ಆ್ಯಪ್ನಗರ

8 ನಾಮಪತ್ರ ತಿರಸ್ಕೃತ, 18 ಕ್ರಮಬದ್ಧ

ವೀರಪ್ಪಮೊಯ್ಲಿ ಸಲ್ಲಿಸಿದ್ದ ಮೂರು ನಾಮಪತ್ರಗಳಲ್ಲಿ ಒಂದು ತಿರಸ್ಕೃತ ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ/ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನಾಮಪತ್ರಗಳ ...

Vijaya Karnataka 28 Mar 2019, 5:00 am
ವೀರಪ್ಪಮೊಯ್ಲಿ ಸಲ್ಲಿಸಿದ್ದ ಮೂರು ನಾಮಪತ್ರಗಳಲ್ಲಿ ಒಂದು ತಿರಸ್ಕೃತ
Vijaya Karnataka Web 8 nomination rejected 18 valid
8 ನಾಮಪತ್ರ ತಿರಸ್ಕೃತ, 18 ಕ್ರಮಬದ್ಧ


ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ/ಬೆಂಗಳೂರು ಗ್ರಾಮಾಂತರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನಾಮಪತ್ರಗಳ ಪರಿಶೀಲನಾ ಕಾರ್ಯ ಮುಕ್ತಾಯಗೊಂಡಿದೆ. ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ 25 ಅಭ್ಯರ್ಥಿಗಳಿಂದ 32 ನಾಮಪತ್ರ ಸಲ್ಲಿಕೆಯಾಗಿದ್ದವು. ಬುಧವಾರ ನಾಮಪತ್ರಗಳ ಪರಿಶಿಲನೆ ಕಾರ್ಯ ಮುಕ್ತಾಯವಾಗಿದ್ದು 8 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 18 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್‌ ಶ್ರವಣ್‌ ಸಮ್ಮುಖದಲ್ಲಿ ಬುಧವಾರ ನಾಮಪತ್ರ ಪರಿಶೀಲನೆ ನಡೆಯಿತು. ಸ್ಪರ್ಧೆ ಕೋರಿ ನಾಮಪತ್ರ ಸಲ್ಲಿಸಿದ್ದವರ ಪೈಕಿ 3 ನಾಮಪತ್ರ ವಿವಿಧ ನೊಂದಾಯಿತ ಪಕ್ಷಗಳ ಅಭ್ಯರ್ಥಿಗಳು, 5 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ. ವಿಶೇಷ ಎಂದರೆ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿರುವ ಎಂ.ವೀರಪ್ಪಮೊಯ್ಲಿ ಅವರು ಸಲ್ಲಿಸಿದ್ದ ಒಂದು ನಾಮಪತ್ರ ತಾಂತ್ರಿಕ ಕಾರಣದಿಂದ ತಿರಸ್ಕೃತಗೊಂಡಿದೆ.

ತಿರಸ್ಕೃತಗೊಂಡ ನಾಮಪತ್ರಗಳು: ಸೈಯದ್‌ ಅಲೀಂ ಪಾಷಾ(ಇಂಡಿಯನ್‌ ಲೇಬರ್‌ ಪಾರ್ಟಿ), ಶೀತಲ್‌ ಚೌಹಾಣ್‌ (ಐ ರಾ ರಾಷ್ಟ್ರೀಯ ಪಕ್ಷ), ಜಿ.ಎನ್‌.ರವಿ(ಪಕ್ಷೇತರ), ಬಿ.ಎಂ. ನಾರಾಯಣಸ್ವಾಮಿ(ಪಕ್ಷೇತರ), ಜಿ.ಎನ್‌. ವೆಂಕಟೇಶಪ್ಪ (ಪಕ್ಷೇತರ), ಆರ್‌. ತೋಪಯ್ಯ (ಪಕ್ಷೇತರ), ಎನ್‌. ನರಸಿಂಹಮೂರ್ತಿ(ಪಕ್ಷೇತರ) ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಕ್ರಮಬದ್ಧ ನಾಮಪತ್ರಗಳು: ಡಾ.ಎಂ.ವೀರಪ್ಪ ಮೊಯ್ಲಿ (ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ), ಬಿ.ಎನ್‌.ಬಚ್ಚೇಗೌಡ(ಬಿಜೆಪಿ), ಡಾ. ಸಿ.ಎಸ್‌. ದ್ವಾರಕಾನಾಥ್‌ (ಬಿಎಸ್‌ಪಿ), ಎಸ್‌.ವರಲಕ್ಷ್ಮೇ(ಸಿಪಿಐಎಂ), ಜಿ. ಮುನಿರಾಜು(ಉತ್ತಮ ಪ್ರಜಾಕೀಯ ಪಾರ್ಟಿ), ಖಾದರ್‌ ಸುಬಾನ್‌ ಖಾನ್‌(ಸಮಾಜವಾದಿ ಜನತಾ ಪಾರ್ಟಿ), ನಜೀರ್‌ ಅಹಮದ್‌(ಕರ್ನಾಟಕ ಕಾರ್ಮಿಕರ ಪಕ್ಷ), ಎನ್‌.ಆರ್‌.ನಾಗೇಶ್‌ರೆಡ್ಡಿ (ಅಂಬೇಡ್ಕರ್‌ ಸಮಾಜ ಪಾರ್ಟಿ), ನಾಗೇಂದ್ರರಾವ್‌ ಶಿಂದೆ (ಕರ್ನಾಟಕ ಜನತಾ ಪಕ್ಷ), ಕನಕಲಕ್ಷ್ಮೇ(ಪಕ್ಷೇತರ), ಎಲ್‌. ನಾಗರಾಜ್‌(ಪಕ್ಷೇತರ), ನಸುರುಲ್ಲಾ (ಪಕ್ಷೇತರ), ಡಿ. ಮುನಿರಾಜು(ಪಕ್ಷೇತರ), ಕೆ.ಎಸ್‌.ನಳಿನ(ಪಕ್ಷೇತರ), ಎಸ್‌. ಪಣಿರಾಜು(ಪಕ್ಷೇತರ), ಎನ್‌. ರಮೇಶ್‌(ಪಕ್ಷೇತರ), ರಾಮಾಂಜಿನಪ್ಪ (ಪಕ್ಷೇತರ), ಅಬ್ದುಲ್‌ ಕರೀಂ ದೇಸಾಯಿ (ಪಕ್ಷೇತರ) ಅವರ ನಾಮಪತ್ರಗಳು ಸರಿಯಾಗಿದೆ.

ನಾಮಪತ್ರ ವಾಪಸ್‌: ನಾಮಪತ್ರ ವಾಪಸ್‌ ಪಡೆಯಲು ಮಾ.29 ಕಡೆ ದಿನವಾಗಿದೆ. ಅಂದು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ವಾಪಸ್‌ ಪಡೆಯಬಹುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್‌ ಶ್ರವಣ್‌ ತಿಳಿಸಿದ್ದಾರೆ.

..........

ಬಾಕ್ಸ್‌

ಸಚಿವರಿಂದ ಗಾಯನ

ವಸತಿ ಸಚಿವ ಎನ್‌.ನಾಗರಾಜ್‌ ಅವರು ರಂಗಭೂಮಿಯಲ್ಲಿ ಹಾಡು ಹಾಡುವ ಮೂಲಕ ಮತದಾರರ ಗಮನ ಸೆಳೆದಿದ್ದಾರೆ. ಹೊಸಕೋಟೆ ತಾಲೂಕು ಜಡಿಗೇನಹಳ್ಳಿ ಹೋಬಳಿ ಅತ್ತಿವಟ್ಟದಲ್ಲಿ ಆಯೋಜಿಸಿದ್ದ ನಾಟಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಬಬ್ರುವಾಹನ ಚಿತ್ರದ ಹಾಡು ಹಾಡಿದ್ದಾರೆ. ನಾಗರಾಜ್‌ ಅವರು ಸ್ವತಃ ರಂಗ ಕಲಾವಿದರಾದ ಹಿನ್ನೆಲೆಯಲ್ಲಿ ಹಾಡು ಹಾಡುವಂತೆ ನೆರೆದಿದ್ದ ಪ್ರೇಕ್ಷಕರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಹಾಡು ಹಾಡಿ ಜನರನ್ನು ರಂಜಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ