ಆ್ಯಪ್ನಗರ

ಜಡ್ಜ್‌ಗೆ ಬಾಂಬ್‌ ಬೆದರಿಕೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌..! ಪತ್ರದ ಹಿಂದೆ ಕೌಟುಂಬಿಕ ಕಲಹದ ಶಂಕೆ, ಇಬ್ಬರ ವಶ

ಡ್ರಗ್ಸ್‌ ಕೇಸ್‌ನಲ್ಲಿ ಜೈಲು ಸೇರಿರುವ ನಟಿಯರು ಹಾಗೂ ಡಿಜೆ ಹಳ್ಳಿ ಗಲಭೆಯ ಆರೋಪಿಗಳಿಗೆ ಜಾಮೀನು ನೀಡುವಂತೆ ವಿಶೇಷ ನ್ಯಾಯಾಧೀಶರಿಗೆ ಸೋಮವಾರ ಬಾಂಬ್ ಬೆದರಿಕೆ ಪತ್ರ ಬರೆದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಕೌಟುಂಬಿಕ ಕಲಹದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Vijaya Karnataka Web 20 Oct 2020, 5:59 pm
ಬೆಂಗಳೂರು: ಡ್ರಗ್ಸ್‌ ಕೇಸ್‌ನಲ್ಲಿ ಜೈಲು ಸೇರಿರುವ ನಟಿಯರು ಹಾಗೂ ಡಿಜೆ ಹಳ್ಳಿ ಗಲಭೆಯ ಆರೋಪಿಗಳಿಗೆ ಜಾಮೀನು ನೀಡುವಂತೆ ವಿಶೇಷ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ.
Vijaya Karnataka Web two held for bomb threat to ndps judge in karnataka
ಜಡ್ಜ್‌ಗೆ ಬಾಂಬ್‌ ಬೆದರಿಕೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌..! ಪತ್ರದ ಹಿಂದೆ ಕೌಟುಂಬಿಕ ಕಲಹದ ಶಂಕೆ, ಇಬ್ಬರ ವಶ


ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಕೌಟುಂಬಿಕ ಕಲಹ ಬಾಂಬ್‌ ಬೆದರಿಕೆ ಪತ್ರಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ರಕ್ತಸಂಬಂಧಿಯನ್ನು ತೊಂದರೆಯಲ್ಲಿ ಸಿಲುಕಿಸುವುದಕ್ಕೆ ಅವರ ಎದುರಾಳಿ ಕುಟುಂಬ ಈ ಕೃತ್ಯ ಎಸಗಿದೆ ಎಂದು ಹೇಳಲಾಗಿದೆ. ಆದರೆ, ಹೆಚ್ಚಿನ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಪ್ರಕರಣದ ವಿಚಾರಣೆಗಾಗಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಬೆಂಗಳೂರಿಗೆ ಕರೆತರಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡ್ರಗ್ಸ್‌ ಮಾಫಿಯಾ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಧೀಶರಿಗೆ ಸೋಮವಾರ ಬೆದರಿಕೆ ಪತ್ರ ಹಾಗೂ ಡಿಟೊನೇಟರ್‌ ಒಳಗೊಂಡ ಪಾರ್ಸಲ್‌ ಬಂದಿತ್ತು. ಪತ್ರದಲ್ಲಿ ಇಬ್ಬರು ನಟಿಯರು ಹಾಗೂ ಡಿಜೆ ಹಳ್ಳಿ ಗಲಭೆಯಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಜಾಮೀನು ನೀಡುವಂತೆ ಒತ್ತಾಯಿಸಿದ್ದರು.

ಸಂಜನಾ-ರಾಗಿಣಿ ಜಾಮೀನಿಗಾಗಿ ಬಾಂಬ್‌ ಬೆದರಿಕೆ ಪತ್ರ! ಕೃತ್ಯದ ಹಿಂದೆ ಉಗ್ರ ಸಂಘಟನೆ ಕೈವಾಡ?

ತಮ್ಮ ಬೇಡಿಕೆ ಈಡೇರಿಸದಿದ್ದರೆ ಬಾಂಬ್‌ ಸ್ಫೋಟಿಸುವುದಾಗಿ ಪತ್ರ ಬರೆಯಲಾಗಿತ್ತು. ಪತ್ರದಲ್ಲಿ ಉಗ್ರ ಸಂಘಟನೆಯ ಹೆಸರನ್ನು ಉಲ್ಲೇಖಿಸಲಾಗಿತ್ತು. ತನಿಖೆ ನಡೆಸಿದ ಬಳಿಕ ಪಾರ್ಸಲ್‌ನಲ್ಲಿ ಯಾವುದೇ ಬಾಂಬ್‌ ಇಲ್ಲ ಎಂದು ಗೊತ್ತಾಗಿದೆ. ಕೆಲವು ವೈರ್‌ಗಳಿಂದ ಮಾಡಿದ್ದ ಡಿಟೋನೇಟರ್‌ ತರ ಕಾಣುವ ಆಕೃತಿಯನ್ನು ಪಾರ್ಸಲ್‌ ಕಳಿಸಲಾಗಿತ್ತು.

ಅರೆಸ್ಟ್‌ ಆಗುವ ಕೆಲವೇ ದಿನಗಳ ಮುನ್ನ ಗೂಗಲ್‌ನಲ್ಲಿ ಸಂಜನಾ ಗಲ್ರಾನಿ ಸರ್ಚ್‌ ಮಾಡಿದ್ದು ಏನು?

ಪೊಲೀಸರು ಪತ್ರದ ಬೆನ್ನತ್ತಿದಾಗ ಅದು ತುಮಕೂರು ಜಿಲ್ಲೆಯ ಚೇಳೂರಿನಿಂದ ಕಳುಹಿಸಲಾಗಿದೆ ಎಂಬುದು ಗೊತ್ತಾಗಿದೆ. ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ