ಆ್ಯಪ್ನಗರ

ಸಿಎಂ ಪ್ರಮಾಣ ವಚನ: ಮೆಟ್ರೋ ನಿಲ್ದಾಣ ಫುಲ್‌ ರಶ್‌

ಪ್ರಮಾಣ ವಚನ ಕಾರ್ಯಕ್ರಮ ಮುಗಿಸಿ, ಮೆಟ್ರೋ ಏರಿದ ಬೆಂಬಲಿಗರನ್ನು ನಿಯಂತ್ರಿಸಲು ಮೆಟ್ರೋ ಸಿಬ್ಬಂದಿ ನಿಯಂತ್ರಿಸಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

TIMESOFINDIA.COM 24 May 2018, 2:39 pm
ಬೆಂಗಳೂರು: ವಿಧಾನಸೌಧ ಮೆಟ್ರೋ ನಿಲ್ದಾಣ ಬುಧವಾರ ಸಂಜೆ ಅಕ್ಷರಶಃ ಜನಜಾತ್ರೆಯಿಂದ ತುಂಬಿತ್ತು.
Vijaya Karnataka Web metro


ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ವೇಳೆ ಅತಿ ಹೆಚ್ಚು ಮಂದಿ ಮೆಟ್ರೋ ಬಳಕೆ ಮಾಡಿದ್ದು, ದಿಢೀರನೆ ಬಂದ ಜನಸಾಗರವನ್ನು ನಿಯಂತ್ರಿಸಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಂದ ಬೆಂಬಲಿಗರು ಮೆಟ್ರೋ ಪ್ರಯಾಣಕ್ಕೆ ಮೊರೆ ಹೋಗಿದ್ದಾರೆ.

ಕಬ್ಬನ್‌ ಪಾರ್ಕ್‌ ಹಾಗೂ ವಿಧಾನಸೌಧ ನೆಲಮಳಿಗೆ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್‌ ಖರೀದಿಯೇ ಕಷ್ಟವಾದ ಸನ್ನಿವೇಶ ಎದುರಾಗಿದ್ದು, ಪ್ಲ್ಯಾಟ್‌ ಫಾರಂ ಪ್ರವೇಶ ಗೇಟ್‌ಗಳಲ್ಲಿ ನೂಕನುಗ್ಗಲು ಉಂಟಾಗಿದೆ. ಅಲ್ಲದೆ ಅನೇಕ ಪ್ರಯಾಣಿಕರು ಟಿಕೆಟ್‌ ಇಲ್ಲದೆ ಪ್ರಯಾಣಿಸಿ, ಭದ್ರತಾ ಸಿಬ್ಬಂದಿಗಳೊಂದಿಗೆ ಕಾದಾಟಕ್ಕೂ ಇಳಿದಿದ್ದಾರೆ. ಇದಲ್ಲದೆ ಮೆಟ್ರೋ ನಿಲ್ದಾಣಗಳಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂದು ಮೆಟ್ರೋ ಪ್ರಯಾಣಿಕರು ಮಾಹಿತಿ ಹಂಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ