ಆ್ಯಪ್ನಗರ

ತಾಪಂ ಅಧ್ಯಕ್ಷ ರಾಗಿ ಡಿ.ಸಿ.ಶಶಿಧರ್‌ ಅವಿರೋಧ ಆಯ್ಕೆ

ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ದೊಡ್ಡಬೆಳವಂಗಲ ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಡಿ.ಸಿ.ಶಶಿಧರ್‌ ಅಧ್ಯಕ್ಷ ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

Vijaya Karnataka 20 Jul 2019, 5:00 am
ದೊಡ್ಡಬಳ್ಳಾಪುರ: ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ದೊಡ್ಡಬೆಳವಂಗಲ ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಡಿ.ಸಿ.ಶಶಿಧರ್‌ Ü ಅಧ್ಯಕ್ಷ ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
Vijaya Karnataka Web d c shashidar unionimously elected as a new taluk panchayat president
ತಾಪಂ ಅಧ್ಯಕ್ಷ ರಾಗಿ ಡಿ.ಸಿ.ಶಶಿಧರ್‌ ಅವಿರೋಧ ಆಯ್ಕೆ


22 ತಿಂಗಳ ಅಧಿಕಾವಧಿಗೆ ನಡೆದ ಅಧ್ಯಕ್ಷ ರ ಆಯ್ಕೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಜಿ.ಶಂಕರಪ್ಪ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಡಿ.ಸಿ.ಶಶಿಧರ್‌ ನಾಮ ಪತ್ರಸಲ್ಲಿಸಿದ್ದರು. ಜಿ.ಶಂಕರಪ್ಪ ನಾಮ ಪತ್ರ ವಾಪಸ್ಸು ಪಡೆದ ಹಿನ್ನೆಲೆ ಡಿ.ಸಿ.ಶಶಿಧರ್‌ ಅವಿರೊಧವಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ವಿಭಾಗಾಧಿಕಾರಿ ಸಿ.ಮಂಜುನಾಥ್‌ ಕಾರ್ಯ ನಿರ್ವಹಿಸಿದರು.

ಪಕ್ಷಾತೀತವಾಗಿ ಕಾರ‍್ಯನಿರ್ವಹಿಸುವೆ; ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಡಿ.ಸಿ.ಶಶಿಧರ್‌, ನಮ್ಮ ಪಕ್ಷ ದ ವರಿಷ್ಟರು ನನ್ನನ್ನು ಅಧ್ಯಕ್ಷ ನಾಗಲು ಸಹಕರಿಸಿದ್ದು ಸಂತೋಷ ತಂದಿದೆ. ಹೀಗಾಗಿ ನನ್ನ ಅಧಿಕಾರವಧಿಯಲ್ಲಿ ಸಾರ್ವಜನಿಕರೊಂದಿಗೆ ಬೆರೆತು ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಪಕ್ಷಾತೀತವಾಗಿ ಕಾರ‍್ಯನಿರ್ವಹಿಸುವೆ ಎಂದರು.

ಚುನಾವಣೆಯ ನಂತರ ತಾಪಂ ಆವರಣದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಶ್ರೀವತ್ಸ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚುಂಚೇಗೌಡ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತಿಪ್ಪೂರು ಬೈರೇಗೌಡ, ಕಂಟನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂತರಹಳ್ಳಿ ಅಶೋಕ್‌, ಮುಖಂಡರಾದ ಅಪ್ಪಕಾರನಹಳ್ಳಿ ರಾಮಣ್ಣ, ಆದಿತ್ಯನಾಗೇಶ್‌, ಪು.ಮಹೇಶ್‌, ನಾರನಹಳ್ಳಿ ರಾಜ್‌ಕುಮಾರ್‌, ಅಣ್ಣಯ್ಯಪ್ಪ, ವೆಂಕಟೇಶ್‌, ತಾಲೂಕು ಪಂಚಾಯಿತಿ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ