ಆ್ಯಪ್ನಗರ

ನಾನು ಗುಳ್ಳೆ ನರಿನೇ, ಅವರು ಹುಲಿ ಸಿಂಹಗಳಾಗಲಿ: ಎಂಟಿಬಿ ನಾಗರಾಜ್‌

"ನನ್ನ ಮೊದಲ ದೇವರು ಮತದಾರ. ಮತದಾರನನ್ನು ನಾನು ಯಾವತ್ತು ಮರೆಯಲ್ಲ. ಮತದಾರನನ್ನು ನಾನು ಆತ್ಮದಲ್ಲಿ ಇಟ್ಟುಕೊಂಡಿರುತ್ತೇನೆ," ಎಂಬುದಾಗಿ ಎಂಟಿಬಿ ನಾಗರಾಜ್‌ ಹೇಳಿದ್ದಾರೆ. ಹಿಂದೊಮ್ಮೆ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣಿಸುತ್ತಾರೆ ಎಂಬುದಾಗಿ ಇವರು ಹೇಳಿದ್ದರು.

Vijaya Karnataka Web 2 Oct 2019, 5:00 am
ಹೊಸಕೋಟೆ: ನಾನು ಗುಳ್ಳೆನರಿಯಾಗಿದ್ದುಕೊಂಡು ಹೊಸಕೋಟೆ ತಾಲೂಕು ಅಭಿವೃದ್ಧಿ ಮಾಡುತ್ತೇನೆ ಮಾಜಿ ಸಚಿವ, ಅನರ್ಹ ಶಾಸಕ ನಾಗರಾಜ್‌ ಹೇಳಿದರು.
Vijaya Karnataka Web Disqualified Congress MLA MTB Nagraj


ಅವರು ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಇತ್ತೀಚೆಗೆ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶರತ್‌ ಬಚ್ಚೇಗೌಡ ತಮ್ಮ ಬಗ್ಗೆ ನೀಡಿದ್ದ ಗುಳ್ಳೆ ನರಿ ಹೇಳಿಕೆಗೆ ಈ ತಿರುಗೇಟು ನೀಡಿದರು.

"ಅವರೇ ಹುಲಿಗಳು ಮತ್ತು ಸಿಂಹಗಳಾಗಿರಲಿ. ನಾನು ಗುಳ್ಳೆನರಿಯಾಗಿ ಇದ್ದುಕೊಂಡು ತಾಲೂಕಿನ ಅಭಿವೃದ್ಧಿಯನ್ನು ಮಾಡುತ್ತೇನೆ. ನಾನು ಯಾವ ಭೇದಭಾವ ಮಾಡದೆ ಮತದಾರರಿಗೆ ಅನ್ಯಾಯ ಮಾಡೆನೆಂದು ದೇವರಾಣೆಗೂ ಆಣೆ ಮಾಡುತ್ತೇನೆ. ನನ್ನ ಮೊದಲ ದೇವರು ಮತದಾರ. ಮತದಾರನನ್ನು ನಾನು ಯಾವತ್ತು ಮರೆಯಲ್ಲ. ಮತದಾರನನ್ನು ನಾನು ಆತ್ಮದಲ್ಲಿ ಇಟ್ಟುಕೊಂಡಿರುತ್ತೇನೆ," ಎಂದು ಶರತ್‌ ಬಚ್ಚೇಗೌಡಗೆ ಟಾಂಗ್‌ ನೀಡಿದರು.

ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಎಂಟಿಬಿ ನಾಗರಾಜ್‌ ಉಪಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ ಇಲ್ಲಿ ಕಳೆದ ಬಾರಿ ಕಣಕ್ಕಿಳಿದು ಸೋತಿರುವ ಸಂಸದ ಬಚ್ಚೇಗೌಡ ಪುತ್ರ ಶರತ್‌ ಬಚ್ಚೇಗೌಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಇಬ್ಬರ ನಡುವೆ ಮಾತಿನ ಕೆಸರೆರೆಚಾಟ ರಂಗೇರಿದೆ.

ಸ್ಪೀಕರ್‌ ತಮ್ಮನ್ನು ಅನರ್ಹಗೊಳಿಸಿರುವ ಆದೇಶ ಪ್ರಶ್ನಿಸಿ ನಾಗರಾಜ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ಅಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಹೊಸಕೋಟೆ ಸೇರಿ 15 ಅನರ್ಹರ ಕ್ಷೇತ್ರಗಳಿಗೆ ಡಿಸೆಂಬರ್‌ 5 ರಂದು ಉಪಚುನಾವಣೆ ನಿಗದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ