ಆ್ಯಪ್ನಗರ

ಉಳಿತಾಯದ ಪಾಠ ಕಲಿಸಿದ ಕೊರೊನಾ: ದುಂದು ವೆಚ್ಚಕ್ಕೆ ಕಡಿವಾಣ ಹಾಕಿದ ಜನ

ಕೊರೊನಾ ವೈರಸ್‌ ಮನುಷ್ಯರಿಗೆ ಹಲವು ಪಾಠಗಳನ್ನು ಕಲಿಸಿದೆ. ಹಲವರಲ್ಲಿ ಹಣ ಉಳಿತಾಯದ ಪಾಠ ಕಲಿಸಿದ್ದು, ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತಿದೆ. ಅಗತ್ಯ ವಸ್ತುಗಳ ಹೊರತಾಗಿ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುತ್ತಿದ್ದಾರೆ.

Vijaya Karnataka Web 24 May 2020, 9:16 am
-ಎನ್‌. ಪ್ರಸನ್ನ ಕುಮಾರ್‌
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು ಗ್ರಾಮಾಂತರ: ಕೊರೊನಾ ಆರ್ಥಿಕ ಸಂಕಷ್ಟವನ್ನು ಉಂಟು ಮಾಡುವುದರ ಜತೆಗೆ ಹಲವಾರು ಉಳಿತಾಯದ ಪಾಠಗಳನ್ನೂ ಕಲಿಸಿದೆ.

ಲಾಕ್‌ಡೌನ್‌ ಘೋಷಿಸುವುದಕ್ಕೆ ಮೊದಲು ಹೆಚ್ಚಿನವರ ಮಾಸಿಕ ಆದಾಯ, ವ್ಯಾಪಾರ ವಹಿವಾಟು ಉತ್ತಮವಾಗಿತ್ತು. ಆದರೆ, ಈಗ ಅದೆಲ್ಲವೂ ಕುಸಿದು ಆತಂಕ ಎದುರಾಗಿದೆ. ಒಳ್ಳೆಯ ಆದಾಯವಿದ್ದ ಕಾಲದಲ್ಲಿ ಸಾಕಷ್ಟು ಬಿಂದಾಸ್‌ ಖರ್ಚು ಮಾಡುತ್ತಿದ್ದವರು ಈಗ ಖರ್ಚಿಗೆ ಲೆಕ್ಕಾಚಾರ ಆರಂಭಿಸಿದ್ದಾರೆ. ಕೊರೊನಾ ಎಷ್ಟು ಕಾಲ ನಮ್ಮ ಜತೆಗೆ ಇರುತ್ತದೆ ಎನ್ನುವುದು ಗೊತ್ತಿಲ್ಲ. ಹಾಗಾಗಿ, ಮುಂದಿನ ಜೀವನಕ್ಕೆ ಸೂಕ್ತ ಪ್ಲ್ಯಾನಿಂಗ್‌ ಮಾಡಿಕೊಳ್ಳುವ ಅನಿವಾರ್ಯತೆ ಎಲ್ಲರಿಗೂ ಎದುರಾಗಿದೆ. ಹಬ್ಬ ಹರಿದಿನ, ವೀಕೆಂಡ್‌ ತಿರುಗಾಟ, ಮದುವೆ ಸಮಾರಂಭ, ಶಾಪಿಂಗ್‌ ಹೀಗೆ ಹಲವು ವಿಧದಲ್ಲಿ ಕೈ ಬಿಚ್ಚಿ ಖರ್ಚು ಮಾಡುತ್ತಿದ್ದವರು ಅಗತ್ಯ ವಸ್ತುಗಳ ಹೊರತಾಗಿ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುತ್ತಿದ್ದಾರೆ.

ಬದಲಾಗಿದೆ ಬದುಕು
* ಊಟ, ತಿಂಡಿಗಾಗಿ ಅನಗತ್ಯವಾಗಿ ಹೋಟೆಲ್‌ಗೆ ಹೋಗುತ್ತಿದ್ದವರಿಗೆ ಈಗ ಮನೆ ಊಟವೇ ಗುಡ್‌
* ಬೀಡಿ, ಸಿಗರೇಟು, ಮದ್ಯ ಸೇರಿದಂತೆ ದುಶ್ಚಟಕ್ಕೆ ಖರ್ಚು ಮಾಡುತ್ತಿದ್ದವರು ಸ್ವಲ್ಪ ಯೋಚಿಸುತ್ತಿದ್ದಾರೆ.
* ಶಾಪಿಂಗ್‌ ಕಡಿಮೆಯಾಗುತ್ತಿದೆ, ಕಾರು, ಬೈಕ್‌ನಲ್ಲಿ ಅನಗತ್ಯ ಸಂಚಾರಕ್ಕೆ ಬ್ರೇಕ್‌ ಹಾಕುತ್ತಿದ್ದಾರೆ
* ಹೊಸ ವಾಹನ ಖರೀದಿಸುವ ಯೋಚನೆಯಲ್ಲಿದ್ದವರು ಸೆಕೆಂಡ್‌ ಹ್ಯಾಂಡ್‌ನತ್ತ ಮುಖ ಮಾಡಿದ್ದಾರೆ
ಹೊಸಕೋಟೆ: ಗರ್ಭಿಣಿಗೆ ಕೊರೊನಾ ಪಾಸಿಟಿವ್‌; 500 ಲೀಟರ್‌ ಹಾಲು ಚರಂಡಿ ಪಾಲು!
ಲಾಕ್‌ಡೌನ್‌ನಿಂದ ಈ ಬಾರಿಯ ಯುಗಾದಿ ಹಬ್ಬದಲ್ಲಿ ಕನಿಷ್ಠ ಐದು ಸಾವಿರ ಹಣ ಉಳಿತಾಯವಾಯಿತು. ಮುಂದಿನ ದಿನಗಳಲ್ಲಿ ದುಂದುವೆಚ್ಚ ಮಾಡದೆ ಹಣ ಉಳಿತಾಯದ ಬಗ್ಗೆಪ್ಲ್ಯಾನಿಂಗ್‌ ಮಾಡುತ್ತೇನೆ.
-ರಮೇಶ್‌, ದೊಡ್ಡಬಳ್ಳಾಪುರ ನಿವಾಸಿ
ಮೊಬೈಲ್‌ ಆ್ಯಪ್‌ನಲ್ಲೇ ನರೇಗಾ ಉದ್ಯೋಗಕ್ಕೆ ಬೇಡಿಕೆ ಸಲ್ಲಿಸಿ: ಹೇಗೆ? ಇಲ್ಲಿದೆ ವಿವರ

ಹಣ ಉಳಿತಾಯ ಹೇಗೆ?
* ಆಡಂಬರ ತೋರಿಕೆಗೆ ಮಾಡಲಾಗುತ್ತಿದ್ದ ಶಾಪಿಂಗ್‌ಗೆ ಬ್ರೇಕ್‌
* ಹೊಸ ವಾಹನ ಖರೀದಿಗಿಂತ ಸೆಕೆಂಡ್‌ ಹ್ಯಾಂಡ್‌ ಉತ್ತಮ
* ಎಲ್‌ಐಸಿ, ಚಿನ್ನ, ಭೂಮಿ ಮೇಲೆ ಹಣ ವಿನಿಯೋಗ ಸೇಫ್‌
* ಪ್ರವಾಸ, ಅದ್ದೂರಿ ಮದುವೆ, ಸಮಾರಂಭಗಳಿಗೆ ಕಡಿವಾಣ ಹಾಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ