ಆ್ಯಪ್ನಗರ

ಸಾಯಿ ಬಡಾವಣೆಗೆ ತಪ್ಪದ ನೆರೆ ಕಾಟ; ಎರಡೂವರೆ ತಿಂಗಳ ಅವಧಿಯಲ್ಲಿ 3 ಬಾರಿ ಪ್ರವಾಹ!

ಸಾಯಿ ಬಡಾವಣೆಯಲ್ಲಿ ಸೋಮವಾರ ಸುರಿದ ಸಾಧಾರಣ ಮಳೆಗೆ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿ ಸುಮಾರು ಮೂರು ಅಡಿಯಷ್ಟು ಎತ್ತರ ನೀರು ನಿಂತಿತ್ತು. ರಸ್ತೆಗಳೂ ಹೊಳೆಯಂತಾಗಿತ್ತು.

Vijaya Karnataka Web 3 Aug 2022, 10:08 am

ಹೈಲೈಟ್ಸ್‌:

  • ಸಾಯಿ ಬಡಾವಣೆ ಎರಡೂವರೆ ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಜಲಾವೃತ
  • ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ
  • ನಿವಾಸಿಗಳು ಹೊರಗೂ ಹೋಗಲಾರದೆ, ಮನೆಯೊಳಗೂ ಇರಲಾಗದೆ ಪರದಾಡುವ ಪರಿಸ್ಥಿತಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಮಳೆ
ಸಾಂದರ್ಭಿಕ ಚಿತ್ರ
ಕೆ.ಆರ್‌.ಪುರ: ಕ್ಷೇತ್ರದ ಹೊರಮಾವು ವಾರ್ಡ್‌ನ ಸಾಯಿ ಬಡಾವಣೆಗೆ ನೆರೆ ಕಾಟದಿಂದ ಮುಕ್ತಿ ಸಿಗದಂತಾಗಿದೆ. ಎರಡೂವರೆ ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಬಡಾವಣೆ ಜಲಾವೃತಗೊಂಡಿದೆ.
ಮಳೆಗಾಲ ಆರಂಭಕ್ಕೆ ಮುನ್ನ ಧಾರಾಕಾರ ಮಳೆಗೆ ಮೇ 18ರಂದು ಬಡಾವಣೆ ಜಲಾವೃತಗೊಂಡಿತ್ತು. ಬಳಿಕ ಜೂನ್‌ 18ರಂದು ಮತ್ತೊಮ್ಮೆ ಮನೆಗಳಿಗೆ ನುಗ್ಗಿತ್ತು. ಮೇ ತಿಂಗಳಲ್ಲಿ ಪ್ರವಾಹ ಉಂಟಾದಾಗ ಅಧಿಕಾರಿಗಳ ದಂಡು ಭೇಟಿ ಕೊಟ್ಟು, ಸಮಸ್ಯೆ ಪರಿಹಾರ ಮಾಡುವ ಭರವಸೆ ನೀಡಿತ್ತು. ಜೂನ್‌ನಲ್ಲಿ ಮತ್ತೆ ಪ್ರವಾಹ ಉಂಟಾದಾಗ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟಿದ್ದರು. ಆದರೆ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ಕಿಲ್ಲ.
ತುಮಕೂರು: ಅಕ್ಕ-ತಂಗಿ ಕೆರೆ ಭರ್ತಿ, ಮುಳುಗಡೆ ಆತಂಕದಲ್ಲಿ ಬಟವಾಡಿಯ ಹೊಸಳಯ್ಯನ ತೋಟದ ಮನೆಗಳು
ಸಾಯಿ ಬಡಾವಣೆಯಲ್ಲಿ ಸೋಮವಾರ ಸುರಿದ ಸಾಧಾರಣ ಮಳೆಗೆ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿ ಸುಮಾರು ಮೂರು ಅಡಿಯಷ್ಟು ಎತ್ತರ ನೀರು ನಿಂತಿತ್ತು. ರಸ್ತೆಗಳೂ ಹೊಳೆಯಂತಾಗಿತ್ತು.
Bhatkal Rains | ಭಟ್ಕಳ: ನಾಲ್ವರ ಬಲಿ ಪಡೆದು ತಣ್ಣಗಾದ ರಣಭೀಕರ ಮಳೆ, ಹಲವು ಕಡೆ ಜನರ ಸ್ಥಳಾಂತರ
ಸೋಮವಾರ ಸಂಜೆವರೆಗೂ ಎರಡು ಮೋಟಾರ್‌ ಪಂಪ್‌ ಬಳಸಿ ನೀರನ್ನು ಹೊರಹಾಕಲಾಯಿತು. ಜೆಸಿಬಿ ಮೂಲಕ ನೀರು ಸಾಗಲು ಅನುವು ಮಾಡಿಕೊಡಲಾಯಿತು. ಮಂಗಳವಾರ ಸಂಜೆ ಮತ್ತೆ ಮಳೆ ಬಂದಿದ್ದರಿಂದ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ನಿವಾಸಿಗಳು ಹೊರಗೂ ಹೋಗಲಾರದೆ, ಮನೆಯೊಳಗೂ ಇರಲಾಗದೆ ಪರದಾಡುವ ಪರಿಸ್ಥಿತಿ ಬಂದಿದೆ.

''ಮೇ ತಿಂಗಳಲ್ಲಿ ಉಂಟಾದ ನೆರೆಯಲ್ಲಿ ಟಿವಿ, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಸೇರಿ ಹಲವು ವಸ್ತುಗಳ ಹಾಳಾಗಿವೆ. ಒಂದು ಲಕ್ಷ ರೂ.ಗೂ ಹೆಚ್ಚು ನಷ್ಟ ಅನುಭವಿಸಬೇಕಾಯಿತು. ಸರಕಾರದಿಂದ ಪರಿಹಾರವಾಗಿ ಸಿಕ್ಕಿದ್ದು ಕೇವಲ 25 ಸಾವಿರ ರೂ. ಮತ್ತೆ ಈಗ ಮನೆಗೆಳಿಗೆ ನೀರು ನುಗ್ಗಿದೆ. ಹೀಗೆ ಆದರೆ, ಜೀವನ ಮಾಡುವುದಾದರೂ ಹೇಗೆ,'' ಎಂದು ಶ್ರೀಸಾಯಿ ಲೇಔಟ್‌ ನಿವಾಸಿ ಸರಸ್ವತಿ ಅಳಲು ತೋಡಿಕೊಂಡರು.

ಸಮಸ್ಯೆ ಏನು ?

ಸಾಯಿ ಬಡಾವಣೆಯಲ್ಲಿ ಮೂಲಕ ಸಾಗುವ ರಾಜಕಾಲುವೆ ರೈಲ್ವೆ ಟ್ರ್ಯಾಕ್‌ ಸನಿಹಕ್ಕೆ ಬಂದಂತೆ ಕಿರಿದಾಗಿದೆ. ರೈಲ್ವೆ ಟ್ರ್ಯಾಕ್‌ನ ಅಡಿಭಾಗದಲ್ಲಿ ಪ್ಯಾಸೇಜ್‌ ಮೂಲಕ ನೀರು ಹೊರ ಹೋಗಲು ವ್ಯವಸ್ಥೆ ಮಾಡಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಪ್ಯಾಸೇಜ್‌ ನಿರ್ಮಿಸಿದಲ್ಲಿ ಅಥವಾ ವಿಸ್ತರಣೆ ಮಾಡಿದಲ್ಲಿ ನೀರು ಸರಾಗವಾಗಿ ಹರಿದು ಹೋಗಲಿದೆ. ರೈಲ್ವೆ ಟ್ರ್ಯಾಕ್‌ ಬಳಿ ಬಿಬಿಎಂಪಿ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ರೈಲ್ವೆ ಇಲಾಖೆಯೇ ಕಾಮಗಾರಿ ನಡೆಸಬೇಕಿದೆ. ರೈಲ್ವೆ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುತ್ತೇವೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ವರ್ಷಗಳಿಂದ ಹೇಳುತ್ತಲೇ ಇದ್ದಾರಾದರೂ ಪರಿಹಾರ ಸಿಕ್ಕಿಲ್ಲ.

ರೈಲ್ವೆ ಕಂಬಿ ಕೆಳಗಿನ ಪ್ಯಾಸೇಜ್‌ ವಿಸ್ತರಣೆ ಮಾಡಲು ರಾಜಕಾಲುವೆ ವಿಭಾಗದಿಂದ 40 ಕೋಟಿ ರೂ. ಮೀಸಲಿಡಲಾಗಿದೆ. ರೈಲ್ವೆ ಇಲಾಖೆ ಜತೆಗೂ ಈ ಬಗ್ಗೆ ಮಾತುಕತೆ ನಡೆದಿದೆ. ಜನವರಿಯಲ್ಲಿ ಕಾಮಗಾರಿ ನಡೆಯಲಿದೆ.
ರಮೇಶ್‌, ಬಿಬಿಎಂಪಿ ಇಂಜಿನಿಯರ್‌, ಹೊರಮಾವು ವಾರ್ಡ್‌
ಕರಾವಳಿಯಲ್ಲಿ ಮತ್ತೆ ಅಬ್ಬರಿಸುತ್ತಿರುವ ವರುಣರಾಯ: ಭಟ್ಕಳ ಸಂಪೂರ್ಣ ಜಲಾವೃತ, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ
ವರ್ಷದಲ್ಲಿ ಮೂರ್ನಾಲ್ಕು ಬಾರಿ ಬಡಾವಣೆ ಜಲಾವೃತವಾಗುತ್ತಿದೆ. ಪದೇ ಪದೆ ಸಮಸ್ಯೆ ಉಂಟಾಗುತ್ತಿರುವುದರಿಂದ ನೆಲಮಹಡಿಯ ಮನೆಗಳಲ್ಲಿನ ಬಾಡಿಗೆದಾರರು ಮನೆ ತೊರೆದಿದ್ದಾರೆ. ಮನೆ ಕಟ್ಟಿಕೊಂಡು ವಾಸವಿರುವ ಮಾಲೀಕರು ಬೇರೆಡೆಗೆ ಹೋಗಲಾಗದೆ ಪರದಾಡುತ್ತಿದ್ದಾರೆ.
ಪುಷ್ಪರಾಜ್‌ , ಸಾಯಿ ಬಡಾವಣೆ ನಿವಾಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ