ಆ್ಯಪ್ನಗರ

ನಿಯಮ ಉಲ್ಲಂಘಿಸಿದ ಟ್ರಾಫಿಕ್‌ ಇನ್ಸ್‌ಪೆಕ್ಟರ್‌ಗೆ ದುಪ್ಪಟ್ಟು ದಂಡ: 24 ತಾಸಿನಲ್ಲಿ 22.50 ಲಕ್ಷ ರೂ. ದಂಡ ವಸೂಲಿ

ಮೋಟಾರು ವಾಹನ ತಿದ್ದುಪಡಿ ಕಾಯಿದೆ ದೇಶದೆಲ್ಲೆಡೆ ಕಟ್ಟುನಿಟ್ಟಿನ ಜಾರಿಯಾಗುತ್ತಿದೆ. ರಸ್ತೆ ನಿಯಮಗಳನ್ನು ಉಲ್ಲಂಘಿಸಿದ ಸಂಚಾರಿ ಪೊಲೀಸ್‌ಗೇ ದುಪ್ಪಟ್ಟು ದಂಡ ಹಾಕಲಾಗಿದೆ. ನೋ ಪಾರ್ಕಿಂಗ್‌ ಜಾಗದಲ್ಲಿ ಪಾರ್ಕಿಂಗ್‌ ಮಾಡಿದ್ದ ಪೊಲೀಸ್‌ ದಂಡ ಕಟ್ಟಿದ್ದಾರೆ.

Vijaya Karnataka 13 Sep 2019, 7:11 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web traffic police

ನೋ ಪಾರ್ಕಿಂಗ್‌ ಜಾಗದಲ್ಲಿಪಾರ್ಕಿಂಗ್‌ ಮಾಡಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಸದಾಶಿವನಗರ ಸಂಚಾರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ಗೆ ದುಪ್ಪಟ್ಟು ದಂಡ ವಿಧಿಸಲಾಗಿದೆ.

ಗುರುವಾರದಂದು ಸದಾಶಿವನಗರ ಸಂಚಾರ ಠಾಣೆಗೆ ನಿಯೋಜಿಸಿರುವ ಸರಕಾರಿ ಜೀಪ್‌ನ್ನು ಇನ್ಸ್‌ಪೆಕ್ಟರ್‌ ಶಿವಕುಮಾರ್‌ ಅವರು ಠಾಣೆ ಬಳಿ ನಿಷಿದ್ಧ ಸ್ಥಳದಲ್ಲಿನಿಲ್ಲಿಸಿದ್ದರು. ಇದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಇದನ್ನು ಗಮನಿಸಿದ ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಅವರು, ನಿಯಮಾನುಸಾರ 2 ಪಟ್ಟು ದಂಡ ವಿಧಿಸಲು ಸೂಚಿಸಿದ್ದರು. ಅದರಂತೆ ಜೀಪ್‌ ಬಳಸುತ್ತಿದ್ದ ಶಿವಕುಮಾರ್‌ ಅವರಿಗೆ ನೋ ಪಾರ್ಕಿಂಗ್‌ಗೆ 1 ಸಾವಿರ ರೂ. ಬದಲು 2 ಸಾವಿರ ರೂ. ದಂಡ ವಿಧಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘನೆ ಮಾಡುವ ಪೊಲೀಸರು, ಸರಕಾರಿ ವಾಹನಗಳು ಸೇರಿ ಎಲ್ಲರಿಗೂ ಸಮಾನವಾಗಿ ಕಾನೂನು ಪಾಲನೆಯಾಗಬೇಕು ಎಂದು ಪೊಲೀಸ್‌ ಆಯುಕ್ತರು ಮತ್ತು ಜಂಟಿ ಆಯುಕ್ತರು ಹೇಳಿದ್ದರು.

ಸಂಚಾರ ನಿಯಮ ಉಲ್ಲಂಘಿಘಿಸುವ ಪೊಲೀಸರು ಮತ್ತು ಸರಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದರು.

24 ತಾಸಿನಲ್ಲಿ22.55 ಲಕ್ಷ ರೂ. ದಂಡ
ಸಾರ್ವಜನಿಕರ ವಿರೋಧದ ಕಾರಣ ಭಾರಿ ದಂಡ ಆದೇಶ ಹಿಂಪಡೆಯಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿರುವ ನಡುವೆಯೇ, ನಿಯಮ ಉಲ್ಲಂಘಿಘಿಸುವ ವಾಹನ ಸವಾರರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸೆ.11ರಿಂದ ಸೆ.12ರ ನಡುವೆ 24 ತಾಸುಗಳಲ್ಲಿ6,350 ಕೇಸ್‌ ದಾಖಲಿಸಿ 22 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ