ಆ್ಯಪ್ನಗರ

ಒಂಟಿಯಾಗಿ ಓಡಾಡೋರನ್ನೇ ಗುರಿಯಾಗಿಸಿ ದರೋಡೆ ಮಾಡ್ತಿದ್ದ 8 ಮಂದಿ ಖತರ್ನಾಕ್‌ಗಳ ಬಂಧನ

ನವೆಂಬರ್‌ನಲ್ಲಿ ರಾಜಾನುಕುಂಟೆ ಬಳಿಯ ರಚನಾ ಬಾರ್‌ನ ಕ್ಯಾಷಿಯರ್‌ ಗಿರೀಶ್‌ ಕೆಲಸ ಮುಗಿಸಿ ಬಾರ್‌ನ ಬಾಗಿಲು ಹಾಕಿ ಕ್ಯಾಶ್‌ನೊಂದಿಗೆ ತಮ್ಮ ಮನೆಗೆ ಯಲಹಂಕ- ದೊಡ್ಡಬಳ್ಳಾಪುರ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದರು. ಈ ಸಮಯದಲ್ಲಿ ಎರಡು ಬೈಕ್‌ಗಳಲ್ಲಿ ನಾಲ್ವರು ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ. ಹೊನ್ನೆನಹಳ್ಳಿಯ ಪೆಟ್ರೋಲ್‌ ಬಂಕ್‌ ಬಳಿ ಅಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ 2.20 ಲಕ್ಷ ಹಣ ದೋಚಿ ಪರಾರಿಯಾಗಿದ್ದರು.

Vijaya Karnataka Web 19 Jan 2021, 7:36 am
ದೊಡ್ಡಬಳ್ಳಾಪುರ: ತಡರಾತ್ರಿಗಳಲ್ಲಿ ಬಾರ್‌ಗಳು ಹಾಗೂ ಬಾರ್‌ ಕ್ಯಾಶಿಯರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಹಲ್ಲೆ, ಕಳ್ಳತನ ಮಾಡಿ ಎಸ್ಕೇಪ್‌ ಆಗುತ್ತಿದ್ದ ಖದೀಮರ ತಂಡವೊಂದು ಪೊಲೀಸರ ಬಲೆಗೆ ಬಿದ್ದಿದೆ.
Vijaya Karnataka Web police arrest


ತಡರಾತ್ರಿಯಲ್ಲಿ ನಗದು ಹಾಗೂ ಚಿನ್ನಾಭರಣ ಹೆಚ್ಚು ಧರಿಸಿ ಓಡಾಡುವವರನ್ನೇ ಟಾರ್ಗೆಟ್‌ ಮಾಡಿ ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗುತ್ತಿದ್ದರು. ನವೆಂಬರ್‌ನಲ್ಲಿ ರಾಜಾನುಕುಂಟೆ ಬಳಿಯ ರಚನಾ ಬಾರ್‌ನ ಕ್ಯಾಷಿಯರ್‌ ಗಿರೀಶ್‌ ಕೆಲಸ ಮುಗಿಸಿ ಬಾರ್‌ನ ಬಾಗಿಲು ಹಾಕಿ ಕ್ಯಾಶ್‌ನೊಂದಿಗೆ ತಮ್ಮ ಮನೆಗೆ ಯಲಹಂಕ- ದೊಡ್ಡಬಳ್ಳಾಪುರ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದರು. ಈ ಸಮಯದಲ್ಲಿ ಎರಡು ಬೈಕ್‌ಗಳಲ್ಲಿ ನಾಲ್ವರು ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ. ಹೊನ್ನೆನಹಳ್ಳಿಯ ಪೆಟ್ರೋಲ್‌ ಬಂಕ್‌ ಬಳಿ ಅಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ 2.20 ಲಕ್ಷ ಹಣ ದೋಚಿ ಪರಾರಿಯಾಗಿದ್ದರು. ಭಯಾನಕ ರಾಬರಿ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು,

ರಾಜಕಾರಣಿಗಳಷ್ಟೇ ಅಲ್ಲ, ಮತದಾರರೂ ಭ್ರಷ್ಟರಾಗಿದ್ದಾರೆ; ಎಂಟಿಬಿ ಬೇಸರ
ಈ ಸಂಬಂಧ ರಾಜಾನುಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮೆರಾ ಫೂಟೇಜ್‌ ಆಧಾರದ ಮೇಲೆ ರಾಬರಿ ಗ್ಯಾಂಗ್‌ನ 8 ಮಂದಿಯನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ವಿಚಾರಣೆಯಲ್ಲಿ12 ರಾಬರಿ ಪ್ರಕರಣಗಳನ್ನ ಪೊಲೀಸರ ಭೇದಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದ್ದ ಪೆಟ್ರೂಲ್‌ ಬಂಕ್‌ನಲ್ಲಿ ಮಾರಕಾಸ್ತ್ರ ತೋರಿಸಿ ನಗದು ದರೋಡೆ, ತಾಲೂಕಿನಲ್ಲಿ ನಡೆದಿದ್ದ ವೈನ್‌ ಶಾಪ್‌ಗಳಿಗೆ ಕನ್ನ ಪ್ರಕರಣಗಳು ಸೇರಿವೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ