ಆ್ಯಪ್ನಗರ

ಒಕ್ಕಲಿಗರ ಸಂಘಕ್ಕೆ 5 ಎಕರೆ ಜಮೀನು ಮಂಜೂರು

ತಾಲೂಕು ಒಕ್ಕಲಿಗರ ಸಂಘಕ್ಕೆ 5 ಎಕರೆ ಸರಕಾರಿ ಜಮೀನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎನ್‌. ನಾಗರಾಜ್‌ ಹೇಳಿದರು.

Vijaya Karnataka 28 Jun 2019, 5:00 am
ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಎನ್‌. ನಾಗರಾಜ್‌ ಭರವಸೆ
Vijaya Karnataka Web 5 acres of land allotted to okaligara sangha
ಒಕ್ಕಲಿಗರ ಸಂಘಕ್ಕೆ 5 ಎಕರೆ ಜಮೀನು ಮಂಜೂರು

ಹೊಸಕೋಟೆ : ತಾಲೂಕು ಒಕ್ಕಲಿಗರ ಸಂಘಕ್ಕೆ 5 ಎಕರೆ ಸರಕಾರಿ ಜಮೀನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎನ್‌. ನಾಗರಾಜ್‌ ಹೇಳಿದರು.

ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರು ಹೊಸಕೋಟೆ ನಗರದ ನಾಲ್ಕು ದಿಕ್ಕುಗಳಲ್ಲೂ ಗೋಪುರ, ಕೋಟೆ ನಿರ್ಮಿಸುವ ಮೂಲಕ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಬೆಂಗಳೂರು ನಗರದ ನಿರ್ಮಾಣ ಸಂದರ್ಭದಲ್ಲಿ ಹೊಂದಿದ್ದ ದೂರದೃಷ್ಟಿಯ ಪರಿಣಾಮವಾಗಿ ಇಂದು ವಿಶ್ವವಿಖ್ಯಾತಿ ಗಳಿಸಿದೆ. ಕೃಷಿ, ನೀರಾವರಿ ಸೌಲಭ್ಯಗಳೊಂದಿಗೆ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ಸೌಲಭ್ಯಗಳನ್ನು ಬೆಂಗಳೂರು ನಗರ ಹೊಂದಿದ್ದು ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸುತ್ತಿದೆ. ಹಲವಾರು ಅಡೆತಡೆಗಳ ನಡುವೆಯೂ ನಗರದ ಬಸ್‌ ಸ್ಟ್ಯಾಂಡಿನಲ್ಲಿ ಕೆಂಪೇಗೌಡರ ಪುತ್ಥಳಿ ಸ್ಥಾಪಿಸಲಾಗಿದೆ ಎಂದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮುನಿರಾಜ್‌ ಮಾತನಾಡಿÜರು. ಇದೇ ಸಂದರ್ಭದಲ್ಲಿ ಬಸ್‌ ಸ್ಟಾಂಡಿನ ಮುಖ್ಯ ರಸ್ತೆಯಲ್ಲಿ ಸ್ಥಾಪಿಸಿರುವ ಕೆಂಪೇಗೌಡರ ಪುತ್ಥಳಿಗೆ ಸಚಿವರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಗ್ರೇಡ್‌-2 ತಹಸೀಲ್ದಾರ್‌ ಚಂದ್ರಶೇಖರ್‌, ನಗರಸಭೆ ಪೌರಾಯುಕ್ತ ನಿಸಾರ್‌ ಅಹಮದ್‌, ತಾಲೂಕು ಪಂಚಾಯಿತಿ ಅಧ್ಯಕ್ಷ ವಿ.ಸಿ. ಜಯದೇವಯ್ಯ, ಮಾಜಿ ಅಧ್ಯಕ್ಷ ಕೆಂಚೇಗೌಡ, ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಬಚ್ಚೇಗೌಡ, ಎಲ್‌.ಎಂ.ಮಂಜುನಾಥ್‌, ಶಂಕರ್‌ನಾರಾಯಣ್‌, ಶಂಕರೇಗೌಡ ಇನ್ನಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ