ಆ್ಯಪ್ನಗರ

ನಲ್ಲೂರಿನಲ್ಲಿ ಕ್ರಿಸ್‌ಮಸ್‌ ಆಚರಣೆ

ಯೇಸು ಕ್ರಿಸ್ತನ ಹುಟ್ಟು ಹಬ್ಬವನ್ನು ಕ್ರಿಸ್‌ಮಸ್‌ ಹಬ್ಬವಾಗಿ ಆಚರಿಸುವ ಕ್ರೈಸ್ತರು ಶಾಂತಿ ಹೆಸರಿನಲ್ಲಿ ಆಚರಿಸುತ್ತಿದ್ದಾರೆ ಎಂದು ತಾಪಂ ಸಾಮಾಜಿಕ ನ್ಯಾಯಾ ಸಮಿತಿ ಅಧ್ಯಕ್ಷ ಮಂಜುನಾಥ್‌ ಹೇಳಿದರು.

Vijaya Karnataka 26 Dec 2018, 5:00 am
ನಲ್ಲೂರು: ಯೇಸು ಕ್ರಿಸ್ತನ ಹುಟ್ಟು ಹಬ್ಬವನ್ನು ಕ್ರಿಸ್‌ಮಸ್‌ ಹಬ್ಬವಾಗಿ ಆಚರಿಸುವ ಕ್ರೈಸ್ತರು ಶಾಂತಿ ಹೆಸರಿನಲ್ಲಿ ಆಚರಿಸುತ್ತಿದ್ದಾರೆ ಎಂದು ತಾಪಂ ಸಾಮಾಜಿಕ ನ್ಯಾಯಾ ಸಮಿತಿ ಅಧ್ಯಕ್ಷ ಮಂಜುನಾಥ್‌ ಹೇಳಿದರು
Vijaya Karnataka Web christmas celebrated in nallur
ನಲ್ಲೂರಿನಲ್ಲಿ ಕ್ರಿಸ್‌ಮಸ್‌ ಆಚರಣೆ


ದೇವನಹಳ್ಳಿ ತಾಲೂಕು ನಾಗೇನಹಳ್ಳಿ ಗ್ರಾಮದ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್‌ ಸಂಭ್ರಮಾಚರಣೆಯಲ್ಲಿ ಮಾತನಾಡಿ, ಯೇಸುವಿನ ವಿಚಾರಗಳು ತಿಳಿದುಕೊಳ್ಳಲು ಬಹಳಷ್ಟಿದೆ. ಹಿಂದೆ ಪ್ರೌಢಶಾಲೆ ಹಂತದಲ್ಲಿ ಯೇಸುವಿನ ಕೊನೆಯ ದಿನ ಎಂಬ ಪಾಠವನ್ನು ಓದಿದ್ದೇವೆ. ಯೇಸುವಿನ ಬಗ್ಗೆ ತಿಳಿದುಕೊಂಡರೆ ಮನಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಯೇಸುಕ್ರಿಸ್ತನನ್ನು ಪ್ರತಿಯೊಬ್ಬರೂ, ಲೋಕಕ್ಕೆ ಬೆಳಕಾಗಿ ಶಾಂತಿ ಸಮಾಧಾನ, ಒಬ್ಬರನ್ನು ಇನ್ನೊಬ್ಬರು ಪ್ರೀತಿಸುವುದು ಮತ್ತೊಬ್ಬರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳುವುದು ಲೋಕಕಲ್ಯಾಣಕ್ಕಾಗಿ ಈ ರೀತಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಹೇಳಿದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವರಾಜ್‌ ಮಾತನಾಡಿ, ಹೊಸ ವರ್ಷ ಆಚರಣೆ ಸಮೀಪದಲ್ಲಿರುವಾಗ ಕ್ರಿಸ್‌ಮಸ್‌ ಹಬ್ಬವನ್ನೂ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಮನುಷ್ಯನು ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು. ಯೇಸುಕ್ರಿಸ್ತನು ಸಾಮಾನ್ಯ ಮನುಷ್ಯನಾಗಿ ಹುಟ್ಟಿದ್ದು ಈಗ ಅವರ ಕೀರ್ತಿ ಅಪಾರವಾಗಿದೆ ಎಂದರು.

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಾದ್ಯಂತ ಕ್ರೈಸ್ತ ಮಂದಿರಗಳಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ಏಸುಕ್ರಿಸ್ತನನ್ನು ನೆನೆದು ಸಂಭ್ರಮದ ಸಡಗರದಿಂದ ಆಚರಣೆ ನಡೆಯಿತು. ಬೂದಿಗೆರೆ ನಾಗೇನಹಳ್ಳಿ ಚನ್ನಹಳ್ಳಿ ಮಲ್ಲೇಪುರ ಗ್ರಾಮಗಳ ಕ್ರೈಸ್ತ ಮಂದಿರಗಳ ಮುಂದೆ ದನದ ಕೊಟ್ಟಿಗೆ ಆಕಾರದಲ್ಲಿ ಹುಲ್ಲಿನ ಹೊದಿಗೆ ಇರುವ ಕೊಟ್ಟಿಗೆ ತಯಾರಿಸಿ ಏಸು ಕ್ರಿಸ್ತನ ಮೂರ್ತಿಯನ್ನು ಇಟ್ಟಿರುವುದು ಕಂಡು ಬಂದಿತ್ತು. ಶ್ರದ್ಧಾ ಭಕ್ತಿಯಿಂದ ಯೇಸುಕ್ರಿಸ್ತನನ್ನು ಭಕ್ತಿಭಾವದಿಂದ ನೆನೆದರು.

ಈ ಸಂದರ್ಭದಲ್ಲಿ ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ಸದಸ್ಯ ರಮೇಶ್‌, ಮಾಜಿ ಸದಸ್ಯ ಮಹೇಶ್‌, ಸೋಮತ್ತನಹಳ್ಳಿ ಎಂಪಿಸಿಎಸ್‌ ಅಧ್ಯಕ್ಷ ಗಂಗಾಧರ್‌, ಮಾಜಿ ಕಾರ್ಯದರ್ಶಿ ರಾಮಕೃಷ್ಣಪ್ಪ, ಮಾಜಿ ಅಧ್ಯಕ್ಷ ಮುನಿರಾಜಪ್ಪ, ಅರೇ ಬಿನ್ನಮಂಗಲ ಗ್ರಾಪಂ ಸದಸ್ಯ ನರಸಿಂಹಯ್ಯ, ನಾಗೇನಹಳ್ಳಿ ಗ್ರಾಮದ ಮುಖಂಡ ಮಂಜುನಾಥ್‌,ಹಾಗೂ ರಾಮಚಂದ್ರ ಇನ್ನೂ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ