ಆ್ಯಪ್ನಗರ

ವಿದೇಶ ಪ್ರವಾಸ ಹೆಸರಿನಲ್ಲಿ ವಂಚನೆ ಆರೋಪ

ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಸಾರ್ವಜನಿಕರನ್ನು ನಂಬಿಸಿದ ಟ್ರಾವೆಲ್ಸ್‌ ಏಜೆನ್ಸಿಯೊಂದು ಲಕ್ಷಾಂತರ ರೂ. ಪಡೆದು ವಂಚಿಸಿದೆ.

Vijaya Karnataka 18 May 2018, 10:27 am
ಬೆಂಗಳೂರು: ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಸಾರ್ವಜನಿಕರನ್ನು ನಂಬಿಸಿದ ಟ್ರಾವೆಲ್ಸ್‌ ಏಜೆನ್ಸಿಯೊಂದು ಲಕ್ಷಾಂತರ ರೂ. ಪಡೆದು ವಂಚಿಸಿದೆ.
Vijaya Karnataka Web Fraud


ಈ ಸಂಬಂಧ ವಂಚನೆಗೊಳಗಾದ ಲಗ್ಗೆರೆ ನಿವಾಸಿ ಕಾಮರಾಜ್‌ ಎಂಬುವರು ನೀಡಿದ ದೂರು ಆಧರಿಸಿ ಎಚ್‌ಎಸ್‌ಆರ್‌ ಟ್ರಾವೆಲ್ಸ್‌ ವರ್ಲ್ಡ್‌ ವರ್ಡ್‌ ಏಜೆನ್ಸಿಯ ಮಾಲೀಕ ಎನ್‌.ಎಸ್‌.ಗಿರೀಶ್‌ ಎಂಬುವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿದೇಶ ಪ್ರವಾಸಕ್ಕೆ ತೆರಳಲು ಸೂಕ್ತ ಟ್ರಾವೆಲ್ಸ್‌ ಏಜೆನ್ಸಿಗಾಗಿ ಕಾಮರಾಜ್‌ ಅವರು ಆನ್‌ಲೈನ್‌ನಲ್ಲಿ ಹುಡುಕಾಡುತ್ತಿದ್ದರು. ಈ ವೇಳೆ ಎಚ್‌ಎಸ್‌ಆರ್‌ ಲೇಔಟ್‌ 24ನೇ ಮುಖ್ಯರಸ್ತೆ ಪರಂಗಿಪಾಳ್ಯದಲ್ಲಿರುವ ಟ್ರಾವೆಲ್ಸ್‌ ವರ್ಲ್ಡ್‌ ಏಜೆನ್ಸಿ ಲಿಂಕ್‌ ಸಿಕ್ಕಿದೆ. 53 ಸಾವಿರ ರೂ. ಪಾವತಿಸಿದರೆ ಮೇ 23 ರಿಂದ ಮೇ 29ರವರೆಗೆ ಸಿಂಗಾಪುರ್‌ ಮತ್ತು ಮಲೇಶಿಯಾ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು.ಆದರೆ, ಪ್ರವಾಸಕ್ಕಾಗಿ ವೀಸಾ ಪಡೆಯಲು ಮುಂಗಡವಾಗಿ 25 ಸಾವಿರ ರೂ. ಪಾವತಿಸಬೇಕು ಎಂದು ಹೇಳಿ ಹಣ ಪಡೆದು ಕೆಲ ದಿನಗಳ ಬಳಿಕ ಬರಲು ಹೇಳಿದ್ದರು. ಮೇ 8ರಂದು ವೀಸಾ ಪಡೆಯಲು ಕಾಮರಾಜ್‌, ಏಜೆನ್ಸಿ ಕಚೇರಿಗೆ ಹೋದಾಗ ಬಾಗಿಲು ಹಾಕಿತ್ತು. ಆರೋಪಿ ಗಿರೀಶ್‌ ಮೊಬೈಲ್‌ ಫೋನ್‌ ಸ್ವಿಚ್ಡ್‌ ಆಫ್‌ ಆಗಿದೆ. ಅನುಮಾನಗೊಂಡ ಗಿರೀಶ್‌ ಪೂರ್ವಾಪರ ಪರಿಶೀಲನೆ ನಡೆಸಿದಾಗ ಏಜೆನ್ಸಿಯು ಇದೇ ರೀತಿ 25 ಜನರಿಂದ ತಲಾ 25 ಸಾವಿರ ರೂ. ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಕಾಮರಾಜ್‌ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ