ಆ್ಯಪ್ನಗರ

ಘಾಟಿ ಕ್ಷೇತ್ರದ ಹುಂಡಿಯಲ್ಲಿ 48.14 ಲಕ್ಷ ಸಂಗ್ರಹ

ತಾಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯ ಸಭಾಂಗಣದಲ್ಲಿ ಪ್ರತಿ ತಿಂಗಳಿನಂತೆ, ಜೂನ್‌ ತಿಂಗಳ ಹುಂಡಿ ಹಣವನ್ನು ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು. ಹುಂಡಿಯಲ್ಲಿ ಸುಮಾರು 48 ಲಕ್ಷ 14 ಸಾವಿರ 833 ರೂ.ಗಳು, ಚಿನ್ನ 4 ಗ್ರಾಂ, ಬೆಳ್ಳಿ 2ಕೆಜಿ 180 ಗ್ರಾಂ ಸಂಗ್ರಹ ಆಗಿದೆ. ಒಮನ್‌ ದೇಶದ 37 ನೋಟುಗಳು, ಅಮೆರಿಕಾದ 1 ಡಾಲರ್‌ ಮೌಲ್ಯದ 5 ನೋಟುಗಳು ದೊರೆತಿವೆ. ಹಾಗು ಅಮಾನ್ಯಗೊಂಡಿರುವ 500 ಮುಖಬೆಲೆಯ 14 ನೋಟುಗಳು, 1 ಸಾವಿರ ಮುಖ ಬೆಲೆಯ 2 ನೋಟುಗಳು ಸಂಗ್ರಹ ಆಗಿದೆ. .

Vijaya Karnataka 25 Jun 2019, 5:00 am
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ
Vijaya Karnataka Web 48 14 lakhs collection in ghati temple
ಘಾಟಿ ಕ್ಷೇತ್ರದ ಹುಂಡಿಯಲ್ಲಿ 48.14 ಲಕ್ಷ ಸಂಗ್ರಹ


ತಾಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯ ಸಭಾಂಗಣದಲ್ಲಿ ಪ್ರತಿ ತಿಂಗಳಿನಂತೆ, ಜೂನ್‌ ತಿಂಗಳ ಹುಂಡಿ ಹಣವನ್ನು ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು.

ಹುಂಡಿಯಲ್ಲಿ ಸುಮಾರು 48 ಲಕ್ಷ 14 ಸಾವಿರ 833 ರೂ.ಗಳು, ಚಿನ್ನ 4 ಗ್ರಾಂ, ಬೆಳ್ಳಿ 2ಕೆಜಿ 180 ಗ್ರಾಂ ಸಂಗ್ರಹ ಆಗಿದೆ. ಒಮನ್‌ ದೇಶದ 37 ನೋಟುಗಳು, ಅಮೆರಿಕಾದ 1 ಡಾಲರ್‌ ಮೌಲ್ಯದ 5 ನೋಟುಗಳು ದೊರೆತಿವೆ. ಹಾಗು ಅಮಾನ್ಯಗೊಂಡಿರುವ 500 ಮುಖಬೆಲೆಯ 14 ನೋಟುಗಳು, 1 ಸಾವಿರ ಮುಖ ಬೆಲೆಯ 2 ನೋಟುಗಳು ಸಂಗ್ರಹ ಆಗಿದೆ.

ಈ ಸಂದರ್ಭದಲ್ಲಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎನ್‌.ಕೃಷ್ಣಪ್ಪ, ಮುಜರಾಯಿ ಇಲಾಖೆ ತಹಸೀಲ್ದಾರ್‌ ಕೆ.ಪದ್ಮ, ದೇವಾಲಯ ಅಧಿಕಾರಿ ವರ್ಗದ ನಾರಾಯಣಸ್ವಾಮಿ, ದೇವಾಲಯ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಜಿ.ಎಂ.ಚನ್ನಪ್ಪ, ಪ್ರಧಾನ ಅರ್ಚಕ ಆರ್‌.ಸುಬ್ರಹ್ಮಣ್ಯ, ಸಮಿತಿಯ ಸದಸ್ಯರುಗಳಾದ ಕೆ.ಮುನಿಯಪ್ಪ, ಕೆ.ಬಿ.ಭ್ರಮರಾಂಭಿಕಮುತ್ತಣ್ಣ, ಸುಬ್ರಹ್ಮಣ್ಯನಾಯಕ್‌, ಕೆ.ನಾಗರತ್ನಮ್ಮ, ಎಂ.ಮಂಜಣ್ಣ, ಹೊಬಳಿ ಮುಖಂಡ ಎನ್‌.ಆಂಜಿನಪ್ಪ ಮೆಳೇಕೋಟೆ, ಹಾಗೂ ಓವರ್‌ಸೀಸ್‌ ಬ್ಯಾಂಕ್‌ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಹುಂಡಿಯಲ್ಲಿ ವಿದೇಶಿ ಕರೆನ್ಸಿ; ಹುಂಡಿಯಲ್ಲಿ ವಿದೇಶಿ ಹಣ ಸಿಕ್ಕಿರುವುದು ದೇವಾಲಯದ ಪ್ರಸಿದ್ದಿಯನ್ನು ಮತ್ತಷ್ಟು ಹೆಚ್ಚಿಸಿದೆ. ಒಮನ್‌ ದೇಶದ ಹಾಗು ಯುಎಸ್‌ ದೇಶದ ಕರೆನ್ಸಿ ಹುಂಡಿಯಲ್ಲಿ ಲಭ್ಯವಾಗಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ