಾಪ್ (ತಡೆ ರಹಿತ) ಪ್ರಯಾಣಿಸ ಬಯಸುವವರು, ಎ.ಸಿ. ಬಸ್ ಗಳ ಮೊರೆ ಹೋಗುತ್ತಾರೆ. ಕೆಎಸ್ಸಾರ್ಟಿಸಿಯ ಡೀಸೆಲ್ ಚಾಲಿತ ಎಸಿ ಬಸ್ ಗಳಲ್ಲಿ ಈ ಎರಡೂ ನಗರಗಳ ಡಡುವಿನ ಒಂದು ಟ್ರಿಪ್ ಗೆ ತಲಾ 330 ರೂ. ಕೊಡಬೇಕು. ಆದರೆ, ಇವಿ- ಪವರ್ ಪ್ಲಸ್ ಬಸ್ ಗಳಲ್ಲಿ ಪ್ರತಿ ಟಿಕೆಟ್ ಗೆ 300 ರೂ. ಬೆಲೆಯಿದೆ. ಅಲ್ಲಿಗೆ, ಮೈಸೂರು - ಬೆಂಗಳೂರು ನಡುವಿನ ವೋಲ್ವೋ ಬಸ್ ಪ್ರಯಾಣಕ್ಕೆ ಹೋಲಿಸಿದರೆ ಇದರ ಟಿಕೆಟ್ ಬೆಲೆ 30 ರೂ. ಕಡಿಮೆಯಾಗುತ್ತದೆ.

ಸುಖಕರ ಪ್ರಯಾಣ

ಬಸ್ ನಲ್ಲಿ 43 ಸೀಟುಗಳಿವೆ. ಎಲ್ಲವೂ ಪುಶ್ ಬ್ಯಾಕ್ ಸೀಟ್ ಗಳೇ. ವಿದ್ಯುತ್ ಚಾಲಿತ ಬಸ್ ಆಗಿರುವುದರಿಂದ ಬಸ್, ನಿಶ್ಯಬ್ದವಾಗಿ ಚಲಿಸುತ್ತದೆ. ಬಸ್ ನಲ್ಲಿ ವೈಫೈ ಸೌಲಭ್ಯವಿದ್ದು,ಪ್ರಯಾಣಿಕರು ಇದನ್ನು ಉಚಿತವಾಗಿ ಬಳಸಿಕೊಳ್ಳಲು ಅವಕಾಶವಿದೆ. ಅಲ್ಲದೆ ಪ್ರತಿಯೊಂದು ಸೀಟ್ ಗಳಿಗೂ ಯುಎಸ್ ಬಿ ಮೂಲಕ ಮೊಬೈಲ್ ಗಳನ್ನು ಚಾರ್ಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಸ್ ನಲ್ಲಿ ಟಿವಿ ಹಾಗೂ ಮನರಂಜನಾ ಸಾಧನಗಳಿವೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ನಗರಕ್ಕೆ ಬಂತು ಮೊದಲ ಎಲೆಕ್ಟ್ರಿಕ್‌ ಬಸ್‌..! ಮೆಟ್ರೋ ಫೀಡರ್ ಸೇವೆಗೆ ಬಳಕೆ..

ತಂತ್ರಜ್ಞಾನ ವೈಶಿಷ್ಟ್ಯ

ಈ ಬಸ್ ನಲ್ಲಿ ಲೀಥಿಯಂ - ಐಯಾನ್ ಫಾಸ್ಫೇಟ್ ಮಾದರಿಯ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು ಒಮ್ಮೆ ಪೂರ್ತಿ ಚಾರ್ಜ್ ಆಗಲು 2ರಿಂದ 3 ಗಂಟೆ ಆಗುತ್ತದೆ. ಒಮ್ಮೆ ಪೂರ್ತಿ ಚಾರ್ಜ್ ಆದರೆ 300 ಕಿ.ಮೀ. ದೂರವರೆಗೆ ಪ್ರಯಾಣಿಸಬಹುದು. ಈಗಾಗಲೇ ಮೈಸೂರು ಹಾಗೂ ಬೆಂಗಳೂರು ಕಡೆ ಈ ಬಸ್ ಗಾಗಿ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಬಸ್ ಗಳ ಸಂಚಾರ ಹಾಗೂ ನಿರ್ವಹಣೆಯನ್ನು ಈ ಬಸ್ ಗಳನ್ನು ಅಭಿವೃದ್ಧಿಪಡಿಸಿರುವ ಒಲೆಕ್ಟ್ರಾ ಸಂಸ್ಥೆಯ ವಹಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ