ಆ್ಯಪ್ನಗರ

ಪಟಾಕಿ ಸಿಡಿದು ಶಾಲಾ ಬಾಲಕನಿಗೆ ಗಂಭೀರ ಗಾಯ

ಪಟಾಕಿ ಸಿಡಿದು ಶಾಲಾ ಬಾಲಕನ ಮುಖಕ್ಕೆ ಸುಟ್ಟ ಗಾಯಗಳಾಗಿರುವ ಘಟನೆ ನಂದಗುಡಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ.

Vijaya Karnataka 8 Nov 2018, 3:00 pm
ನಂದಗುಡಿ: ಪಟಾಕಿ ಸಿಡಿದು ಶಾಲಾ ಬಾಲಕನ ಮುಖಕ್ಕೆ ಸುಟ್ಟ ಗಾಯಗಳಾಗಿರುವ ಘಟನೆ ನಂದಗುಡಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ.
Vijaya Karnataka Web boy injured in cracker blast
ಪಟಾಕಿ ಸಿಡಿದು ಶಾಲಾ ಬಾಲಕನಿಗೆ ಗಂಭೀರ ಗಾಯ


ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದ ಗ್ರೀನ್‌ ವ್ಯಾಲಿ ಶಾಲೆಯ 5ನೇ ತರಗತಿಯ ಬಾಲಕ ತನುಷ್‌ ಗಾಯಗೊಂಡ ಬಾಲಕ.

ಬಾಲಕ ಸಂಜೆ ತನ್ನ ಗೆಳೆಯರೊಂದಿಗೆ ಹೂಕುಂಡವನ್ನು ಸುರುಸುರು ಬತ್ತಿಯಿಂದ ಹಚ್ಚಿದ್ದು, ಹತ್ತಿಕೊಳ್ಳದೇ ಇದ್ದಾಗ ಕೈಯಿಂದ ತೆಗೆದು ನೋಡಲು ಹೋಗಿದ್ದಾನೆ. ಈ ವೇಳೆ ಹೂಕುಂಡ ಒಮ್ಮೆಲೇ ಸಿಡಿದು ಮುಖವೆಲ್ಲ ಸುಟ್ಟು ಹೋಗಿದೆ. ಘಟನೆ ನಡೆದ ತಕ್ಷ ಣವೇ ಪೋಷಕರು ಗಾಯಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಕಣ್ಣಿಗೆ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ದೀಪಾವಳಿ ಹಬ್ಬದ ವೇಳೆ ಹಾಗೂ ಪಟಾಕಿ ಸಿಡಿಸುವಾಗ ಸಾಕಷ್ಟು ಜನರಿಗೆ ಅದರಲ್ಲೂ ಮುಖ್ಯವಾಗಿ ಮಕ್ಕಳು ದುರಂತಕ್ಕೆ ಬಲಿಯಾಗುತ್ತಿದ್ದಾರೆ. ಸಾಕಷ್ಟು ಮಂದಿಗೆ ಹೂಕುಂಡ ಹಚ್ಚುವಾಗ, ಬಿಜಲಿ ಪಟಾಕಿಯಿಂದ, ರಾಕೆಟ್‌ ಕಿಡಿ ಸೋಕಿ ಗಾಯಗೊಂಡಿರುವುದು, ಇನ್ನೂ ಕೆಲವೆಡೆ ನೋಡುಗರಿಗೆ, ದಾರಿಹೋಕರಿಗೆ ಪಟಾಕಿ ಕಿಡಿ ತಾಗಿ ತೊಂದರೆಯಾಗಿರುವ ಘಟನೆಗಳು ನಡೆಯುತ್ತಿದ್ದರೂ ಪಟಾಕಿ ಸಿಡಿಸುವಾಗ ಮುನ್ನೆಚ್ಚರಿಕೆ ವಹಿಸದೇ ಇರುವುದೇ ಈ ಎಲ್ಲ ಅನಾಹುತಕ್ಕೆ ಕಾರಣ ಎಂದು ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ ಭಾಸ್ಕರ್‌ ರೆಡ್ಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ