ಆ್ಯಪ್ನಗರ

ಲೋಕ ಕಲ್ಯಾಣಕ್ಕೆ ಬಂದ ಮಹಾನ್‌ ಪುರುಷ ಕ್ರಿಸ್ತ

ಬೆತ್ಲೆಹೇಮ್‌ನ ಗೋದಲಿಯಲ್ಲಿ ಜನಿಸಿ, ಕಲ್ವಾರಿಯ ಶಿಲುಬೆಯಲ್ಲಿ ಜೀವ ಸಮರ್ಪಿಸಿದ ಕ್ರಿಸ್ತನು ದಿವ್ಯ ಪುರುಷ ಹಾಗೂ ಲೋಕ ಕಲ್ಯಾಣಕ್ಕಾಗಿ ಧರೆಗೆ ಬಂದಿಳಿದ ಮಹಾನ್‌ ಪುರಷನಾಗಿದ್ದಾನೆ ಎಂದು ಕಾರಹಳ್ಳಿ ಗ್ರಾಪಂ ಮಾಜಿ ಸದಸ್ಯ ನರಸಿಂಹಮೂರ್ತಿ ತಿಳಿಸಿದರು.

Vijaya Karnataka 26 Dec 2018, 5:00 am
ಕುಂದಾಣ: ಬೆತ್ಲೆಹೇಮ್‌ನ ಗೋದಲಿಯಲ್ಲಿ ಜನಿಸಿ, ಕಲ್ವಾರಿಯ ಶಿಲುಬೆಯಲ್ಲಿ ಜೀವ ಸಮರ್ಪಿಸಿದ ಕ್ರಿಸ್ತನು ದಿವ್ಯ ಪುರುಷ ಹಾಗೂ ಲೋಕ ಕಲ್ಯಾಣಕ್ಕಾಗಿ ಧರೆಗೆ ಬಂದಿಳಿದ ಮಹಾನ್‌ ಪುರಷನಾಗಿದ್ದಾನೆ ಎಂದು ಕಾರಹಳ್ಳಿ ಗ್ರಾಪಂ ಮಾಜಿ ಸದಸ್ಯ ನರಸಿಂಹಮೂರ್ತಿ ತಿಳಿಸಿದರು.
Vijaya Karnataka Web christmas celebrated in kundana
ಲೋಕ ಕಲ್ಯಾಣಕ್ಕೆ ಬಂದ ಮಹಾನ್‌ ಪುರುಷ ಕ್ರಿಸ್ತ


ಕುಂದಾಣ ಹೋಬಳಿಯ ಕಾರಹಳ್ಳಿ ಗ್ರಾಮದಲ್ಲಿರುವ ಅವರ ನಿವಾಸದಲ್ಲಿ ಕುಟುಂಬ ಸಮೇತ ಯೇಸುವಿಗೆ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. ಕ್ರಿಸ್ತನ ಹುಟ್ಟಿನ ಆಚರಣೆಗೆ ಮಹತ್ವ ಬಂದಿರುವುದು ಆತ ತನ್ನ ಜನನ ಹಾಗೂ ಮರಣದ ಮಧ್ಯೆ ಬಾಳಿದ-ಬೋಧಿಸಿದ ವಿಚಾರಗಳಿಂದ. ಅನಾಥರು, ರೋಗಿಷ್ಠರು, ಅನ್ಯಾಯಕ್ಕೊಳಗಾದವರೆಡೆಗೆ ಕ್ರಿಸ್ತ ತೋರಿದ ಪ್ರೀತ್ಯಾದರ ಅಪಾರ. ಇದನ್ನೇ ಕ್ರಿಸ್ತ ಬೋಧಿಸಿದ. ಆತನ ಬಾಳೇ ಪ್ರೀತಿಯ ಪಥ, ಇದೇ ದೇವ ಉಪಾಸನೆಯ ಪರಮ ಪಥ ಎಂಬುವುದು ಕ್ರಿಸ್ತ ನೀಡಿದ ಪರಮೋಚ್ಚ ಸಂದೇಶವಾಗಿದೆ ಎಂದು ಹೇಳಿದರು.

ಈ ವೇಳೆ ಹಿರಿಯರಾದ ಕಾರಹಳ್ಳಿ ಗ್ರಾಪಂ ಸದಸ್ಯ ಶ್ರೀನಿವಾಸ್‌, ಮುಖಂಡರಾದ ಜಗದೀಶ್‌ (ಪೂಜಾರಿ), ಮಹಿಳೆಯರಾದ ಗೀತಾ, ಲೀಲಾ ಹಾಗೂ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತಿರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ