ಆ್ಯಪ್ನಗರ

ಮಣ್ಣೆಗೆ ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ

ನಿರ್ಲಕ್ಷ್ಯಕ್ಕೊಳಗಾದ ಗಂಗರ ರಾಜಧಾನಿ ಮಣ್ಣೆ ಗ್ರಾಮಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ವಿಜಯಕರ್ನಾಟಕ ವರದಿ ಫಲಶೃತಿ ಎನಿಸಿದೆ.

Vijaya Karnataka 6 Oct 2019, 5:00 am
ವಿಕ ವರದಿಗೆ ಸಿಕ್ಕ ಮನ್ನಣೆ | ಗಂಗರ ರಾಜಧಾನಿ ಸಂರಕ್ಷಿಸುವ ಭರವಸೆ
Vijaya Karnataka Web archaeological department officers visited to manne
ಮಣ್ಣೆಗೆ ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ


ತ್ಯಾಮಗೊಂಡ್ಲು: ನಿರ್ಲಕ್ಷ್ಯಕ್ಕೊಳಗಾದ ಗಂಗರ ರಾಜಧಾನಿ ಮಣ್ಣೆ ಗ್ರಾಮಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ವಿಜಯಕರ್ನಾಟಕ ವರದಿ ಫಲಶೃತಿ ಎನಿಸಿದೆ.

ವಿಶ್ವ ಪ್ರವಾಸೋದ್ಯಮ ದಿನದಂದು ವಿಜಯಕರ್ನಾಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನಿರ್ಲಕ್ಷ್ಯಕ್ಕೊಳಗಾದ ಪ್ರವಾಸಿತಾಣಗಳ ಬಗ್ಗೆ ಗಂಗರ ಮಾನ್ಯಪುರಕ್ಕೆ ಪ್ರವಾಸಿ ಮಾನ್ಯತೆ ನೀಡಿ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ವರದಿ ಆಧರಿಸಿ ವಸ್ತು ಸ್ಥಿತಿ ಪರಿಶೀಲಿಸಿದರು.

ಪುರಾತತ್ವ ಇಲಾಖೆ ಅಧಿಕಾರಿ ಕಿರಣ್‌ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಶಾಸನಗಳು, ಸೂಳೆ ಗುಡಿ, ಕಪಿಲೇಶ್ವರ ದೇವಾಲಯ ಮತ್ತು ಅಕ್ಕ ತಂಗಿ ದೇವಾಲಯಗಳಿಗೆ ಭೇಟಿ ನೀಡಿ ಅವುಗಳ ಸ್ಥಿತಿಗತಿ ದಾಖಲಿಸಿಕೊಂಡರು.

ಬಳಿಕ ವಿಕ ಜೊತೆ ಮಾತನಾಡಿದ ಅಧಿಕಾರಿ ರಾಜಧಾನಿಗೆ ಹತ್ತಿರವಿರುವ ಗ್ರಾಮದ ಇತಿಹಾಸ ಮಣ್ಣಾಗುತ್ತಿದೆ. ಈ ಬಗ್ಗೆ ಬೆಳಕು ಚೆಲ್ಲಿದ ವಿಜಯ ಕರ್ನಾಟಕ ಮತ್ತು ಆಸಕ್ತ ಸಂಘಟನೆಗಳಿಗೆ ಧನ್ಯವಾದಗಳು. ಇಲ್ಲಿನ ಐತಿಹಾಸಿಕ ಶಾಸನಗಳು ಮತ್ತು ದೇವಾಲಯಗಳು ನಾಶದ ಅಂಚಿನಲ್ಲಿದ್ದು ಸ್ಥಳೀಯರೇ ಸಾಕಷ್ಟು ಹಾನಿ ಮಾಡಿದ್ದಾರೆ ಎಂದು ಬೇಸರಿಸಿದರು.

ರಕ್ಷಣೆ ಬಗ್ಗೆ ವರದಿ: ಸೂಳೆಗುಡಿ ಎಂದು ಕರೆಯುವ ಜೈನ ಬಸದಿಯೂ ದನದ ಕೊಟ್ಟಿಗೆಯಾಗಿ¨.æ ಜನರು ನಮ್ಮ ನಾಡಿನ ಇತಿಹಾಸವನ್ನು ಉಳಿಸುವಲ್ಲಿಇಲಾಖೆ ಯೊಂದಿಗೆ ಸಹಕಾರ ನೀಡಬೇಕು. ಇಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಮೇಲಿನ ಅಧಿಕಾರಿಗಳಿಗೆ ವರದಿ ನೀಡುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ