Please enable javascript.ಸ್ವಚ್ಛತಾ ಅಭಿಯಾನಕ್ಕೆ ಸಹಭಾಗಿತ್ವ ಅಗತ್ಯ - ಸ್ವಚ್ಛತಾ ಅಭಿಯಾನಕ್ಕೆ ಸಹಭಾಗಿತ್ವ ಅಗತ್ಯ - Vijay Karnataka

ಸ್ವಚ್ಛತಾ ಅಭಿಯಾನಕ್ಕೆ ಸಹಭಾಗಿತ್ವ ಅಗತ್ಯ

ವಿಕ ಸುದ್ದಿಲೋಕ 1 Dec 2014, 9:04 am
Subscribe

‘‘ಸ್ವಚ್ಛತಾ ಅಭಿಯಾನದಲ್ಲಿ ನಾಗರಿಕರೊಂದಿಗೆ ಸಂಘ ಸಂಸ್ಥೆಗಳು ಪಾಲ್ಗೊಂಡಾಗ ಮಾತ್ರ ಸ್ವಚ್ಛತಾ ಭಾರತ ನಿರ್ಮಾಣ ಮಾಡಲು ಸಾಧ್ಯ,’’ ಎಂದು ಬಿಬಿಎಂಪಿ ಸದಸ್ಯೆ ಗೀತಾ ವಿವೇಕಾನಂದ ಹೇಳಿದರು.

ಸ್ವಚ್ಛತಾ ಅಭಿಯಾನಕ್ಕೆ ಸಹಭಾಗಿತ್ವ ಅಗತ್ಯ
ಕೃಷ್ಣರಾಜಪುರ: ‘‘ಸ್ವಚ್ಛತಾ ಅಭಿಯಾನದಲ್ಲಿ ನಾಗರಿಕರೊಂದಿಗೆ ಸಂಘ ಸಂಸ್ಥೆಗಳು ಪಾಲ್ಗೊಂಡಾಗ ಮಾತ್ರ ಸ್ವಚ್ಛತಾ ಭಾರತ ನಿರ್ಮಾಣ ಮಾಡಲು ಸಾಧ್ಯ,’’ ಎಂದು ಬಿಬಿಎಂಪಿ ಸದಸ್ಯೆ ಗೀತಾ ವಿವೇಕಾನಂದ ಹೇಳಿದರು. ವಿಜ್ಞಾನನಗರ ವಾರ್ಡ್ ನಲ್ಲಿ ವಿಭೂತಿಪುರ ಕೆರೆ ಅಭಿವೃದ್ಧಿ ಸಂಸ್ಥೆಯ (ವಿಕಾಸ್) ಕಾರ‌್ಯಕರ್ತರು ಹಮ್ಮಿಕೊಂಡಿದ್ದ ಸ್ವಚ್ಛತೆ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. ‘‘2.50 ಕೋಟಿ ರೂ. ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಗೆ ಕೆರೆಯ ತುಂಬಾ ಗಿಡ-ಗಂಟಿಗಳು ಬೆಳೆದಿವೆ. ಸ್ವಚ್ಛ ಭಾರತ ಅಭಿಯಾನದ ಮೂಲಕ ವಿಕಾಸ್‌ನ ಕಾರ‌್ಯಕರ್ತರು ಕೆರೆಯ ಶುಚಿ ಮಾಡುವ ಕಾರ‌್ಯಕ್ಕೆ ಮುಂದಾಗಿದ್ದಾರೆ,’’ ಎಂದರು. ‘‘ಪ್ರತಿ ಭಾನುವಾರ 3ಗಂಟೆಗಳ ಕಾಲ ವಿಕಾಸ್ ನ ಕಾರ‌್ಯಕರ್ತರು ಭಾಗವಹಿಸಿ ಕೆರೆಯ ಶುದ್ಧೀಕರಣ ಮಾಡುವ ಪಣ ತೊಟ್ಟಿದ್ದಾರೆ,’’ ಎಂದರು. ‘‘ದೇಶವನ್ನು ಶುಭ್ರ ಮಾಡುವ ನಿಟ್ಟಿನಲ್ಲಿ ಆರಂಭವಾಗಿರುವ ಸ್ವಚ್ಛತಾ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕಸ ಮುಕ್ತ ದೇಶವನ್ನು ನಿರ್ಮಾಣ ಮಾಡಲು ಎಲ್ಲರ ಸಹಕಾರ ಅಗತ್ಯ,’’ ಎಂದು ಹೇಳಿದರು. ವಿ.ಕಾ.ಸ್ ಸಂಸ್ಥೆಯ ಸದಸ್ಯರಾದ ಸುಧೀರ್, ಶುಭಾ ಅಮ್ರಿನ್‌ಖಾದ್ರಿ, ಸುಷ್ಮಾ, ಶಕ್ತಿವೇಲ್, ನರೇಶ್, ಅರುಣ್,ಕಿ ರಣ್ ಮನೀಶ್ ಹಾಜರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ