ಆ್ಯಪ್ನಗರ

ಎರಡು ಕೊಲೆ ಪ್ರಕರಣದ ಆರೋಪಿಗಳ ಬಂಧನ

ಕಳೆದ ಒಂದು ವರ್ಷದಿಂದ ಪತ್ತೆಯಾಗದೆ ಬಾಕಿ ಉಳಿದಿದ್ದ ಎತಡು ಪ್ರತ್ಯೇಕ ಕೊಲೆ ಪ್ರಕರಣದ ಒಂದರಲ್ಲಿ ಸೋದರಸಂಬಂಧಿ ಹಾಗೂ ಮತ್ತೊಂದು ಪ್ರಕರಣದಲ್ಲಿ ಮೃತಳ ಗಂಡನನ್ನೇ ಬಂಧಿಸಿ ಕಾನೂನು ಕ್ರಮವಹಿಸ ಲಾಗಿದೆ ಎಂದು ಪೊಲೀಸ್‌ಉಪಅಧೀಕ್ಷಕ ಎ.ಬಿ. ರಾಜೇಂದ್ರಕುಮಾರ್ ತಿಳಿಸಿದರು.

ವಿಕ ಸುದ್ದಿಲೋಕ 3 Mar 2016, 5:10 am
ನೆಲಮಂಗಲ: ಕಳೆದ ಒಂದು ವರ್ಷದಿಂದ ಪತ್ತೆಯಾಗದೆ ಬಾಕಿ ಉಳಿದಿದ್ದ ಎತಡು ಪ್ರತ್ಯೇಕ ಕೊಲೆ ಪ್ರಕರಣದ ಒಂದರಲ್ಲಿ ಸೋದರಸಂಬಂಧಿ ಹಾಗೂ ಮತ್ತೊಂದು ಪ್ರಕರಣದಲ್ಲಿ ಮೃತಳ ಗಂಡನನ್ನೇ ಬಂಧಿಸಿ ಕಾನೂನು ಕ್ರಮವಹಿಸ ಲಾಗಿದೆ ಎಂದು ಪೊಲೀಸ್‌ಉಪಅಧೀಕ್ಷಕ ಎ.ಬಿ. ರಾಜೇಂದ್ರಕುಮಾರ್ ತಿಳಿಸಿದರು.
Vijaya Karnataka Web
ಎರಡು ಕೊಲೆ ಪ್ರಕರಣದ ಆರೋಪಿಗಳ ಬಂಧನ


ಪಟ್ಟಣದ ಸಿಪಿಐ ಕಚೇರಿ ಆವರಣದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಠಾಣೆ ವ್ಯಾಪ್ತಿಯ ರಾಂಕಿ ಬಡಾವಣೆ ಬಳಿಯಲ್ಲಿ ಮಾರಕಾಸ್ತ್ರಗಳಿಂದ ಥಳಿಸಿ ಆಟೋಚಾಲಕ ಕೃಷ್ಣೋಜಿರಾವ್ (30) ಎಂಬಾತನನ್ನು ಹತ್ಯೆಗೈಯಲಾಗಿತ್ತು. ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಮೃತನ ಸೋದರ ಸಂಬಂಧಿ ಮುನಿಯ (30) ಹತ್ಯೆ ಮಾಡಿದ್ದಾನೆಂದು ವಿಚರಣೆವೇಳೆ ತಿಳಿದುಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಕೃಷ್ಣೋಜಿರಾವ್ ಮತ್ತು ಮುನಿಯ ಇಬ್ಬರೂ ಸಂಬಂಧಿಗಳಾಗಿದ್ದು ಪಟ್ಟಣದ ಹೊರವಲಯದಲ್ಲಿರುವ ರಾಣೋಜಿಪಾಳ್ಯದ ನಿವಾಸಿ ಗಳಾಗಿದ್ದು, ಇಬ್ಬರ ನಡುವೆ ಹೇಮಾವತಿ ಎಂಬುವವರ ಮಗಳನ್ನು ಮದುವೆಯಾಗುವ ವಿಚಾರಕ್ಕೆ ಮನಸ್ತಾಪ ಉಂಟಾಗಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಾರಾಯಣಪುರದ ನಿಂಗಪ್ಪ ದೊಡ್ಡಮನಿ ಜತೆ ಸೇರಿ ಮುನಿಯ ಹತ್ಯೆಗೈದಿದ್ದಾನೆಂದು ತಿಳಿಸಿದರು.

ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2015ರ ಮೇ 30ರಂದು ರೇಣುಕಾ ಎಂಬಾಕೆಯನ್ನು ಅಕ್ರಮ ಸಂಬಂಧದ ಕಾರಣ ಉಂಟಾಗಿದ್ದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹತ್ಯೆಗೈಯಲಾಗಿತ್ತು. ಈ ಪ್ರಕರಣದಲ್ಲಿ ಮೃತಳ ಗಂಡ ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ನಾಗರಾಜು (21) ಎಂಬಾತವನ್ನು ಬಂಧಿಸಲಾಗಿದೆ. ಗಂಡ ಹೆಂಡತಿ ಇಬ್ಬರೂ ಅಕ್ರಮ ಸಂಬಂಧಗಳನ್ನು ಹೊಂದಿದ್ದರಿಂದಾಗಿ ಆಗ್ಗಾಗ್ಗೆ ಉಂಟಾಗುತ್ತಿದ್ದ ಕಲಹದ ಹಿನ್ನೆಲೆಯಲ್ಲಿ ಆರೋಪಿ ನಾಗರಾಜ ಎಂಬಾತನನ್ನು ಬಂಧಿಸಿ ಕಾನೂನು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಶ್ಲಾಘನೆ: ಒಂದು ವರ್ಷದಿಂದ ಪತ್ತೆಯಾಗದೇ ಬಾಕಿ ಉಳಿದಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಚಾಕಚಕ್ಯತೆಯನ್ನು ತೋರಿದ ಪಟ್ಟಣ ಪೊಲೀಸ್‌ಠಾಣೆ ಸಬ್‌ಇನ್ಸ್‌ಪೆಕ್ಟರ್ ಎ.ವಿ.ಕುಮಾರ್, ಮಾದನಾಯಕನಳ್ಳಿ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಅಶೋಕ್, ಸಿಬ್ಬಂದಿಗಳಾದ ಗಂಗಣ್ಣ, ಮಲಗುಂಡಿ, ಶ್ರೀನಿವಾಸ್, ಕೇಶವಾನಂದ, ನರೇಶ್‌ಕುಮಾರ್, ನಾರಾಯಣಸ್ವಾಮಿ, ಗಂಗಾಧರ್ ಅವರನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಕೆ.ನಾಗರಾಜು, ಮಾದನಾಯಕನಹಳ್ಳಿ ಪೊಲೀಸ್‌ಠಾಣೆ ನಿರೀಕ್ಷಕ ಜಿ.ಎನ್.ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ