ಆ್ಯಪ್ನಗರ

ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಉಪಚುನಾವಣೆ ಕಣಕ್ಕೆ ಪದ್ಮಾವತಿ ಸುರೇಶ್

ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿತು. ಹೊಸಕೋಟೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಪದ್ಮಾವತಿ ಸುರೇಶ್ ಶನಿವಾರ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಥ್‌ ನೀಡಿದ್ದಾರೆ.

Vijaya Karnataka Web 16 Nov 2019, 2:42 pm
ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿತು. ಹೊಸಕೋಟೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಪದ್ಮಾವತಿ ಸುರೇಶ್ ಶನಿವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರಕ್ಕೂ ಮುನ್ನ ಹೊಸಕೋಟೆ ಕೆಇಬಿ ಸರ್ಕಲ್ ನಿಂದ ಅಭ್ಯರ್ಥಿಯನ್ನು ಮೆರವಣೆಯಲ್ಲಿ ಕರೆತರಲಾಯಿತು. ಮದ್ಯಾಹ್ನ 1 ಗಂಟೆಗೆ ಹೊಸಕೋಟೆ ವಿಧಾನ ಸಬಾ ಕ್ಷೇತ್ರದ ಉಪ ಚುನಾವಣೆಗೆ ನಾಮ ಪತ್ರ ಸಲ್ಲಿಸಿದರು. ಅಪಾರ ಸಂಖ್ಯೆಯ ಕಾರ್ಯಕರ್ತರು ಮೆರವಣಿಗೆ ಸಾಥ್ ನೀಡಿದರು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
Vijaya Karnataka Web padmavathi suresh
ಪದ್ಮಾವತಿ ಸುರೇಶ್‌


8 ಸ್ಥಾನಗಳನ್ನೂ ಗೆಲ್ಲದೆ ಸಂಕಷ್ಟಕ್ಕೆ ಸಿಲುಕಲಿದೆ ಬಿಜೆಪಿ: ಸಿದ್ದರಾಮಯ್ಯ ಭವಿಷ್ಯವಾಣಿ

ನಾಮಪತ್ರ ಸಲ್ಲಿಕೆಗೂ ಮೊದಲು ಮನೆ ದೇವರಿಗೆ ಪೂಜೆ:
ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮಾವತಿ ಸುರೇಶ್ ಇಂದು ನಾಮಪತ್ರ ಸಲ್ಲಿಸುವ ಮೊದಲು ಹೊಸಕೋಟೆ ತಾಲೂಕಿನ ತಾವರೆಕೆರೆಯಲ್ಲಿರುವ ಮನೆ ದೇವರು ರಾಮೇದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿಗೆ ಪತಿ ಶಾಸಕ ಬೈರತಿ ಸುರೇಶ್, ಹಾಗೂ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು. ಹೊಸಕೋಟೆ ತಾಲೂಕಿನ ಮತದಾರರು ನಮ್ಮ ಜೊತೆ ಇದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಗೆಲುವು ಸದಿಸಲಿದ್ದಾರೆ ಎಂದು ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್ ತಿಳಿಸಿದ್ದಾರೆ.



ಯಾವುದೇ ಜಾತಿ ಭೇದ ಇಲ್ಲ:
ಕಾಂಗ್ರೆಸ್ ಪಕ್ಷಕ್ಕೆ ಇರುವುದು ಒಂದೇ ಜಾತಿ, ನಮ್ಮ ಪಕ್ಷಕ್ಕೆ ಯಾವುದೇ ಜಾತಿ ಜನಾಂಗ ಇಲ್ಲ ಎಲ್ಲಾ ಅಹಿಂದ ವರ್ಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ. ಯಾವುದೇ ಜನಾಂಗದ ಸ್ಪರ್ದಿ ನಮಗೆ ಎದುರಾಳಿ ಇಲ್ಲ. ಇಲ್ಲಿ ಜಾತಿ ಎನ್ನುವುದು ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಫಾಕ್ಸ ಬಹಳು ದೊಡ್ಡಪಕ್ಷವಾಗಿ ಹೊಸಕೋಟೆ ಕ್ಷೇತ್ರದಲ್ಲಿ ಹೊರ ಹೊಮ್ಮಿದೆ. ತಾಲೂಕಿನ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಅವರಿಗೆ ಮತ ಹಾಕುವ ಮೂಲಕ ತಾಲೂಕಿನ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು.

'ಕೈ' ಅಭ್ಯರ್ಥಿಗಳಿಗೆ ಟಿಕೆಟ್ ಸಂಕಟ, ಆಯ್ಕೆ ಸಮಿತಿಯಲ್ಲಿ ಬಣಗಳ ಬಡಿದಾಟ! ಹೈಕಮಾಂಡ್ ಅಂಗಳಕ್ಕೆ ದೂರು

ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತೆ ತಾಲೂಕಿನ ಮತದಾರರ ಮುಂದೆ ಬಂದು ನಾಟಕ ವಾಡುತ್ತಿದ್ದಾರೆ. ಅವರನ್ನು ನಂಬದೆ ಮತ್ತೆ ತಾಲೂಕಿನ ಮತದಾರರು ಮೋಸ ಹೋಗಬೇಡಿ. ತಾಲೂಕಿನ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ತಾಲ್ಲೂಕಿನ ತ್ರಿಕೋನ ಸ್ಪರ್ಧೆ ಆದರೂ ಸರಿ, ನಾಲ್ಕು ಸ್ಪರ್ಧೆ ಆದರೂ ಸರಿ ಕಾಂಗ್ರೆಸ್ ಪಕ್ಷವನ್ನು ನಂಬಿರುವ ಸಹಸ್ರಾರು ಸಂಖ್ಯೆಯ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ