ಆ್ಯಪ್ನಗರ

ಟ್ರಿನಿಟಿ ಪಿಲ್ಲರ್‌ ನಿರ್ವಹಣೆಗೆ ಐಐಎಸ್ಸಿ ನಿಗಾ

ಟ್ರಿನಿಟಿ ವೃತ್ತದ ಮೆಟ್ರೊ ಸ್ಟೇಷನ್‌ ಬಳಿಯ ಪಿಲ್ಲರ್‌ನಲ್ಲಿ ತಾಂತ್ರಿಕ ದೋಷ ಎದುರಾಗಿರುವ ಪ್ರಕರಣದಲ್ಲಿ ಐಐಎಸ್ಸಿ ತಜ್ಞರು ಒಂದು ತಿಂಗಳ ಕಾಲ ನಿಗಾ ಇಡಲಿದ್ದಾರೆ.

Vijaya Karnataka 26 Dec 2018, 5:00 am
ಬೆಂಗಳೂರು: ಟ್ರಿನಿಟಿ ವೃತ್ತದ ಮೆಟ್ರೊ ಸ್ಟೇಷನ್‌ ಬಳಿಯ ಪಿಲ್ಲರ್‌ನಲ್ಲಿ ತಾಂತ್ರಿಕ ದೋಷ ಎದುರಾಗಿರುವ ಪ್ರಕರಣದಲ್ಲಿ ಐಐಎಸ್ಸಿ ತಜ್ಞರು ಒಂದು ತಿಂಗಳ ಕಾಲ ನಿಗಾ ಇಡಲಿದ್ದಾರೆ.
Vijaya Karnataka Web trinity pillar under iisc supervision
ಟ್ರಿನಿಟಿ ಪಿಲ್ಲರ್‌ ನಿರ್ವಹಣೆಗೆ ಐಐಎಸ್ಸಿ ನಿಗಾ


ಇತ್ತೀಚೆಗೆ ಇಲ್ಲಿನ ಪಿಲ್ಲರ್‌ನ ವಯಾಡಕ್ಟ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದಿಲ್ಲಿಯಿಂದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಭವಿಷ್ಯದಲ್ಲಿ ಇಂಥ ಸಮಸ್ಯೆ ಮತ್ತೆ ಉದ್ಭವಿಸದಂತೆ ಎಚ್ಚರ ವಹಿಸಲು ಐಐಎಸ್ಸಿ ತಜ್ಞರು ಶಾಶ್ವತ ಪರಿಹಾರ ಸೂಚಿಸಲಿದ್ದಾರೆ.

ಇದಕ್ಕಾಗಿ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ.ಜೆ.ಎಂ.ಚಂದ್ರಕಿಶನ್‌ ಅವರು ಬಿಎಂಆರ್‌ಸಿಎಲ್‌ಗೆ ತಾಂತ್ರಿಕ ಪರಿಹಾರಗಳನ್ನು ಸೂಚಿಸಲಿದ್ದಾರೆ. ಇದಕ್ಕಾಗಿ ಅವರು ತಿಂಗಳ ಕಾಲ ನಿಗಾ ಇಡಲಿದ್ದು, ಯಾವ ತೊಂದರೆಯೂ ಮರುಕಳಿಸದಂತೆ ಕೆಲ ಮುನ್ನೆಚ್ಚರಿಕೆ ಅಂಶಗಳನ್ನು ವರದಿ ರೂಪದಲ್ಲಿ ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಿದ್ದಾರೆ.

ಟ್ರಿನಿಟಿ ವೃತ್ತದ ಬಳಿಯ ಪಿಲ್ಲರ್‌ನಲ್ಲಿ ಕಂಡು ಬಂದ ಸಮಸ್ಯೆಯ ಆಳವನ್ನು ತಿಳಿಯಲು 32 ಸೆನ್ಸಾರ್‌ ಉಪಕರಣಗಳನ್ನು ಬಳಸಲಾಗುತ್ತದೆ. ಇವು ತಿಂಗಳ ಕಾಲ ಕಾರ್ಯಾಚರಣೆ ನಡೆಸಲಿದ್ದು, ಪಿಲ್ಲರ್‌ಗಳ ಆಕಾರ ಹಾಗೂ ರೈಲು ಓಡಾಟದ ವೇಳೆ ಕಂಡುಬರುವ ತಾಂತ್ರಿಕ ಅಂಶಗಳನ್ನು ಪತ್ತೆ ಹಚ್ಚಲಾಗುತ್ತದೆ. ಇದು ಮುಖ್ಯವಾಗಿ ಪಿಲ್ಲರ್‌ಗಳ ಮೇಲೆ ಭಾರ ಬೀಳುವಿಕೆ, ಮಾರ್ಗದ ಮೇಲಿನ ಒತ್ತಡದ ಮಾಹಿತಿಯನ್ನು ನಿಖರವಾಗಿ ತಿಳಿಯಬಹುದು ಎಂಬುದು ಬಿಎಂಆರ್‌ಸಿಎಲ್‌ ನಂಬಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ