ಆ್ಯಪ್ನಗರ

ನೆಲಮಂಗಲ ಪೊಲೀಸರ ಕಾರ್ಯಾಚರಣೆ: 60ಕ್ಕೂ ಹೆಚ್ಚು ವಾಹನಗಳ ವಶ

ಲಾಕ್‌ಡೌನ್‌ ಆದೇಶವಿದ್ದರೂ ನಿಯಮ ಪಾಲಿಸದೆ ರಸ್ತೆಗೆ ಬಂದ 60ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದ ನೆಲಮಂಗಲ ಪೊಲೀಸರು ಕೆಲವು ಮುಖ್ಯರಸ್ತೆಗಳನ್ನು ಸಂಪೂರ್ಣ ಬಂದ್‌ ಮಾಡಿದ್ದಾರೆ.

Vijaya Karnataka Web 9 Apr 2020, 12:21 pm
ಬೆಂಗಳೂರು ಗ್ರಾಮಾಂತರ: ತಾಲೂಕಿನಲ್ಲಿ ಲಾಕ್‌ಡೌನ್‌ ಆದೇಶವಿದ್ದರೂ ನಿಯಮ ಪಾಲಿಸದೆ ರಸ್ತೆಗೆ ಬಂದ 60ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು ಕೆಲವು ಮುಖ್ಯರಸ್ತೆಗಳನ್ನು ಸಂಪೂರ್ಣ ಬಂದ್‌ ಮಾಡಿದ್ದಾರೆ.
Vijaya Karnataka Web lockdown


ನಗರದಲ್ಲಿ ಬೆಳಗ್ಗೆ ವೃತ್ತ ನಿರೀಕ್ಷಕ ಶಿವಣ್ಣ, ವಿರೇಂದ್ರ ಪ್ರಸಾದ್‌ ಹಾಗೂ ಸಬ್‌ಇನ್‌ಸ್ಪೆಕ್ಟರ್‌ ಡಿ.ಆರ್‌ ಮಂಜುನಾಥ್‌, ಮೋಹನ್‌ಕುಮಾರ್‌ ನೇತೃತ್ವದಲ್ಲಿ ಬಸ್‌ನಿಲ್ದಾಣ, ದೊಡ್ಡಬಳ್ಳಾಪುರ ರಸ್ತೆ, ಕುಣಿಗಲ್‌ ಬೈಪಾಸ್‌, ಪೇಟೆಬೀದಿ, ಸೊಂಡೆಕೊಪ್ಪ ಬೈಪಾಸ್‌ ರಸ್ತೆಯಲ್ಲಿ ಬಂದ ವಾಹನಗಳನ್ನು ಪರಿಶೀಲನೆ ನಡೆಸಿ ಅನಾವಶ್ಯಕವಾಗಿ ಓಡಾಡುತ್ತಿದ್ದ 60ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಮುಂಜಾಗ್ರತೆ:
ತಾಲೂಕಿನಾದ್ಯಂತ ಲಾಕ್‌ಡೌನ್‌ ಆದೇಶ ಪಾಲನೆಯಾಗುತ್ತಿಲ್ಲಎಂಬ ವಿಕ ವರದಿ ಪ್ರಕಟವಾದ ಬೆನ್ನಲ್ಲೆ ಮೇಲಧಿಕಾರಿಗಳ ಆದೇಶದಂತೆ ಅನಾವಶ್ಯಕ ವಾಹನ ಸಂಚಾರ, ಅನುಮತಿಯಿಲ್ಲದೆ ಅಂಗಡಿಗಳಲ್ಲಿ ವ್ಯಾಪಾರ ಮಾಡುತಿದ್ದವರಿಗೆ ಬ್ರೇಕ್‌ ಹಾಕಿದ್ದು, ಲಾಕ್‌ಡೌನ್‌ ಆದೇಶದವರೆಗೂ ಹೈಅಲರ್ಟ್‌ ಘೋಷಣೆ ಮಾಡುವ ಮೂಲಕ ಮನೆಯಿಂದ ಹೊರಬಂದು ಸುಮ್ಮ ಸುಮ್ಮನೆ ಓಡಾಟ ಮಾಡಿದರೆ ವಾಹನಗಳನ್ನು ವಶಕ್ಕೆ ಪಡೆದು ಕೇಸ್‌ ದಾಖಲಿಸುವ ಎಚ್ಚರಿಕೆ ನೀಡಿದ್ಧಾರೆ.

ದಾಖಲೆ ವಶ: ಲಾಕ್‌ಡೌನ್‌ ಆದೇಶದಿಂದ ಬೇಸರವಾಗಿದೆ ನಗರ ಸುತ್ತಿ ಬರೋಣ ಎಂದು ವಾಹನಗಳನ್ನು ಬಂದರೆ ನಿಮ್ಮ ವಾಹನಗಳ ಜತೆ ದಾಖಲೆಗಳನ್ನು ವಶಪಡಿಸಿಕೊಳ್ಳಲಿದ್ದಾರೆ. ಬೇರೆಯವರ ವಾಹನಗಳಲ್ಲಿನಗರ ಪ್ರವೇಶಿಸಿದರೆ ವಾಹನ ಮಾಲೀಕರ ವಿರುದ್ಧ ದೂರು ದಾಖಲು ಮಾಡಲಿದ್ದಾರೆ.

ಗದಗ: ಕೊರೊನಾ ವೈರಸ್‌ ಸೋಂಕಿತ ವೃದ್ಧೆ ಹೃದಯಾಘಾತಕ್ಕೆ ಬಲಿ


ಆಟಗಾರರಿಗೆ ಲಾಠಿ ರುಚಿ: ಪಟ್ಟಣದ ಬಿ.ಆರ್‌ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿವಾಕಿಂಗ್‌ ಹಾಗೂ ವಾಲಿಬಾಲ್‌ ಆಟವಾಡುತ್ತಿದ್ದ ಆಟಗಾರರಿಗೆ ತಹಸೀಲ್ದಾರ್‌ ಎಂ.ಶ್ರೀನಿವಾಸಯ್ಯ, ಡಿವೈಎಸ್‌ಪಿ ಮೋಹನ್‌ಕುಮಾರ್‌ ನೇತೃತ್ವದಲ್ಲಿಲಾಠಿ ರುಚಿ ತೋರಿಸಿ ಕೆಲವರನ್ನು ವಶಕ್ಕೆ ಪಡೆದುಕೊಂಡರೆ ಕೆಲವರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ತ್ಯಾಮಗೊಂಡ್ಲು ಪಿಎಸ್‌ಐ ಕೃಷ್ಣಕುಮಾರ್‌ 10ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

ಲಾಕ್‌ಡೌನ್‌ನಿಂದ ಕಾಂಡೋಮ್‌ಗಳಿಗೆ ಭಾರಿ ಡಿಮ್ಯಾಂಡ್..!

ಬಾಗಿಲು ಬಂದ್‌: ತಾಲೂಕಿನಲ್ಲಿಕೆಲವು ಕಂಪನಿಗಳು ಹಾಗೂ ಸೂಪರ್‌ ಮಾರುಕಟ್ಟೆ, ಮಾಲ್‌ಗಳ ಮಾಲೀಕರು ತಹಸೀಲ್ದಾರ್‌ ಅನುಮತಿ ಹಾಗೂ ನಿಯಮಗಳ ಪಾಲನೆ ಕುರಿತಂತೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್‌, ನಾವು ನಿಯಮಾನುಸಾರ ಮಾತ್ರ ಅನುಮತಿ ನೀಡಿದ್ದೇವೆ. ನಿಯಮ ಪಾಲಿಸದೇ ಕಾರ್ಯನಿರ್ವಹಿಸುವ ಎಲ್ಲಅಂಗಡಿ, ಮಾಲ್‌ಗಳ ಬಾಗಿಲು ಮುಚ್ಚಿ ಕಾನೂನು ರೀತಿ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಅಕಾಲಿಕ ಮಳೆಗೆ ಕೃಷಿ ನಷ್ಟ, ರೈತರಿಗೆ ಆತ್ಮಸ್ಥೈರ್ಯ ತುಂಬಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ತಾಲೂಕಿನಾದ್ಯಂತ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಶಾಸಕರು ಹಾಗೂ ತಹಸೀಲ್ದಾರ್‌ ನೇತೃತ್ವದಲ್ಲಿಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ