ಆ್ಯಪ್ನಗರ

ಬೆಂಗಳೂರು ನಗರದ ಮರಗಳಿಗೆ ಜೀವ ಕೊಡುತ್ತಿರುವ ಬಿ.ಪ್ಯಾಕ್‌ನ ಸ್ವಯಂ ಸೇವಕರು

ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆಯಿಂದ ಮರಗಳ ಮಾರಣಹೋಮ ನಡೆಯುತ್ತಿದ್ದರೆ, ಈ ತಂಡ ಉಳಿದುಕೊಂಡಿರುವ ಮರಗಳ ರಕ್ಷಣೆಗೆ ನಿಂತಿದೆ.

Vijaya Karnataka 16 Oct 2019, 2:54 pm
ಬೆಂಗಳೂರು: ಬಿ.ಪ್ಯಾಕ್‌ ಸಂಸ್ಥೆಯ ಸ್ವಯಂ ಸೇವಕರು ಬುಡದ ಸುತ್ತಲೂ ಡಾಂಬರು, ಕಾಂಕ್ರೀಟು ಹಾಕಲ್ಪಟ್ಟರುವ ಮರಗಳನ್ನು ಗುರುತಿಸಿ, ಪೋಷಿಸುವ ಕೆಲಸ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.
Vijaya Karnataka Web ಮರಗಳಿಗೆ ಜೀವ


ಉದ್ಯಾನನಗರಿಯಲ್ಲಿ ಮರಗಳ ಬುಡದ ಸುತ್ತಲೂ ಕಾಂಕ್ರೀಟ್‌ ಮತ್ತು ಡಾಂಬರು ಹಾಕಿ, ಅವುಗಳ ಜೀವ ತೆಗೆಯಲಾಗುತ್ತಿದೆ. ಬಿಬಿಎಂಪಿಯ ಅರಣ್ಯ ವಿಭಾಗವು ಮಳೆ, ಗಾಳಿಗೆ ಬಿದ್ದ ಮರಗಳನ್ನು ತೆರವುಗೊಳಿಸುವುದಷ್ಟೇ ತನ್ನ ಕೆಲಸವೆನ್ನುತ್ತಿದೆ. ಹೀಗಾಗಿ, ಮರಗಳ ನಿರ್ವಹಣೆಗೆ ಪಾಲಿಕೆ ಒತ್ತು ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿ.ಪ್ಯಾಕ್‌ ಸಂಸ್ಥೆಯ ಸ್ವಯಂ ಸೇವಕರು ಮರಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ''ಡಾಂಬರು ಮತ್ತು ಕಾಂಕ್ರೀಟ್‌ ಹೊದಿಕೆಯನ್ನು ಕಿತ್ತೊಗೆದು ಪಾತಿ ಮಾಡುತ್ತಿದ್ದೇವೆ. ಹಳೆಯ ಇಟ್ಟಿಗೆ ಕಲ್ಲುಗಳಿಂದ ಬುಡದ ಸುತ್ತಲೂ ಕಟ್ಟೆ ನಿರ್ಮಿಸಿ, ಮಳೆ ನೀರು ನಿಲ್ಲುವಂತೆ ಮಾಡಲಾಗುತ್ತಿದೆ. ಕೆಂಪು ಮಣ್ಣು, ಬೇವಿನ ಹಿಂಡಿ ಹಾಕಿ ಸಮೃದ್ಧ ವಾಗಿ ಬೆಳೆಯುವಂತೆ ನೋಡಿ ಕೊಳ್ಳುತ್ತಿದ್ದೇವೆ,'' ಎಂದು ಬಿ.ಪ್ಯಾಕ್‌ನ ಸಿವಿಕ್‌ ಲೀಡರ್‌ ಸತ್ಯವಾಣಿ ಮಾಹಿತಿ ನೀಡಿದ್ದಾರೆ.

''ಕೆ.ಆರ್‌.ಪುರದ ವಿಜ್ಞಾನನಗರ ವಾರ್ಡ್‌ನಲ್ಲಿಈವರೆಗೆ 30 ಮರಗಳ ಬುಡದ ಸುತ್ತಲೂ ಪಾತಿ ಮಾಡಿ, ಮಣ್ಣು ಮತ್ತು ಗೊಬ್ಬರ ಹಾಕಲಾಗಿದೆ. ಪ್ರತಿಯೊಂದು ಮರಕ್ಕೂ ಬುಡದಿಂದ ಐದಾರು ಅಡಿಯಷ್ಟು ಎತ್ತರದವರೆಗೆ ಸುಣ್ಣ ಬಳಿದಿದ್ದೇವೆ. ಇದರಿಂದ ಮರಕ್ಕೆ ಗೆದ್ದಲು ಹಿಡಿಯುವುದಿಲ್ಲ. ಒಂದು ಮರದ ಬುಡದ ಸುತ್ತಲೂ ಹಾಕಿರುವ ಡಾಂಬರು, ಕಾಂಕ್ರೀಟ್‌ ತೆಗೆಯಲು, ಪಾತಿ ಮಾಡಿ ಗೊಬ್ಬರ ಹಾಕಲು ತಲಾ 500-600 ರೂ. ಖರ್ಚಾಗುತ್ತದೆ. ಈವರೆಗೆ ಸುಮಾರು 25 ಸಾವಿರ ರೂ. ವೆಚ್ಚವಾಗಿದೆ. ಬಿ.ಪ್ಯಾಕ್‌ ಸಂಸ್ಥೆಯಿಂದಲೂ ನೆರವು ಸಿಕ್ಕಿದೆ. ಮಲ್ಲೇಶ್ವರ, ವಿದ್ಯಾರಣ್ಯ ಪುರದಲ್ಲೂಸಂಸ್ಥೆಯ ಸ್ವಯಂ ಸೇವಕರು ಇದೇ ರೀತಿ ಮರಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ