ಆ್ಯಪ್ನಗರ

ಕೈಗಾರಿಕೆಯ ಕಾರ್ಮಿಕರಿಗೆ ಉದ್ಯೋಗ ಅಡಕತ್ತರಿ: ಕೊರೊನಾದಿಂದಾಗಿ ನೆಲ ಕಚ್ಚಿದ ಇಂಡಸ್ಟ್ರಿಗಳು

ಕೊರೊನಾ ವೈರಸ್ ತನ್ನ ಕದಂಬ ಬಾಹುಗಳನ್ನು ಎಲ್ಲೆಡೆ ಚಾಚಿದ್ದು, ಜನರ ಜೀವವಲ್ಲದೆ ಜೀವನದೊಂದಿಗೂ ತನ್ನ ಆಟವನ್ನು ಮುಂದುವರಿಸಿದೆ. ಕೊರೊನಾದಿಂದಾಗಿ ಎಲ್ಲ ಕ್ಷೇತ್ರಗಳು ನೆಲ ಕಚ್ಚಿದ್ದು ತಾಲೂಕಿನ ಬಾಶೆಟ್ಟಿಹಳ್ಳಿ ಹಾಗೂ ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆಗಳಲ್ಲಿ ಸಿದ್ಧವಾಗುತ್ತಿರುವ ವಸ್ತುಗಳಿಗೆ ಬೇಡಿಕೆ ಇಲ್ಲದೆ ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಪರಿಸ್ಥಿತಿ ಎದುರಾಗಿದೆ.

Vijaya Karnataka Web 30 Jun 2020, 9:33 am
ಆದರ್ಶ ಕೆ ದೊಡ್ಡಬಳ್ಳಾಪುರ ಗ್ರಾಮಾಂತರ
Vijaya Karnataka Web ಸಾಂದರ್ಭಿಕ ಚಿತ್ರ

ಬೆಂಗಳೂರು ಗ್ರಾಮಾಂತರ: ಬಾಶೆಟ್ಟಿಹಳ್ಳಿ ಹಾಗೂ ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಕಂಡುಕೊಂಡಿದ್ದಾರೆ. ಈ ಕೈಗಾರಿಕೆಗಳು ಕಚ್ಚಾವಸ್ತುಗಳಿಗೆ ವಿದೇಶವನ್ನೇ ಅವಲಂಬಿಸಿತ್ತು. ಇನ್ನೂ ಕೈಗಾರಿಕೆಗಳನ್ನು ಅವಲಂಬಿಸಿದ್ದು ಇದೀಗ ಕೊರೊನಾದಿಂದಾಗಿ ಕಚ್ಚಾ ವಸ್ತುಗಳ ಪೂರೈಕೆ ಏರುಪೇರು ಕಂಡು ಬಂದಿದ್ದು ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿದೆ.

ಉತ್ತರ ಭಾರತದ ಕಾರ್ಮಿಕರು ವಾಪಸ್‌
ಕೈಗಾರಿಕೆಗಳಲ್ಲಿ ಒಡಿಶಾ, ಉತ್ತರ ಪ್ರದೇಶ, ಬಿಹಾರ ಮೂಲದ ಸಾವಿರಾರು ಕಾರ್ಮಿಕರು ಕೆಲಸವನ್ನು ಕಂಡುಕೊಂಡಿದ್ದಾರೆ. ಆದರೆ ಹೆಚ್ಚಿನ ಉತ್ತರ ಭಾರತ ಮೂಲದ ಕಾರ್ಮಿಕರು ಕೆಲಸ ಕಳೆದುಕೊಂಡು ಮನೆ ಬಾಡಿಗೆಗೂ ಕಷ್ಟ ಪಡುವ ಸ್ಥಿತಿ ತಲುಪಿತ್ತು. ಇದರಿಂದಾಗಿ 300ಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಹುಟ್ಟೂರಿಗೆ ತೆರಳಿದ್ದು ಇನ್ನೂ ಹೆಚ್ಚಿನ ಕಾರ್ಮಿಕರು ಮೂಲ ಸ್ಥಾನಕ್ಕೆ ವಾಪಸ್‌ ಆಗಲು ಸಿದ್ಧರಾಗುತ್ತಿದ್ದಾರೆ.

ಮೂರು ದಿನ ಕೆಲಸ ಅರ್ಧ ಸಂಬಳ
ತಾಲೂಕಿನಲ್ಲಿ ಕೆಲವು ಕೈಗಾರಿಕೆಗಳು ಎಲ್ಲ ಕೈಗಾರಿಕೆಯ ಎಲ್ಲಾ ಕಾರ್ಮಿಕರಿಗೂ ಕೆಲಸ ನೀಡುವ ಸಲುವಾಗಿ ಕೆಲಸವನ್ನು ಕಾರ್ಮಿಕರಲ್ಲಿ ಹಂಚಿಕೆ ಮಾಡಲಾಗಿದೆ ಇದ್ದರಿಂದಾಗಿ ಕೆಲವು ಕೈಗಾರಿಕೆಗಳಲ್ಲಿ ಪ್ರತಿ ಕಾರ್ಮಿಕರಿಗೆ ತಿಂಗಳಲ್ಲಿ 3 ದಿನದ ಕೆಲಸದೊಂದಿಗೆ ಅರ್ಧ ಸಂಬಳ ನೀಡುತ್ತಿದ್ದು, ಇನ್ನೂ ಕೆಲವು ಕೈಗಾರಿಕೆಗಳಲ್ಲಿ ಒಂದು ವಾರ ಕೆಲಸ ಒಂದು ವಾರ ರಜೆಯನ್ನು ನೀಡುತ್ತಿದೆ.

ಜೀವನ ಕಷ್ಟ
ಕೈಗಾರಿಕೆಗಳನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿದೆ. ಇದರಲ್ಲಿ ಬರುವ ಸಂಬಳವನ್ನು ನಂಬಿ ಸಾಲವನ್ನು ಪಡೆದ್ದಿದ್ದೇವೆ. ಆದರೆ ಇದೀಗ ಕೊರೊನಾದಿಂದಾಗಿ ಕೆಲಸವೇ ಇಲ್ಲಇದ್ದರೂ ಕೂಡ ಅರ್ಧ ಸಂಬಳ ದೊರೆಯುತ್ತಿದೆ. ಇದೇ ರೀತಿ ಮುಂದುವರಿದರೆ ಜೀವನ ಸಾಗಿಸುವುದು ಕೂಡಾ ಕಷ್ಟ ವಾಗಿದೆ ಎಂದು ಕಾರ್ಮಿಕ ಸಚಿನ್‌ ತಿಳಿಸಿದರು.

ಶಿಪ್ಟ್‌ ಕಷ್ಟ
ತಾಲೂಕಿನಲ್ಲಿ ಕೆಲವು ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಶಿಫ್ಟ್‌ಗಳ ಅನುಸಾರ ಬರುವಂತೆ ತಿಳಿಸಲಾಗಿದೆ .ಆದರೆ ಆ ಸಮಯಕ್ಕೆ ಸರಿಯಾಗಿ ಹಳ್ಳಿಗಳಿಂದ ಕೆಲಸಕ್ಕೆ ತೆರಳಲು ಯಾವುದೇ ವಾಹನ ಸೌಲಭ್ಯವಿಲ್ಲ. ಮೊದಲ ನಿಂತೆ ಕೆಲಸಕ್ಕೆ ಅನುವು ಮಾಡಿಕೊಟ್ಟರೆ ತುಂಬಾ ಸಹಾಯವಾಗುತ್ತದೆ ಎಂದು ಕಾರ್ಮಿಕರಾದ ಪ್ರಮೀಳಾ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಹಳ್ಳಿಗಳಿಂದ ಬರುವ ಕಾರ್ಮಿಕರಿಗೆ ಸಹಾಯಕವಾಗುವಂತೆ ಕೈಗಾರಿಕೆಗಳು ನಡೆದುಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕಾರ್ಮಿಕರ ಕೆಲಸದ ಬಗ್ಗೆ ಕೈಗಾರಿಕೆಗಳಿಗೆ ತಿಳಿಸಲಾಗುತ್ತದೆ.
ಪ್ರದೀಪ್‌, ಕಾರ್ಮಿಕ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ