ಆ್ಯಪ್ನಗರ

25 ಅಭ್ಯರ್ಥಿಗಳಿಂದ 32 ನಾಮಪತ್ರ ಸಲ್ಲಿಕೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಗೆ ನಾಮತ್ರ ಸಲ್ಲಿಸಲು ಕಡೇ ದಿನವಾದ ಮಾ.26ರ ಮಂಗಳವಾರ ಒಂದೇ ದಿನ 14 ನಾಮಪತ್ರ ಸಲ್ಲಿಕೆಯಾಗಿದೆ. ಅಧಿಸೂಚನೆ ಹೊರಡಿಸಿದ (ಮಾ.19) ದಿನದಿಂದ ಒಟ್ಟು 25 ಅಭ್ಯರ್ಥಿಗಳು 32 ನಾಮಪತ್ರ ಸಲ್ಲಿಸಿದ್ದಾರೆ. ವಿಶೇಷ ಎಂದರೆ ಮಾ.19ರಂದು ಮಂಗಳವಾರ ಎಂಬ ಕಾರಣಕ್ಕೆ ಕ್ಷೇತ್ರದಲ್ಲಿ ಯಾರೊಬ್ಬರು ನಾಮಪತ್ರ ಸಲ್ಲಿಸಿರಲಿಲ್ಲ. ಆದರೆ ಕಡೆದಿನ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

Vijaya Karnataka 27 Mar 2019, 5:00 am
ಕೊನೆ ದಿನ 14 ನಾಮಪತ್ರ ಸಲ್ಲಿಕೆ | ವೀರಪ್ಪಮೊಯ್ಲಿ 3, ಬಚ್ಚೇಗೌಡ ನಾಲ್ಕು ನಾಮಪತ್ರ
Vijaya Karnataka Web chikkaballapura lokasabha constituensy 25 candidates 32 nomination filed
25 ಅಭ್ಯರ್ಥಿಗಳಿಂದ 32 ನಾಮಪತ್ರ ಸಲ್ಲಿಕೆ


ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ/ಬೆಂಗಳೂರು ಗ್ರಾಮಾಂತರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಗೆ ನಾಮತ್ರ ಸಲ್ಲಿಸಲು ಕಡೇ ದಿನವಾದ ಮಾ.26ರ ಮಂಗಳವಾರ ಒಂದೇ ದಿನ 14 ನಾಮಪತ್ರ ಸಲ್ಲಿಕೆಯಾಗಿದೆ. ಅಧಿಸೂಚನೆ ಹೊರಡಿಸಿದ (ಮಾ.19) ದಿನದಿಂದ ಒಟ್ಟು 25 ಅಭ್ಯರ್ಥಿಗಳು 32 ನಾಮಪತ್ರ ಸಲ್ಲಿಸಿದ್ದಾರೆ. ವಿಶೇಷ ಎಂದರೆ ಮಾ.19ರಂದು ಮಂಗಳವಾರ ಎಂಬ ಕಾರಣಕ್ಕೆ ಕ್ಷೇತ್ರದಲ್ಲಿ ಯಾರೊಬ್ಬರು ನಾಮಪತ್ರ ಸಲ್ಲಿಸಿರಲಿಲ್ಲ. ಆದರೆ ಕಡೆದಿನ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ನಿಂದ ವೀರಪ್ಪಮೊಯ್ಲಿ, ಬಿಜೆಪಿಯಿಂದ ಬಚ್ಚೇಗೌಡ, ಬಿಎಸ್‌ಪಿಯಿಂದ ದ್ವಾರಕನಾಥ್‌, ಸಿಪಿಐಎಂನಿಂದ ವರಲಕ್ಷ್ಮಿಅವರು ನಾಮಪತ್ರ ಸಲ್ಲಿಸಿದರೆ, ವಿವಿಧ ನೋಂದಾಯಿತ ಪಕ್ಷಗಳಿಂದ 9 ಮಂದಿ ಹಾಗೂ ಪಕ್ಷೇತರರಾಗಿ 12 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ವೀರಪ್ಪಮೊಯ್ಲಿ ಅವರು ಮೂರು ನಾಮಪತ್ರ ಸಲ್ಲಿಸಿದ್ದರೆ, ಬಚ್ಚೇಗೌಡ ಅವರು ನಾಲ್ಕು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉಳಿದಂತೆ ಇತರೆ ಅಭ್ಯರ್ಥಿಗಳು ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಪರಿಶೀಲನೆ: ಬುಧವಾರ(ಮಾ.27)ನಾಮಪತ್ರ ಪರಿಶೀಲನೆ ನಡೆಯಲಿದ್ದು, ಈ ಸಂಬಂಧ ಈಗಾಗಲೇ ನಾಮಪತ್ರ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಪರಿಶೀಲನೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ. ಬೆಳಗ್ಗೆ 11ಗಂಟೆಯಿಂದ ಒಂದಾದ ಮೇಲೆ ಒಂದು ನಾಮಪತ್ರ ಪರಿಶೀಲನೆಗೆ ನಡೆಸಲಾಗುವುದು. ಪರಿಶೀಲನೆ ಸಂದರ್ಭದಲ್ಲಿ ಅಭ್ಯರ್ಥಿ ಅಥವಾ ಅಭ್ಯರ್ಥಿ ಪರವಾಗಿ ಅವರ ಏಜೆಂಟ್‌, ಕಾನೂನು ತಜ್ಞರು ಹಾಜರಿರಬಹುದು.

ಉಮೇದುವಾರಿಕೆ ವಾಪಸ್‌: ನಾಮಪತ್ರ ಪರಿಶೀಲನೆ ಬಳಿಕ ಕ್ರಮ ಬದ್ಧ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ. ಮಾ.29 ರಂದು ಉಮೇದುವಾರಿಕೆ ವಾಪಸ್‌ ಪಡೆಯಲು ಅವಕಾಶವಿದ್ದು, ಮಧ್ಯಾಹ್ನ 3 ಗಂಟೆಯೊಳಗೆ ವಾಪಸ್‌ ಪಡೆಯಬಹುದು. ತದನಂತರ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಟಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್‌ ಶ್ರವಣ್‌ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳು

ರಾಷ್ಟ್ರೀಯ ಪಕ್ಷಗಳು

1. ಎಂ.ವೀರಪ್ಪಮೊಯ್ಲಿ-ಕಾಂಗ್ರೆಸ್‌

2. ಡಾ.ಸಿ.ಎಸ್‌.ದ್ವಾರಕಾನಾಥ್‌-ಬಿಎಸ್‌ಪಿ

3. ಬಿ.ಎನ್‌.ಬಚ್ಚೇಗೌಡ-ಬಿಜೆಪಿ

4. ಎಸ್‌.ವರಲಕ್ಷ್ಮೇ-ಸಿಪಿಐಎಂ

ಪ್ರಾದೇಶಿಕ ಹಾಗೂ ಪಕ್ಷೇತರರು

1. ಕನಕಲಕ್ಷೀ

2. ಎಲ್‌.ನಾಗರಾಜು

3. ನಸುರುಲ್ಲಾ

4. ಜಿ.ಮುನಿರಾಜು

5. ಕೆ.ಎಸ್‌.ನಳಿನಾ

6. ಜಿ.ಎನ್‌.ರವಿ

7. ಎಸ್‌.ವಿ.ಫಣಿರಾಜು

8. ರಮೇಶ್‌ ಎನ್‌.-ಪಕ್ಷೇತರ

9. ಬಿ.ಎಂ.ನಾರಾಯಣಸ್ವಾಮಿ

10. ರಾಮಾಂಜಿನಪ್ಪ-

11. ಸಯ್ಯದ್‌ ಅಲೀಂ ಪಾಷ

12. ಜಿ.ಎನ್‌.ವೆಂಕಟೇಶ್‌

13. ಡಿ.ಮುನಿರಾಜು

14. ಖಾದರ್‌ ಸುಭಾನ್‌ಖಾನ್‌

15. ನಜೀರ್‌ ಅಹಮ್ಮದ್‌

16. ಎನ್‌.ನರಸಿಂಹಮೂರ್ತಿ

17. ಎಸ್‌.ಆರ್‌.ನಾಗೇಶ್‌ರೆಡ್ಡಿ

18. ನಾಗೇಂದ್ರರಾವ್‌ ಶಿಂಡೇ

19. ಅಬ್ದುಲ್‌ ಖರೀಂ ದೇಸಾಯಿ

20. ತೋಪಯ್ಯ

21. ಶೀತಲ್‌ ಚವಾಣ್‌


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ