ಆ್ಯಪ್ನಗರ

ದೇವನಹಳ್ಳಿ ಪುರಸಭೆ ಚುನಾವಣೆ ಇಂದು

ದೇವನಹಳ್ಳಿ ಪುರಸಭೆ ಚುನಾವಣೆಗೆ ಕಣಕ್ಕಿಳಿದಿರುವ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ, ಬಿಎಸ್‌ಪಿ, ಪಕ್ಷೇತರರು ಸೇರಿ 78 ಅಭ್ಯರ್ಥಿಗಳ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ. 23 ವಾರ್ಡ್‌ಗಳಿಗೆ ಬುಧವಾರ ಚುನಾವಣೆ ನಡೆಯಲಿದ್ದು ಪುರಸಭೆ ವ್ಯಾಪ್ತಿಯಲ್ಲಿ ಬಿಗಿಬಂದೋಬಸ್ತ್‌ ಕೈಗೊಳ್ಳಲಾಗಿದೆ. ಬೆಳಗ್ಗೆ 6.30ಕ್ಕೆ ಏಜೆಂಟರ ಸಮ್ಮುಖದಲ್ಲಿ ಅಣುಕು ಮತದಾನ ನಡೆಯಲಿದ್ದು 7.ಗಂಟೆಗೆ ಮತದಾನ ಪ್ರಕ್ತ್ರಿಯೆ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.

Vijaya Karnataka Web 29 May 2019, 5:35 pm
23 ವಾರ್ಡುಗಳಲ್ಲಿ 23,321 ಮತದಾರರು
Vijaya Karnataka Web devanahalli municipal elections today
ದೇವನಹಳ್ಳಿ ಪುರಸಭೆ ಚುನಾವಣೆ ಇಂದು


ದೇವನಹಳ್ಳಿ :
ದೇವನಹಳ್ಳಿ ಪುರಸಭೆ ಚುನಾವಣೆಗೆ ಕಣಕ್ಕಿಳಿದಿರುವ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ, ಬಿಎಸ್‌ಪಿ, ಪಕ್ಷೇತರರು ಸೇರಿ 78 ಅಭ್ಯರ್ಥಿಗಳ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ. 23 ವಾರ್ಡ್‌ಗಳಿಗೆ ಬುಧವಾರ ಚುನಾವಣೆ ನಡೆಯಲಿದ್ದು ಪುರಸಭೆ ವ್ಯಾಪ್ತಿಯಲ್ಲಿ ಬಿಗಿಬಂದೋಬಸ್ತ್‌ ಕೈಗೊಳ್ಳಲಾಗಿದೆ. ಬೆಳಗ್ಗೆ 6.30ಕ್ಕೆ ಏಜೆಂಟರ ಸಮ್ಮುಖದಲ್ಲಿ ಅಣುಕು ಮತದಾನ ನಡೆಯಲಿದ್ದು 7.ಗಂಟೆಗೆ ಮತದಾನ ಪ್ರಕ್ತ್ರಿಯೆ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.

ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23,321 ಮತದಾರರಿದ್ದಾರೆ. ಪುರಷರು-11642, ಮಹಿಳೆಯರು 11672 ಇತರೆ 7 ಮತದಾರರಿದ್ದಾರೆ. ಈ ಬಾರಿ 3 ಮತಗಟ್ಟೆಗಳನ್ನು ಹೆಚ್ಚುವರಿರಾಗಿ ಮಾಡಲಾಗಿದ್ದು 1400ಕ್ಕೂ ಹೆಚ್ಚು ಮತದಾರರಿರುವ ವಾರ್ಡುಗಳಲ್ಲಿ 2 ಮತಗಟ್ಟೆಗಳನ್ನು ತೆರೆಯಲಾಗಿದೆ. ಅತಿ ಹೆಚ್ಚು ಮತದಾರರಿರುವ ವಾರ್ಡುಗಳು 3ನೇ ವಾರ್ಡ್‌ ಜೊಳ್ಳಪ್ಪನವರ ಬೀದಿ, ವಾರ್ಡ್‌ ನಂ-6 ಗಾಣಿಗರ ಬೀದಿ, ವಾರ್ಡ್‌ ನಂ.21 ಪ್ರಶಾಂತನಗರದಲ್ಲಿ ಹೆಚ್ಚುವರಿಯಾಗಿ 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಸೂಕ್ಷ್ಮ ಮತಗಟ್ಟೆಗಳು: 8 ಸೂಕ್ಷ್ಮ, 6 ಅತಿಸೂಕ್ಷ ್ಮ, 12 ಸಾಮಾನ್ಯ ಮತಗೆಟ್ಟೆಗಳನ್ನು ಗುರುತಿಸಲಾಗಿದ್ದು ಸೂಕ್ಷ ್ಮ ಮತಗಟ್ಟೆಗಳಿಗೆ ಹೆಚ್ಚುವರಿಯಾಗಿ ಪೊಲೀಸ್‌ ಬಂದೋಬಸ್‌ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್‌ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.

ಅಳಿಸಲಾಗದ ಶಾಹಿ: ಪುರಸಭೆ ಚುನಾವಣೆಗೆ ಅಳಿಸಲಾಗದ ಶಾಹಿಯನ್ನು ಮತದಾರರ ಎಡಗೈ ಉಂಗುರದ ಬೆರಳಿಗೆ ಹಾಕಲಾಗುತ್ತದೆ. ಅದನ್ನು ಅಳಿಸಲಾಗದಂತೆ ಬೆರಳಿನ ಚರ್ಮ ಹಾಗೂ ಉಗುರಿನ ಮೇಲೆ ಬರುವಂತೆ ಶಾಹಿ ಹಾಕಲಾಗುತ್ತಿದ್ದು ಇದರಿಂದ ಅಕ್ರಮವಾಗಿ ಮತದಾನ ಮಾಡುವುದನ್ನು ತಡೆಯಬಹುದು.

ಮದ್ಯದಂಗಡಿ ಬಂದ್‌: ಚುನಾವಣೆ ಹಿನ್ನೆಲೆ ಪಟ್ಟಣದ ಗಡಿಬಾಗದಿಂದ 3 ಕಿ.ಮೀ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಮಂಗಳವಾರ ಬೆಳಿಗ್ಗೆ 7 ಗಂಟೆ ಯಿಂದ ಬುಧವಾರ ಮಧ್ಯರಾತ್ರಿ 12 ಗಂಟೆಯವರಿಗೆ ನಿಷೇದ ಮಾಡಲಾಗಿದೆ.

ಸಂತೆ ನಿಷೇಧ: ಪುರಸಭೆಗೆæ ನಡೆಯಲಿರುವ ಚುನಾವಣೆ ಹಿನ್ನೆಲೆ ದೇವನಹಳ್ಳಿಯಲ್ಲಿ ಬುಧವಾರ ನಡೆಯುವ ಸಾರ್ವಜನಿಕ ಸಂತೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ರದ್ದುಮಾಡಲಾಗಿದೆ.

ಇವಿಎಂ ಮತಯಂತ್ರ ಬಳಕೆ: ಪುರಸಭೆ ಚುನಾವಣೆಗೆ ಇವಿಎಂ ಮತಯಂತ್ರಗಳನ್ನು ಬಳಸಲಾಗುತ್ತಿದ್ದು ವಿವಿ ಪ್ಯಾಟ್‌ ಇರುವುದಿಲ್ಲ. ಪಿಂಕ್‌ ಮತಗಟ್ಟೆಗಳಿಲ್ಲ.

ಪೂಜೆಗೆ ನಿಷೇಧ: ಯಾವುದೇ ಅಭ್ಯರ್ಥಿ ಮತಯಂತ್ರಗಳಿ ಪೂಜೆ ಮಾಡುವುದನ್ನು ನಿಷೇದಿಸಲಾಗಿದೆ. ಮತದಾನ ಮುಕಾಯದ ನಂತರ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತಯಂತ್ರಗಳು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಇರಿಸಲಾಗುತ್ತದೆ. ಜೂನ್‌.3ರಂದು ಮತಎಣಿಕೆ ನಡೆಯಲಿದೆ.
-
ಮತಗಟ್ಟೆಗಳಿಗೆ ಭೇಟಿ

ಚುನಾವಣೆ ನಡೆಯುವ ಎಲ್ಲಾ ಮತಗಟ್ಟೆಗಳಿಗೆ ಚುನಾವಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ, ಚುನಾವಣೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗಿದೆ. ಮತದಾನದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.
-
ರಜೆ ಘೋಷಣೆ

ಎಲ್ಲರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಎಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆ ಕಾಲೇಜು, ಕಂಪನಿ, ಕಾರ್ಖಾನೆಗಳಿಗೆ ಚುನಾವಣಾ ಅಯೋಗದ ನಿರ್ದೇಶನದಂತೆ ರಜೆ ಘೋಷಣೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ