ಆ್ಯಪ್ನಗರ

ನಿರಂತರ ಸುರಿದ ಮಳೆ, ಹಾಳಾಯಿತು ಟೊಮೇಟೊ ಬೆಳೆ, ಗಗನಕ್ಕೇರಿತು ಬೆಲೆ

​​ಇದೀಗ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮದುವೆ, ಗೃಹಪ್ರವೇಶ ಹಾಗೂ ಇತರೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿವೆ. ಕೆಲವು ದೇವಾಲಯಗಳಲ್ಲಿ ಕೂಡ ಅನ್ನ ಸಂತರ್ಪಣೆ ನಡೆಯುತ್ತಿದೆ. ಹೋಟೆಲ್‌ಗಳಲ್ಲಿ ಕೂಡ ಟೊಮೇಟೊಗೆ ಬೇಡಿಕೆಯಿದೆ.

Vijaya Karnataka 9 Oct 2021, 11:43 am
ಬೆಂಗಳೂರು: ಟೊಮೇಟೊ ದರ ಗಗನಕ್ಕೇರಿದ್ದು, ಕೆಲವೆಡೆ ಸೆಂಚುರಿ ತಲುಪಿದೆ. ಕಳೆದ ಎರಡು ವಾರದಿಂದಲೂ ರಾಜ್ಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ, ನವರಾತ್ರಿ ಹಬ್ಬ ಆರಂಭಕ್ಕೂ ಮೊದಲೇ ಟೊಮೇಟೊ ದರ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ.
Vijaya Karnataka Web ಟೊಮೇಟೊ
ಟೊಮೇಟೊ


ಬೆಂಗಳೂರಿನಲ್ಲಿ ಈಗಾಗಲೇ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸಾಧಾರಣ ಟೊಮೇಟೊ ಕೆ.ಜಿ.ಗೆ 50-60 ರೂ. ಇದ್ದರೆ, ಕೆಲವು ಬಡಾವಣೆಗಳಲ್ಲಿ ಗುಣಮಟ್ಟದ ಟೊಮೇಟೊ ಕೆ.ಜಿ.ಗೆ 100 ರೂ. ತಲುಪಿದೆ. ಅಷ್ಟೇ ಅಲ್ಲ, ಕೆಲವು ಕಡೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹಣ್ಣು ಕೂಡ ಲಭ್ಯವಿಲ್ಲ. ಹಾಪ್‌ಕಾಮ್ಸ್‌ನಲ್ಲಿ 62 ರೂ. ಇದ್ದರೆ, ಕಲಾಸಿಪಾಳ್ಯ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 47-48 ರೂ. ಇದೆ.

ಕೋಲಾರ ಮಾರುಕಟ್ಟೆಯಲ್ಲಿ ದಿಢೀರ್‌ ಏರಿಕೆ ಕಂಡ ಟೊಮೆಟೋ ಬೆಲೆ..! ರೈತರ ಮುಖದಲ್ಲಿ ಸಂತಸ

ಕಳೆದ ಒಂದು ವಾರದ ಹಿಂದೆ ಕೆ.ಜಿ. ಟೊಮೇಟೊ ಕೇವಲ 15-20 ರೂ. ಇತ್ತು. ಇದೀಗ ದಿಢೀರ್‌ ಏರಿಕೆಯಾಗಿದೆ. ಕೋಲಾರ, ಹೊಸಕೋಟೆ, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಲ್ಲಿ ಮಳೆಯಿಂದಾಗಿ ಟೊಮೇಟೊ ಬೆಳೆ ಹಾಳಾಗಿದೆ. ಹಣ್ಣು ಗಿಡದಿಂದ ಉದುರಿ ಕೊಳೆಯಲಾರಂಭಿಸಿದರೆ, ಕೆಲವೆಡೆ ಗಿಡಗಳೇ ನೆಲಕ್ಕುರುಳಿವೆ.

ಬೆಂಗಳೂರಿನ 'ಏರ್‌ಪೋರ್ಟ್ ಸಿಟಿ'ಯಲ್ಲಿ ಮನರಂಜನಾ ಗ್ರಾಮದ ನಿರ್ಮಾಣ ಶುರು!

ಇದೀಗ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮದುವೆ, ಗೃಹಪ್ರವೇಶ ಹಾಗೂ ಇತರೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿವೆ. ಕೆಲವು ದೇವಾಲಯಗಳಲ್ಲಿ ಕೂಡ ಅನ್ನ ಸಂತರ್ಪಣೆ ನಡೆಯುತ್ತಿದೆ. ಹೋಟೆಲ್‌ಗಳಲ್ಲಿ ಕೂಡ ಟೊಮೇಟೊಗೆ ಬೇಡಿಕೆಯಿದೆ. ಆದರೆ ಉತ್ಪಾದನೆ ಕುಂಠಿತಗೊಂಡಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲದೆ ಬೆಲೆಗಳು ಏರಿಕೆಯಾಗಿವೆ. ಈಗಾಗಲೇ ಮಳೆಯಿಂದ ಬೆಳೆ ಹಾಳಾಗಿದೆ. ಇನ್ನೂ ಹೀಗೆಯೇ ಮಳೆ ಬಿದ್ದರೆ ಬೆಳೆ ಮತ್ತಷ್ಟು ಹಾಳಾಗುತ್ತದೆ ಎನ್ನುತ್ತಾರೆ ಮಾರಾಟಗಾರರು.

ಕೊತ್ತಂಬರಿ ಸೊಪ್ಪಿನ ಬೆಲೆಯೂ ದುಬಾರಿ

ಕೊತ್ತಂಬರಿ ಸೊಪ್ಪಿನ ಬೆಳೆಯೂ ಮಳೆಯಿಂದಾಗಿ ಕೊಳೆಯಲಾರಂಭಿಸಿದೆ. ಹೀಗಾಗಿ ಇದರ ಬೆಲೆಯೂ ಏರಿಕೆಯಾಗಿದ್ದು, ಒಂದು ಕಂತೆ ಸೊಪ್ಪಿಗೆ 40-50 ರೂ. ಇದೆ. ಕಳೆದ ವಾರ ಈ ಸೊಪ್ಪು ಕಂತೆಗೆ 20-30 ರೂ. ಮಿತಿಯಲ್ಲಿತ್ತು. ಇದೀಗ ಏರಿಕೆಯಾಗಿದೆ.

ಬೀನ್ಸ್‌ ದರ ಸ್ವಲ್ಪ ಇಳಿಕೆಯಾಗಿದೆ. ಕೆ.ಜಿ.ಗೆ 40-50 ರೂ. ಇದೆ. ಕ್ಯಾರಟ್‌ ಮಾತ್ರ 70 ರೂ. ಇದೆ. ಮೆಂತ್ಯ ಸೊಪ್ಪು ಕಂತೆಗೆ 30 ರೂ., ಸಬ್ಬಸಿಗೆ ಸೊಪ್ಪು 30 ರೂ. ಪಾಲಕ್‌ ಸೊಪ್ಪು 25 ರೂ. ದರವಿದೆ.

ಟೊಮೇಟೊ ದರ

ಚಿಲ್ಲರೆ ದರ 50-100 ರೂ.

ಹಾಪ್‌ಕಾಮ್ಸ್‌- 62 ರೂ.

ಸಗಟು ದರ 47-48 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ