ಆ್ಯಪ್ನಗರ

1500 ಅಡಿ ಬೆಟ್ಟ ಹತ್ತಿ ಮಹಿಮರಂಗನ ದರ್ಶನ ಪಡೆದ ಸಾಹಸಿ ಎತ್ತುಗಳು

ತಾಲೂಕಿನ ಸುಪ್ರಸಿದ್ದ ಜಾನುವಾರ ಜಾತ್ರೆಯಾದ ಮಹಿಮರಂಗ ಸ್ವಾಮಿ (ಗುಟ್ಟೆ) ಜಾತ್ರೆಯಲ್ಲಿ 2.50ಲಕ್ಷ ಬೆಲೆಬಾಳುವ ಸಾಹಸಿ ಎತ್ತುಗಳು 1500 ಅಡಿ ಎತ್ತರದ ಬೆಟ್ಟದ ಮೇಲಿರುವ ಮಹಿಮರಂಗಸ್ವಾಮಿ ದರ್ಶನ ಪಡೆದು ಸಾಹಸ ಪ್ರದರ್ಶನ ಮಾಡಿವೆ.

Vijaya Karnataka 25 Jan 2019, 5:00 am
ನೆಲಮಂಗಲ: ತಾಲೂಕಿನ ಸುಪ್ರಸಿದ್ದ ಜಾನುವಾರ ಜಾತ್ರೆಯಾದ ಮಹಿಮರಂಗ ಸ್ವಾಮಿ (ಗುಟ್ಟೆ) ಜಾತ್ರೆಯಲ್ಲಿ 2.50ಲಕ್ಷ ಬೆಲೆಬಾಳುವ ಸಾಹಸಿ ಎತ್ತುಗಳು 1500 ಅಡಿ ಎತ್ತರದ ಬೆಟ್ಟದ ಮೇಲಿರುವ ಮಹಿಮರಂಗಸ್ವಾಮಿ ದರ್ಶನ ಪಡೆದು ಸಾಹಸ ಪ್ರದರ್ಶನ ಮಾಡಿವೆ.
Vijaya Karnataka Web BRL-24NELAPH05


ತಾಲೂಕಿನ ಮಹಿರಂಗಸ್ವಾಮಿ ಜಾನುವಾರಗಳ ಜಾತ್ರೆಯಲ್ಲಿ ಮಾರಾಟಕ್ಕೆಂದು ಬಂದಿರುವ ಹೊಸಕೋಟೆ ತಾಲೂಕಿನ ಬಿ.ಶೆಟ್ಟಿಹಳ್ಳಿ ಗ್ರಾಮದ ರೈತ ರಾಮಾಂಜಿಯವರ ಮೂರು ವರ್ಷದ ಒಂದು ಜೋಡಿ ಎತ್ತುಗಳು ಸುಮಾರು 2 ಸಾವಿರ ಮೆಟ್ಟಿಲುಗಳ ಬೆಟ್ಟ ಹತ್ತಿಸುವ ಸಾಹಸ ಮಾಡಿದೆ. ಇಲ್ಲಿಯವರೆಗೂ ಯಾವುದೇ ಜೋಡಿ ಎತ್ತುಗಳು ಬೆಟ್ಟವನ್ನು ಹತ್ತಿರಲಿಲ್ಲ, ಇದೇ ಮೊದಲ ಭಾರಿಗೆ ಜೋಡಿ ಎತ್ತುಗಳು ಬೆಟ್ಟದ ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ.

ರೈತ ರಾಮಾಂಜಿ ಮಾತನಾಡಿ, ನಾನು ಸಾಕಿರುವ ಜೋಡಿ ಎತ್ತುಗಳ ಬೆಲೆ 2.50 ಲಕ್ಷ ರೂ. ಆಗಿದ್ದು, ತುಂಬ ಇಷ್ಠಪಟ್ಟು ಸಾಕಿದ್ದೇನೆ. ಮೂರು ವರ್ಷದ ಈ ಎತ್ತುಗಳನ್ನು ಬೆಟ್ಟ ಹತ್ತಿಸಿ ದಾಖಲೆ ಮಾಡಬೇಕು ಎನ್ನುವ ಆಸೆಯಿತ್ತು, ಆ ಆಸೆಗಳನ್ನು ಈ ಎತ್ತುಗಳ ಪೂರೈಸಿವೆ. ಜನರೆ ಹತ್ತಲು ಆಯಾಸಪಡುವ ಈ ಬೆಟ್ಟಕ್ಕೆ ಆಯಾಸವಿಲ್ಲದೆ ಬೆಟ್ಟ ಹತ್ತಿರುವ ಎತ್ತುಗಳ ಸಾಹಸ ಮರೆಯಲಾಗುವುದಿಲ್ಲ ಎಂದರು.

ಜಾತ್ರೆಗೆ ಆಗಮಿಸಿದ ರೈತ ಸಿದ್ದಗಂಗಯ್ಯ ಮಾತನಾಡಿ, ಅನೇಕ ವರ್ಷಗಳಿಂದ ಗುಟ್ಟೆಯ ಜಾನುವಾರ ಜಾತ್ರೆಗೆ ಆಗಮಿಸುತ್ತಿದ್ದು ಈ ಭಾರಿ ಜೋಡಿ ಎತ್ತುಗಳು ಬೆಟ್ಟ ಹತ್ತಿರುವುದು ಆಶ್ವರ್ಯದ ಸಂಗತಿ ಎಂದರು.

..............

24ಪೋಟೋನೆಲಪಿಹೆಚ್‌5:

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ