ಆ್ಯಪ್ನಗರ

ಬೆಂಗಳೂರಿನ ಪ್ರತಿ ಮನೆಗೂ ಡಿಜಿಟಲ್‌ ಐಡಿ

ಸ್ಮಾರ್ಟ್‌ ಸಿಟಿ ಯೋಜನೆಯಡಿ ರಾಜ್ಯ ಸರಕಾರ ಪ್ರತಿ ಮನೆಗೆ ಐಡಿ ನಂಬರ್‌ ನೀಡುವ ಕುರಿತು ಚಿಂತನೆ ನಡೆಸಿದೆ.

ಟೈಮ್ಸ್ ಆಫ್ ಇಂಡಿಯಾ 4 Feb 2017, 1:04 pm
ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ ನಿಮ್ಮವರ ಮನೆಯನ್ನು ಕಂಡುಹಿಡಿಯಲು ಹರಸಾಹಸ ಪಡಬೇಕಾಗಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆಯಡಿ ರಾಜ್ಯ ಸರಕಾರ ಪ್ರತಿ ಮನೆಗೆ ಐಡಿ ನಂಬರ್‌ ನೀಡುವ ಕುರಿತು ಚಿಂತನೆ ನಡೆಸಿದೆ.
Vijaya Karnataka Web your house may soon get a digital id smart city project
ಬೆಂಗಳೂರಿನ ಪ್ರತಿ ಮನೆಗೂ ಡಿಜಿಟಲ್‌ ಐಡಿ


ಪ್ರಸಕ್ತ ಯೋಜನೆಯ ಪ್ರಕಾರ ನಗರದ ಸುಮಾರು ಎರಡು ಲಕ್ಷ ಮನೆಗಳನ್ನು ಪಟ್ಟಿ ಮಾಡಲಾಗಿದ್ದು, ಇವುಗಳಿಗೆ ಡಿಜಿಟಲ್‌ ಐಡಿ ಸಂಖ್ಯೆಯನ್ನು ನೀಡಲು ತೀರ್ಮಾನಿಸಲಾಗಿದೆ. ಆಧಾರ್‌ ಸಂಖ್ಯೆಯನ್ನು ಬಳಸಿಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಪ್ರತಿಯೊಂದು ಮನೆಗೂ ಎಂಟು ಅಂಕಿ ಹಾಗೂ ಅಕ್ಷರಗಳನ್ನೊಳಗೊಂಡ ವಿಶಿಷ್ಟ ಐಡಿಯನ್ನು ನೀಡಲಾಗುತ್ತದೆ. ಈ ಯೋಜನೆಯ ಮೂಲಕ ಪ್ರತಿಯೊಬ್ಬ ನಿವಾಸಿಗಳ ಮನೆ ಒಂದೆಡೆ ಸಿಗುವಂತಾಗುತ್ತದೆ' ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ನೋಡಲ್‌ ಅಧಿಕಾರಿ ಮುರಳೀಧರ ತುರುವೇಕೆರೆ ಅಭಿಪ್ರಾಯ ಪಟ್ಟಿದ್ದಾರೆ.

ಈ ಯೋಜನೆಯಿಂದಾಗಿ ಪ್ರತಿ ಮನೆಯು ಜಿಪಿಎಸ್‌ಗೆ ಟ್ಯಾಗ್‌ ಆಗುತ್ತದೆ. ಇದರಿಂದ ಗೂಗಲ್‌ ಮ್ಯಾಪ್‌ ಅಥವಾ ಇನ್ಯಾವುದೇ ಮ್ಯಾಪ್‌ಗಳಲ್ಲಿ ಮನೆಯನ್ನು ಹುಡುಕಲು ಸುಲಭವಾಗುತ್ತದೆ. ಮನೆ ಮಾಲೀಕನ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯೂ ದೊರೆಯುತ್ತದೆ. ತೆರಿಗೆ ವಿಚಾರದಲ್ಲೂ ಇದು ಹೆಚ್ಚು ಉಪಕಾರಿ, ಎಂದು ತುರವೇಕೆರೆ ಹೇಳಿದ್ದಾರೆ.

ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ದೊರೆತರೆ ಈ ಯೋಜನೆಯನ್ನು ಎರಡನೇ ಹಂತದ ನಗರಗಳಲ್ಲೂ ಅಭಿವೃದ್ಧಿ ಪಡಿಸುವ ಕುರಿತು ಚಿಂತಿಸಲಾಗಿದೆ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ