ಆ್ಯಪ್ನಗರ

ಮೆಟ್ರೊದಲ್ಲಿ ಹಿಂದಿ ಹೇರಿಕೆ: ಟ್ವಿಟರ್‌ನಲ್ಲಿ ವ್ಯಾಪಕ ಆಕ್ರೋಶ

ನಮ್ಮ ಮೆಟ್ರೊದಲ್ಲಿ ಅನಗತ್ಯವಾಗಿ ಹಿಂದಿ ಬಳಕೆ ವಿರುದ್ಧ ಕನ್ನಡಪರ ಸಂಘಟನೆಗಳು ಶಾಂತಿ ನಗರ ಟಿಟಿಎಂಸಿಯಲ್ಲಿರುವ ಬಿಎಂಆರ್‌ಸಿಎಲ್‌ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಟ್ವೀಟರ್‌ನಲ್ಲಿ ಮೆಟ್ರೊದಲ್ಲಿ ಹಿಂದಿ ಹೇರಿಕೆ ವಿರುದ್ಧ ‘ನಮ್ಮ ಮೆಟ್ರೊ ಹಿಂದೆ ಬೇಡ’ ಎಂಬ ಟ್ರೆಂಡ್‌ನ್ನು ಮಾಡಲಾಗಿದ್ದು, ದಿನವಿಡೀ ಬೆಂಗಳೂರು ವ್ಯಾಪ್ತಿಯ ಟ್ರೆಂಡಿಂಗ್‌ ನಂಬರ್‌ 1 ಸ್ಥಾನದಲ್ಲಿ ಇತ್ತು. ಸಾವಿರಾರು ಜನ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್‌ ಮಾಡಿದರು.

ವಿಕ ಸುದ್ದಿಲೋಕ 21 Jun 2017, 8:39 pm
ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಅನಗತ್ಯವಾಗಿ ಹಿಂದಿ ಬಳಕೆ ವಿರುದ್ಧ ಕನ್ನಡಪರ ಸಂಘಟನೆಗಳು ಶಾಂತಿ ನಗರ ಟಿಟಿಎಂಸಿಯಲ್ಲಿರುವ ಬಿಎಂಆರ್‌ಸಿಎಲ್‌ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಟ್ವೀಟರ್‌ನಲ್ಲಿ ಮೆಟ್ರೊದಲ್ಲಿ ಹಿಂದಿ ಹೇರಿಕೆ ವಿರುದ್ಧ ‘ನಮ್ಮ ಮೆಟ್ರೊ ಹಿಂದೆ ಬೇಡ’ ಎಂಬ ಟ್ರೆಂಡ್‌ನ್ನು ಮಾಡಲಾಗಿದ್ದು, ದಿನವಿಡೀ ಬೆಂಗಳೂರು ವ್ಯಾಪ್ತಿಯ ಟ್ರೆಂಡಿಂಗ್‌ ನಂಬರ್‌ 1 ಸ್ಥಾನದಲ್ಲಿ ಇತ್ತು. ಸಾವಿರಾರು ಜನ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್‌ ಮಾಡಿದರು.
Vijaya Karnataka Web twitterati rises against hindi hegemony in namma metro
ಮೆಟ್ರೊದಲ್ಲಿ ಹಿಂದಿ ಹೇರಿಕೆ: ಟ್ವಿಟರ್‌ನಲ್ಲಿ ವ್ಯಾಪಕ ಆಕ್ರೋಶ


ಚೆನ್ನೈ ಮೆಟ್ರೊನಲ್ಲಿ ತಮಿಳು ಹಾಗೂ ಇಂಗ್ಲಿಷ್‌ ಭಾಷೆ ಮಾತ್ರ ಇದೆ. ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಿಂದಿ ಹಾಗೂ ಇಂಗ್ಲೀಷ್‌ ಮಾತ್ರ ಇದೆ. ಆದರೆ, ಬೆಂಗಳೂರು ಮೆಟ್ರೊದಲ್ಲಿ ಕನ್ನಡ, ಇಂಗ್ಲಿಷ್‌ ಜತೆಗೆ ಹಿಂದಿ ಭಾಷೆ ಏಕೆ ಎಂದು ಸಾವಿರಾರು ಜನ ಪ್ರಶ್ನೆ ಮಾಡಿದ್ದಾರೆ.

@CMofKarnataka ಬೆಂಗಳೂರಿನಲ್ಲಿ ಓಡಾಡುವ "ನಮ್ಮ ಮೆಟ್ರೋ"ನಲ್ಲಿ ಹಿಂದಿ ಬೇಕಿಲ್ಲ. #NammaMetroHindiBeda — TejaswiniGowda☄ (@itejaamruth) June 20, 2017 ಅಲ್ಲದೇ, ಕೆಲವು ಕಡೆ ಹಿಂದಿ ಹಾಗೂ ಇಂಗ್ಲಿಷ್‌ ಮಾತ್ರ ಬಳಕೆ ಮಾಡಲಾಗುತ್ತಿದ್ದು, ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌, ರಾಜ್ಯ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆದೇಶವಿಲ್ಲದಿದ್ದರೂ ಹಿಂದಿ ಬಳಕೆ !
ಇದೇ ವೇಳೆ ಬಿಎಂಆರ್‌ಸಿಎಲ್‌ ಎಂ.ಡಿ ಪ್ರದೀಪ್‌ ಕರೋಲಾ ಅವರಿಗೆ ಪತ್ರ ಬರೆದಿರುವ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ‘ಮೆಟ್ರೊ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಕನ್ನಡ ಹಾಗೂ ಇಂಗ್ಲಿಷ್‌ ಭಾಷೆ ಮಾತ್ರ ಬಳಕೆ ಮಾಡಬೇಕು,’ ಎಂದು ಆಗ್ರಹಿಸಿದ್ದಾರೆ.

‘ಹಿಂದಿ ಬಳಕೆ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ, ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಹಿಂದಿ ಬಳಕೆ ಕುರಿತು ಯಾವುದೇ ನಿರ್ದೇಶನ ನೀಡಿಲ್ಲ. ಆದರೂ, ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಿ ಹಿಂದಿ ಬಳಕೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ನಿಮ್ಮಿಷ್ಟಕ್ಕೆ ಬಂದಂತೆ ಭಾಷೆಯನ್ನು ಬಳಸಿಕೊಳ್ಳಲು ಮೆಟ್ರೋವನ್ನು ಖಾಸಗಿ ಸ್ವತ್ತಲ್ಲ. ಕೂಡಲೇ ಹಿಂದಿ ಭಾಷೆಯನ್ನು ತೆರವುಗೊಳಿಸಿ,’ ಎಂದು ನಾರಾಯಣಗೌಡ ಪತ್ರದಲ್ಲಿ ಕೋರಿದ್ದಾರೆ.

ಕೆಲವು ಟ್ವೀಟ್‌ಗಳು ಹೀಗಿವೆ ನೋಡಿ:

ಬೆಂಗಳೂರಿಗೂ ಕನ್ನಡಕ್ಕೂ ಇರುವ ಕರುಳಬಳ್ಳಿ ಸಂಬಂಧ ಎಂದಿಗೂ ಅಳಿಸಲಾಗದ್ದು. ಕನ್ನಡವೇ ಇಲ್ಲಿನ ಸಾರ್ವಭೌಮ ಭಾಷೆ. ಕನ್ನಡತನವೇ ನಮ್ಮ ಭಾರತೀಯತೆ. #NammaMetroHindiBeda — Vasant Shetty (@vasantshetty81) June 20, 2017
ಭಾರತ ಸರಕಾರ ದುಡ್ಡು ಕೊಟ್ಟರೇನಂತೆ, ಭಾರತ ಸರಕಾರ ಎಲ್ಲರೂ ಸೇರಿ ಮಾಡಿಕೊಂಡ ಸರಕಾರ. ಅದು ಹಿಂದಿ ಸರ್ಕಾರವಲ್ಲ. #NammaMetroHindiBeda #NammaMetroKannadaSaaku — Ganesh Chetan (@ganeshchetan) June 20, 2017

ನಮ್ಮ ಮೆಟ್ರೋಲಿ ಇವತ್ತು ಹಿಂದೀ ಬಿಟ್ರೆ ನಾಳೆ ಅದು ಬಿಎಂಟಿಸಿಯನ್ನೂ ಆಪೋಶನ ತೊಗೊಳ್ಳುತ್ತೆ. ಕರುಳಿಗೆ ಹಿಡಿದ ಕ್ಯಾನ್ಸರ್ ಹೃದಯ ತಾಕೋಲ್ವೇ? #NammaMetroHindiBeda — Anand G (@Anand_GJ) June 20, 2017

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ