ಆ್ಯಪ್ನಗರ

ಅಪ್ಪಅಮ್ಮನಿಗೆ Happy Journey ಎಂದ ಟೆಕ್ಕಿ ಬದುಕಿನ Journey ಮುಗಿಸಿ ಬಿಟ್ಟ

ಕೆಲ ದಿನಗಳಿಗಾಗಿ ಮಗನೊಂದಿಗೆ ಕಾಲ ಕಳೆಯಲು ಬಂದಿದ್ದ ವಿಜಯನ್ ಮತ್ತು ಪತ್ನಿ ಉದಯ ಕುಮಾರಿ ಸೋಮವಾರ ರಾತ್ರಿ ಯಶವಂತಪುರ- ಕಣ್ಣೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ವಂತ ಊರಾದ ಪಾಲಕ್ಕಾಡ್‌ಗೆ ಹಿಂತಿರುಗುತಿದ್ದರು.

TIMESOFINDIA.COM 19 Dec 2018, 3:32 pm
ಬೆಂಗಳೂರು: ತಂದೆ-ತಾಯಿಗಳನ್ನು ರೈಲು ಹತ್ತಿಸಿ ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಪ್ರಯತ್ನಪಟ್ಟ ಟೆಕ್ಕಿಯೊಬ್ಬ ರೈಲಿನಡಿ ಸಿಕ್ಕಿ ದಾರುಣವ ಅಂತ್ಯ ಕಂಡ ಹೃದಯವಿದ್ರಾವಕ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಗ ರೈಲಿನಡಿ ಸಿಕ್ಕಿರುವುದನ್ನು ನೋಡಿ ರೈಲಿನಿಂದ ಹಾರಿದ ತಂದೆಗೆ ಕೂಡ ಗಾಯಗೊಂಡಿದ್ದಾರೆ.
Vijaya Karnataka Web nndjcb


ಮೃತ ವಿಕ್ರಮ್ ವಿಜಯನ್ ಎಚ್ಎಸ್ಆರ್ ಲೇ ಔಟ್‌ನ ಸೆಕ್ಟರ್ 3ರ ನಿವಾಸಿಯಾಗಿದ್ದು ವಿಪ್ರೋದಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿದ್ದ. ಕೇರಳದ ನಿವಾಸಿಯಾಗಿದ್ದ ತಂದೆ ವಿಜಯನ್ ಚಕ್ಕಿಂಗಲ್ (65) ನಿವೃತ್ತ ಟೆಕ್ನಿಶಿಯನ್ ಆಗಿದ್ದು ಗಾಯಗೊಂಡಿರುವ ಅವರನ್ನು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲ ದಿನಗಳಿಗಾಗಿ ಮಗನೊಂದಿಗೆ ಕಾಲ ಕಳೆಯಲು ಬಂದಿದ್ದ ವಿಜಯನ್ ಮತ್ತು ಪತ್ನಿ ಉದಯ ಕುಮಾರಿ ಸೋಮವಾರ ರಾತ್ರಿ ಯಶವಂತಪುರ- ಕಣ್ಣೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ವಂತ ಊರಾದ ಪಾಲಕ್ಕಾಡ್‌ಗೆ ಹಿಂತಿರುಗುತಿದ್ದರು. ಅವರನ್ನು ರೈಲು ಹತ್ತಿಸಲು ವಿಕ್ರಮ್ ಕಾರ್ಮೆಳರಂ ನಿಲ್ದಾಣಕ್ಕೆ ಬಂದಿದ್ದ. ಪ್ಲಾಟ್‌ಫಾರ್ಮ್ ನಂಬರ್ 1 ರಲ್ಲಿ ರಾತ್ರಿ 8.56ರ ಸುಮಾರಿಗೆ ರೈಲು ಬಂದಿದ್ದು, ಒಂದು ನಿಮಿಷ ನಿಂತಿತ್ತು. ತನ್ನ ತಂದೆ- ತಾಯಿಗೆಂದು ರಿಸರ್ವ್ ಮಾಡಿಸಿದ್ದ ಎಸಿ ಬೋಗಿ ಹತ್ತಿದ ವಿಜಯ್ ಅವರ ಲಗೇಜನ್ನು ಸೀಟಿನ ಪಕ್ಕ ಇಟ್ಟು ಹಿಂತಿರುಗಬೇಕೆನ್ನುವಷ್ಟರಲ್ಲಿ ರೈಲು ಚಲಿಸಿದೆ. ತಂದೆ - ತಾಯಿಗೆ ಹ್ಯಾಪಿ ಜರ್ನಿ ಎಂದ ವಿಕ್ರಮ್ ಗಡಿಬಿಡಿಯಲ್ಲಿ ರೈಲಿಂದ ಹಾರಿದ್ದಾನೆ. ಆದರೆ ನಿಯಂತ್ರಣ ತಪ್ಪಿ ರೈಲು ಮತ್ತು ಪ್ಲಾಟ್‌ಫಾರ್ಮ್ ಮಧ್ಯೆ ಬಿದ್ದಿದ್ದಾನೆ. ರೈಲಿನಡಿ ಸಿಕ್ಕಿ ಆತನ ತಲೆ, ಕೈ, ಕಾಲು ತುಂಡು ತುಂಡಾಗಿ ಹೋಗಿದೆ. ಮಗ ಬಿದ್ದಿರುವುದನ್ನು ನೋಡಿ ತಂದೆಯೂ ಕೆಳಕ್ಕೆ ಹಾರಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ದುರಂತದಿಂದ ಬೆಚ್ಚಿಬಿದ್ದ ಸಹ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿದ ಬಳಿಕವಷ್ಟೇ ಉದಯ ಕುಮಾರಿಗೆ ಮಗ ಮೃತಪಟ್ಟ, ಪತಿ ಗಾಯಗೊಂಡು ಘಟನೆ ಬಗ್ಗೆ ಅರಿವಾಗಿದೆ.

ವಿಜಯನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ