ಆ್ಯಪ್ನಗರ

ವಿದ್ಯುತ್‌ ಪ್ರವಹಿಸಿ ಕಾರ್ಮಿಕ ಸಾವು

ಮನೆಯ ಕಿಟಕಿಯನ್ನು ವೆಲ್ಡ್‌ ಮಾಡವಾಗ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ ಉತ್ತರಪ್ರದೇಶ ಮೂಲದ ದಿಲೀಪ್‌ವರ್ಮಾ (30) ಕೂಲಿ ಕಾರ್ಮಿಕ ಮೃತಪಟ್ಟಿರುವ ದುರ್ಘಟನೆ ದಾಬಸ್‌ಪೇಟೆ ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿದೆ.

Vijaya Karnataka 12 Jun 2019, 5:00 am
ದಾಬಸ್‌ಪೇಟೆ: ಮನೆಯ ಕಿಟಕಿಯನ್ನು ವೆಲ್ಡ್‌ ಮಾಡÜುವಾಗ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ ಉತ್ತರಪ್ರದೇಶ ಮೂಲದ ದಿಲೀಪ್‌ವರ್ಮಾ (30) ಕೂಲಿ ಕಾರ್ಮಿಕ ಮೃತಪಟ್ಟಿರುವ ದುರ್ಘಟನೆ ದಾಬಸ್‌ಪೇಟೆ ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿದೆ.
Vijaya Karnataka Web current shock uttar pradesh native labour died
ವಿದ್ಯುತ್‌ ಪ್ರವಹಿಸಿ ಕಾರ್ಮಿಕ ಸಾವು


ಘಟನಾ ವಿÊವರ : ದಾಬಸ್‌ಪೇಟೆ ಪಟ್ಟಣದ ನಿವಾಸಿ ಟಿಪ್ಪುದೇವಿ ಎಂಬುವರು ಹೊಸ ಮನೆಯ ಕಿಟಕಿಗೆ ವೆಲ್ಡಿಂಗ್‌ ಮಾಡುವ ವೇಳೆ ರಸ್ತೆಯಲ್ಲಿ ಹಾಕಿದ್ದ ವಿದ್ಯುತ್‌ ತಂತಿಗೆ ವೈಲ್ಡಿಂಗ್‌ ಕಂಬಿ ತಗುಲಿ ವಿದ್ಯುತ್‌ ಪ್ರವಹಿಸಿದೆ. ಇದರಿಂದ ಶಾಕ್‌ಗೊಳಗಾದ ದಿಲೀಪ್‌ ವರ್ಮಾ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ ಕಬ್ಬಿಣದ ರಾಡ್‌ಗೆ ಆತನ ತಲೆ ಹೊಡೆದಿದ್ದು ತೀವ್ರರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ದಿಲೀಪ್‌ವರ್ಮಾನಿಗೆ ಕಳೆದ ನಾಲ್ಕು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು ಮೂರು ವರ್ಷ ಹಾಗೂ ಆರು ತಿಂಗಳ ಇಬ್ಬರು ಗಂಡು ಮಕ್ಕಳಿದ್ದಾರೆ. ಹೆಂಡತಿ ಮತ್ತು ಮಕ್ಕಳು ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದು ಈತನು ದೊಡ್ಡದೊಡ್ಡ ಕಟ್ಟಡಗಳಿಗೆ ವೆಲ್ಡಿಂಗ್‌ ಕೆಲಸ ಮಾಡಲು ಕರ್ನಾಟಕ ರಾಜ್ಯಕ್ಕೆ ತನ್ನ ಸಂಬಂಧಿಕನೊಡನೆ ಬಂದಿದ್ದ ಎನ್ನಲಾಗಿದೆ.

ಸಾರ್ವಜನಿಕರ ಆಕ್ರೋಶ: ಮನೆ ಮಾಲೀಕರು ರಸ್ತೆಗೆ ಹೊಂದಿಕೊಂಡಂತೆ ಚರಂಡಿಗೆ ಸ್ಥಳವನ್ನು ಬಿಡದೆ ಮನೆಯನ್ನು ನಿರ್ಮಿಸುತ್ತಿದ್ದು, ಮನೆ ಪಕ್ಕದಲ್ಲೇ ವಿದ್ಯುತ್‌ತಂತಿ ಹಾದು ಹೋಗಿದ್ದರೂ ಯಾವುದೇ ಮುಂಜಾಗ್ರñ æಕ್ರಮ ಕೈಗೊಳ್ಳದೆ, ವಿದ್ಯುತ್‌ ಅನುಮತಿಯನ್ನು ಸಹ ಪಡೆಯದಿರುವುದರಿಂದ ಈ ಅವಘಡ ಸಂಭವಿಸಿದ್ದು, ಮೃತನ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮನೆ ಮಾಲೀಕರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ