ಆ್ಯಪ್ನಗರ

ಪ್ರೌಢಶಾಲೆಯಲ್ಲಿ ಶೌಚಕ್ಕೆ ಬಯಲೇ ಗತಿ!

ಈ ಶಾಲೆಯಲ್ಲಿ ಗಂಡುಮಕ್ಕಳಿಗೆ ಶೌಚಾಲಯವೇ ಇಲ್ಲ, ಮಲಮೂತ್ರ ವಿಸರ್ಜನೆ ಮಾಡಬೇಕೆಂದರೆ ಬಯಲನ್ನೇ ಆಶ್ರಯಿಸಬೇಕಿದೆ. ವಿದ್ಯಾರ್ಥಿಗಳು ಶುದ್ಧ ನೀರು, ಉತ್ತಮ ಶಿಕ್ಷ ಣದಿಂದಲೂ ವಂಚಿತರಾಗಿದ್ದಾರೆ.

Vijaya Karnataka 12 Jun 2018, 5:00 am
* ರಾಮಚಂದ್ರಮೂರ್ತಿ ಚಲ್ಲಹಳ್ಳಿ ಯಲಹಂಕ
Vijaya Karnataka Web toilet in high school
ಪ್ರೌಢಶಾಲೆಯಲ್ಲಿ ಶೌಚಕ್ಕೆ ಬಯಲೇ ಗತಿ!


ಈ ಶಾಲೆಯಲ್ಲಿ ಗಂಡುಮಕ್ಕಳಿಗೆ ಶೌಚಾಲಯವೇ ಇಲ್ಲ, ಮಲಮೂತ್ರ ವಿಸರ್ಜನೆ ಮಾಡಬೇಕೆಂದರೆ ಬಯಲನ್ನೇ ಆಶ್ರಯಿಸಬೇಕಿದೆ. ವಿದ್ಯಾರ್ಥಿಗಳು ಶುದ್ಧ ನೀರು, ಉತ್ತಮ ಶಿಕ್ಷ ಣದಿಂದಲೂ ವಂಚಿತರಾಗಿದ್ದಾರೆ.

ಬೆಂಗಳೂರು ಉತ್ತರ ವ್ಯಾಪ್ತಿಯ ಹೆಸರಘಟ್ಟದ ತೋಟಗೆರೆಯ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ 160ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲಿ ಶುದ್ಧ ಕುಡಿಯುವ ನೀರಿಲ್ಲದೆ ಕೊಳವೆಬಾವಿಯ ನೀರನ್ನೇ ಇಲ್ಲಿನ ಮಕ್ಕಳು ಕುಡಿಯಬೇಕಿದೆ. ಗಂಡು ಮಕ್ಕಳಿಗೆ ಶೌಚಾಲಯವಿಲ್ಲ. ಹೆಣ್ಣುಮಕ್ಕಳು ಶೌಚಾಲಯವಿದ್ದರೂ ನೀರಿನ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಏನೇ ಕೇಳಿದರೂ ಶಿಕ್ಷ ಕರು ಪೋಷಕರಿಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷ ಣ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಗಂಡುಮಕ್ಕಳಿಗೆ ಶೌಚಾಲಯವಿಲ್ಲದೆ ಗಿಡದ ಮರೆಯಲ್ಲಿ ಮೂತ್ರವಿಸರ್ಜನೆ ಮಾಡಿಕೊಂಡು ಬರುತ್ತಾರೆ. ನೈತಿಕ ಶಿಕ್ಷಣ ನೀಡಬೇಕಾದ ಶಾಲೆಯೇ ಬಯಲು ಮಲವಿಸರ್ಜನೆಗೆ ಪ್ರೋತ್ಸಾಹಿಸುತ್ತಿದೆ.

''ಶಾಲೆಗೆ ಕೊಳವೆ ಬಾವಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿದೆ. ಈ ನೀರನ್ನು ಕುಡಿದ ಕಾರಣ ಆಗಾಗ್ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಬಗ್ಗೆ ಮನೆಯವರಿಗೆ ತಿಳಿಸಲಾಗಿದೆ. ಮನೆಯಿಂದ ಒಂದು ಬಾಟಲ್‌ ಫಿಲ್ಟರ್‌ ನೀರು ತಂದರೂ ಅದು ಸಾಕಾಗುವುದಿಲ್ಲ,'' ಎಂದು ಪ್ರೌಢಶಾಲಾ ವಿದ್ಯಾರ್ಥಿಗಳು ಅಲವತ್ತುಕೊಂಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಈ ಬಾರಿ ಫಲಿತಾಂಶ ಶೇ.50ರಷ್ಟೂ ಬಂದಿಲ್ಲ. ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷ ಣ ಬೇಕಾಗಿದೆ.
-ನಾಗರಾಜು, ಪೋಷಕ


ಈ ವರ್ಷ ಶೇ. 40ರಷ್ಟು ಫಲಿತಾಂಶ ಬಂದಿದೆ. ಗಂಡು ಮಕ್ಕಳಿಗೆ ಶೌಚಾಲಯ ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಶುದ್ಧ ಕುಡಿಯುವ ನೀರು ನೀಡುವ ಬಗ್ಗೆ ಪಂಚಾಯಿತಿಗೆ ಪತ್ರ ಬರೆಯಲಾಗಿದೆ.
-ವಿಶ್ವನಾಥ್‌, ಶಾಲೆಯ ಶಿಕ್ಷಕ


ಶಾಲೆ ಹಾಗೂ ಮುಖ್ಯ ಶಿಕ್ಷ ಕರ ವಿರುದ್ಧ ಪೋಷಕರಿಂದ ದೂರು ಬಂದಿದ್ದು ಈ ಬಗ್ಗೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು.
- ನಾರಾಯಣ, ಕ್ಷೇತ್ರ ಶಿಕ್ಷ ಣಾಧಿಕಾರಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ