ಆ್ಯಪ್ನಗರ

ಕೇರಳಕ್ಕಿಂತ ಬಿಎಂಟಿಸಿ ವಾಯುವಜ್ರ ಪ್ರಯಾಣ ಮೂರು ಪಟ್ಟು ದುಬಾರಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್‌) ಹಾಗೂ ಬೆಂಗಳೂರು ನಗರದ ನಡುವೆ ಸಂಚರಿಸುವ ಬಿಎಂಟಿಸಿ ವಾಯುವಜ್ರ ಬಸ್‌ ಟಿಕೆಟ್‌ ದರ ಬಲು ದುಬಾರಿ ಎಂಬ ಆಕ್ಷೇಪ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

Vijaya Karnataka 14 Feb 2019, 12:06 pm
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್‌) ಹಾಗೂ ಬೆಂಗಳೂರು ನಗರದ ನಡುವೆ ಸಂಚರಿಸುವ ಬಿಎಂಟಿಸಿ ವಾಯುವಜ್ರ ಬಸ್‌ ಟಿಕೆಟ್‌ ದರ ಬಲು ದುಬಾರಿ ಎಂಬ ಆಕ್ಷೇಪ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.
Vijaya Karnataka Web Bus Tickets


ಸುಸಜ್ಜಿತ ಬಸ್‌ ಸೇವೆಗೆ ಬಿಎಂಟಿಸಿ ಹೆಸರಾದರೂ ಬಸ್‌ ಪ್ರಯಾಣದ ದರದ ಬಗ್ಗೆ ಮೊದಲಿನಿಂದಲೂ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಬಿಎಂಟಿಸಿ ಬಸ್‌ ಸೇವೆ ದುಬಾರಿ ಎನಿಸಿದೆ. ಈ ಬಗ್ಗೆ ಪ್ರಯಾಣಿಕರೊಬ್ಬರು ಕೇರಳ ಹಾಗೂ ಬಿಎಂಟಿಸಿ ಬಸ್‌ ಪ್ರಯಾಣದ ಟಿಕೆಟ್‌ ದರ ಹೋಲಿಕೆ ಮಾಡಿ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.


''ಕೇರಳದ ಕೊಚ್ಚಿಯಿಂದ 30 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಎಸಿ ಬಸ್‌ನಲ್ಲಿ 69 ರೂ. ಪ್ರಯಾಣ ಶುಲ್ಕವಿದೆ. ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಿಂದ ಬಿಎಂಟಿಸಿ ವಾಯುವಜ್ರ ಬಸ್‌ನಲ್ಲಿ 40 ಕಿ.ಮೀ ದೂರದ ಪ್ರಯಾಣಕ್ಕೆ 234 ರೂ. ಪ್ರಯಾಣ ಟಿಕೆಟ್‌ ದರ ವಿಧಿಸಲಾಗುತ್ತಿದೆ. ಎರಡೂ ಕಡೆ ಲೋಫ್ಲೋರ್‌ ಎಸಿ ಬಸ್‌ಗಳೇ ಆಗಿವೆ. ಆದರೂ ಏಕೆ ಇಷ್ಟೊಂದು ದರ ವ್ಯತ್ಯಾಸ. ಬಿಎಂಟಿಸಿಯು ನಷ್ಟದಲ್ಲಿದೆ ಎಂಬ ಕಾರಣಕ್ಕೆ ಅಧಿಕ ಪ್ರಯಾಣ ದರ ನಿಗದಿಪಡಿಸಲಾಗುತ್ತಿದೆಯೇ. ಈ ಬಗ್ಗೆ ಆತ್ಮಾವಲೋಕದ ಅಗತ್ಯವಿದೆ,'' ಎಂದು ಕೆ.ಆರ್‌.ಬಾಲಸುಬ್ರಮಣ್ಯಂ ಎಂಬುವರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇವಲ 10 ಕಿ.ಮೀ ಹೆಚ್ಚುವರಿ ದೂರಕ್ಕೆ 165 ರೂ. ಜಾಸ್ತಿ ದರ ಸಂಗ್ರಹಿಸಲಾಗುತ್ತಿದೆ. ಏರ್‌ಪೋರ್ಟ್‌ನಿಂದ ಮೂವರು ಬಿಎಂಟಿಸಿ ವಾಯು ವಜ್ರದಲ್ಲಿ ಬೆಂಗಳೂರು ನಗರಕ್ಕೆ ಪ್ರಯಾಣಿಸಿದರೆ ಸುಮಾರು 702 ರೂ. ಆಗಲಿದೆ. ಇಷ್ಟೇ ವೆಚ್ಚದಲ್ಲಿ ಟ್ಯಾಕ್ಸಿಯಲ್ಲೇ ಮನೆ ತಲುಪಬಹುದು ಎಂದು ಪ್ರಯಾಣಿಕರು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ