Please enable javascript.ಪಡಿತರಚೀಟಿದಾರರಿಂದ ತಾಲೂಕು ಕಚೇರಿಗೆ ಮುತ್ತಿಗೆ - ಪಡಿತರಚೀಟಿದಾರರಿಂದ ತಾಲೂಕು ಕಚೇರಿಗೆ ಮುತ್ತಿಗೆ - Vijay Karnataka

ಪಡಿತರಚೀಟಿದಾರರಿಂದ ತಾಲೂಕು ಕಚೇರಿಗೆ ಮುತ್ತಿಗೆ

ವಿಕ ಸುದ್ದಿಲೋಕ 26 Dec 2016, 5:13 pm
Subscribe

ಮಜರಾಹೊಸಹಳ್ಳಿ ವಿಎಸ್‌ಎಸ್‌ಎನ್‌ ವ್ಯಾಪ್ತಿಯ ತಿಪ್ಪಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯ ಪಡಿತರ ವಿತರಣೆಯಲ್ಲಿ ಅವ್ಯವಹಾರ ಖಂಡಿಸಿ ಬಿಪಿಎಲ್‌ ಪಡಿತರದಾರರು ತಿಪ್ಪಾಪುರದಿಂದ ನಗರದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಪಡಿತರಚೀಟಿದಾರರಿಂದ ತಾಲೂಕು ಕಚೇರಿಗೆ ಮುತ್ತಿಗೆ

ದೊಡ್ಡಬಳ್ಳಾಪುರ: ಮಜರಾಹೊಸಹಳ್ಳಿ ವಿಎಸ್‌ಎಸ್‌ಎನ್‌ ವ್ಯಾಪ್ತಿಯ ತಿಪ್ಪಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯ ಪಡಿತರ ವಿತರಣೆಯಲ್ಲಿ ಅವ್ಯವಹಾರ ಖಂಡಿಸಿ ಬಿಪಿಎಲ್‌ ಪಡಿತರದಾರರು ತಿಪ್ಪಾಪುರದಿಂದ ನಗರದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ತಿಪ್ಪಾಪುರ ನ್ಯಾಬೆಲೆ ಅಂಗಡಿಯಲ್ಲಿ ಪಡಿತರ ಚೀಟಿಯಲ್ಲಿ ಪ್ರತಿ ಸದಸ್ಯನಿಗೂ 5ಕೆಜಿ ಅಕ್ಕಿ ನೀಡಬೇಕೆಂಬ ಸರಕಾರಿ ಆದೇಶವಿದ್ದರೂ, ಪ್ರತಿ ಸದಸ್ಯನಿಗೆ ಮೂರು ಕೆಜಿ ಅಕ್ಕಿ, ಕೆಲವರಿಗೆ ಪಡಿತರ ಚೀಟಿಯ ಎಲ್ಲಾ ಸದಸ್ಯರಿಗೂ ಸೇರಿ 3 ಕೆಜಿ ಅಕ್ಕಿ ವಿತರಣೆ ನಡೆಯುತ್ತಿದೆ. ಘಟನೆ ಕುರಿತು ಪಡಿತರದಾರರು ನ್ಯಾಯಬೆಲೆ ಅಂಗಡಿಯವರನ್ನು ಪ್ರಶ್ನಿಸಿದರೆ ಪಡಿತರ ಬಂದಿರುವುದೇ ಕಡಿಮೆ ಬೇಕೆಂದರೆ ತೆಗೆದುಕೊಳ್ಳಿ, ಇಲ್ಲವಾದಲ್ಲಿ ಆಹಾರ ನಿರೀಕ್ಷ ಕರಿಗೆ ದೂರು ನೀಡಿ ಎಂದು ಬೇಜವಾಬ್ದಾರಿ ತೋರಿದ್ದಾರೆ. ಇದರಿಂದ ಕುಪಿತಗೊಂಡ ಪಡಿತರಾರರು ಪಡಿತರ ಚೀಟಿಯ ಪ್ರತಿ ಸದಸ್ಯನಿಗೂ ಸರಕಾರದ ಅದೇಶದಂತೆ 5 ಕೆಜಿ ಅಕ್ಕಿ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಸೂಕ್ತ ಉತ್ತರ ನೀಡಬೇಕಿದ್ದ ಕಾರ್ಯದರ್ಶಿ ಬಾಗಿಲು ಬಡಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆಯಿಂದ ಮತ್ತಷ್ಟು ಕುಪಿತರಾದ ಪಡಿತದಾರರು ಸುಮಾರು ಆರು ಕಿಲೋಮೀಟರ್‌ ದೂರದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ ಅಕ್ಕಿ ನೀಡದ ಹೊರತು ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸುಮಾರು 2ಗಂಟೆಗಳ ಕಾಲ ಬೃಹತ್‌ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಆಹಾರ ನಿರೀಕ್ಷ ಕ ಲಕ್ಷ್ಮಿ ನಾರಾಯಣ್‌ಗೆ ಆಕ್ರೋಶಭರಿತರಾಗಿದ್ದ ಪ್ರತಿಭಟನಾಕಾರರು ಘೇರಾವ್‌ ಹಾಕಿದರು. ಈ ಕುರಿತು ಪ್ರತಿಕ್ರಿಯಿಸಿದ ಆಹಾರ ನಿರೀಕ್ಷ ಕ, ಡಿಸೆಂಬರ್‌ ತಿಂಗಳಲ್ಲಿ ಆಧಾರ್‌ ಲಿಂಕ್‌ ಆಗಿದ್ದ ಸದಸ್ಯರದ್ದು ಪಡಿತರ ವಿತರಣೆಗೆ ಅಂಗೀಕರಿಸಿದ್ದು , ಕಳೆದ ತಿಂಗಳ ಪಟ್ಟಿಯ ಆಧಾರದ ಮೇಲೆ ಅಕ್ಕಿ ಸರಬರಾಜು ಆಗಿದೆ. ಹೀಗಾಗಿ 46 ಕ್ವಿಂಟಾಲ್‌ ಅಕ್ಕಿ ಕೊರತೆಯಾಗಿರುವ ಹಿನ್ನೆಲೆ ಈ ಸಮಸ್ಯೆ ಸಂಭವಿಸಿದೆ. ಇನ್ನು ಮುಂದೆ ಈ ರೀತಿ ಸಮಸ್ಯೆ ಎದುರಾಗದಂತೆ ಕ್ರಮ ವಹಿಸುತ್ತೇವೆ. ಹಾಗೆಯೇ ಒಟ್ಟು ಪಡಿತರಕ್ಕೆ ಪಡೆಯಬೇಕಿದ್ದ 42ರೂ.ಗಳ ಬದಲು 50 ರೂಪಾಯಿ ಪಡೆಯುತ್ತಿರುವ ಕಾರ್ಯದರ್ಶಿ ಸುಬ್ಬರಾಯಪ್ಪನಿಗೆ ಮುಂದಿನ ದಿನದಲ್ಲಿ ಹೆಚ್ಚುವರಿ ಹಣ ಪಡೆದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲಾ ಆಹಾರ ನಿರೀಕ್ಷ ಕ ಆದೇಶದ ಮೇಲೆ ಟಿಎಪಿಎಂಸಿಎಸ್‌ನಲ್ಲಿ 50ಕ್ವಿಂಟಾಲ್‌ ಅಕ್ಕಿ ಪಡೆದು ಸರಕಾರಿ ಆದೇಶದಂತೆ ಅಕ್ಕಿ ವಿತರಣೆ ಮಾಡುವುದಾಗಿ ಕಾರ್ಯದರ್ಶಿಗೆ ಆಹಾರ ನಿರೀಕ್ಷ ಕ ಲಕ್ಷ್ಮೇ ನಾರಾಯಣ್‌ ಸೂಚನೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟರು.

ಪ್ರತಿಭಟನೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ತಾಲೂಕು ಜೆಡಿಎಸ್‌ ಅಧ್ಯಕ್ಷ ಡಾ.ಎಚ್‌.ಜಿ.ವಿಜಯಕುಮಾರ್‌, ಬಡ ಜನಗಳಿಗೆ ನಿಮ್ಮ ಅಧಿಕಾರಿಗಳು ತೊಂದರೆ ನೀಡಿದಲ್ಲಿ ಜವಾಬ್ದಾರರು ನೀವಾಗುತ್ತೀರಿ. ಈ ಹಂತದಲ್ಲಿ ಬೃಹತ್‌ ಪ್ರತಿಭಟನೆಗಳನ್ನು ಎದುರಿಸಬೇಕಾದೀತು ಎಂದು ತಾಲೂಕು ಮಟ್ಟದ ಸಂಬಂಧಿತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಡಿತರ ವಿತರಣೆ ಲೋಪ ಸರಿಪಡಿಸುವಂತೆ ಪಡಿತರದಾರರು ಮತ್ತು ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯ ಮಾರಾಟ ನಿಷೇಧ ಮಾಡುವಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಲಲಿತಮ್ಮ ಗ್ರೇಡ್‌ 2 ತಹಸೀಲ್ದಾರ್‌ ಸಿ.ರಾಮಲಿಂಗಯ್ಯ ಅವರಿಗೆ ಮನವಿ ನೀಡಿದರು.

ಪ್ರತಿಭಟನೆಯಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಡಾ.ಎಚ್‌.ಜಿ.ವಿಜಯಕುಮಾರ್‌, ಮಜರಾಹೊಸಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಚ್‌.ಕೆ.ರಾಮದಾಸ್‌, ತಿಪ್ಪಾಪುರ ಗ್ರಾಮದ ಮುಖಂಡರಾದ ದೇವರಾಜ್‌, ಕೃಷ್ಣಪ್ಪ, ರಂಗಸ್ವಾಮಿ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ