ಆ್ಯಪ್ನಗರ

ಸ್ಥಳೀಯ ಮಾರುಕಟ್ಟೆಗಳಿಂದ ರೈತರ ಅಭಿವೃದ್ಧಿ

ಗ್ರಾಮೀಣ ಸಂತೆ ಮಾರುಕಟ್ಟೆ ರೈತರು ಹಾಗೂ ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಬೇಕು. ರೈತರಿಗೆ ಉತ್ತಮ ಬೆಲೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಾಮಾಗ್ರಿಗಳು ಸ್ಥಳೀಯವಾಗಿ ಲಭಿಸಬೇಕು. ರೈತರ ಅಭಿವೃದ್ಧಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಸಂಸದ ಬಿ.ಎನ್‌. ಬಚ್ಚೇಗೌಡ ತಿಳಿಸಿದರು.

Vijaya Karnataka 10 Sep 2019, 4:21 pm
ಹಿಂಡಿಗನಾಳದಲ್ಲಿ ಸಂಸದರಿಂದ ಮುಚ್ಚು ಹರಾಜು ಕಟ್ಟೆ ಲೋಕಾರ್ಪಣೆ
Vijaya Karnataka Web farmer development from local markets
ಸ್ಥಳೀಯ ಮಾರುಕಟ್ಟೆಗಳಿಂದ ರೈತರ ಅಭಿವೃದ್ಧಿ


ನಂದಗುಡಿ: ಗ್ರಾಮೀಣ ಸಂತೆ ಮಾರುಕಟ್ಟೆ ರೈತರು ಹಾಗೂ ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಬೇಕು. ರೈತರಿಗೆ ಉತ್ತಮ ಬೆಲೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಾಮಾಗ್ರಿಗಳು ಸ್ಥಳೀಯವಾಗಿ ಲಭಿಸಬೇಕು. ರೈತರ ಅಭಿವೃದ್ಧಿಯಲ್ಲಿಕೃಷಿ ಉತ್ಪನ್ನ ಮಾರುಕಟ್ಟೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಸಂಸದ ಬಿ.ಎನ್‌. ಬಚ್ಚೇಗೌಡ ತಿಳಿಸಿದರು.

ನಂದಗುಡಿ ಹೋಬಳಿಯ ಹಿಂಡಿಗನಾಳದಲ್ಲಿಸೋಮವಾರ ಹೊಸಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಡಬ್ಲೂಐಎಫ್‌ ಹೆಚ್ಚುವರಿ ಯೋಜನೆ ಅಡಿಯಲ್ಲಿ49.75 ಲಕ್ಷ ರೂ. ವೆಚ್ಚದ 2 ಮುಚ್ಚು ಹರಾಜು ಕಟ್ಟೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಜಾಗೃತಿ ಅಗತ್ಯ: ರೈತರು ಸಾಲ ಮಾಡಿ ಬಹಳ ಕಷ್ಟಪಟ್ಟು ತಮ್ಮ ಜಮೀನುಗಳಲ್ಲಿಬೆಳೆಗಳನ್ನು ಬೆಳೆಯುತ್ತಾರೆ. ಮಾರಾಟದ ಸಮಯದಲ್ಲಿಮಧ್ಯವರ್ತಿಗಳ ಹಾವಳಿಯಿಂದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದೆ, ಕೃಷಿಯಿಂದ ರೈತ ಸಮೂಹ ವಿಮುಖವಾಗುತ್ತಿರುವ ಕಾಲಘಟ್ಟವಾಗಿದೆ. ಸಣ್ಣ ಪುಟ್ಟ ರೈತರು ತಾವು ಬೆಳೆದ ಫಸಲನ್ನು ಮನೆ ಬಾಗಿಲಿನಲ್ಲಿಮಾರಾಟ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಸಮಿತಿಯ ಹೊಣೆಗಾರಿಕೆ: ತಾಲೂಕಿನಲ್ಲಿಸಂತೆಗಳ ಅಭಿವೃದ್ಧಿಗೆಂದು ಕೋಟ್ಯಂತರ ರೂ.ಗಳ ಅನುದಾನ ಬಿಡುಗಡೆ ಮಾಡಿದ್ದು, ಎಪಿಎಂಸಿ ವತಿಯಿಂದ ಮುಖ್ಯ ಮಾರುಕಟ್ಟೆ ಹೂ ಹಾಗೂ ತರಕಾರಿ, ಮೆಗಾ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕಾಗಿ ಜಾಗ ನೀಡುವಂತೆ ಜಿಲ್ಲಾಡಳಿತಕ್ಕೆ ಕೋರಲಾಗಿದೆ. ವಿಶಾಲವಾದ ಜಾಗದಲ್ಲಿಸಂತೆ ಮೈದಾನವಿದ್ದು, ಈ ಪ್ರದೇಶವನ್ನು ಅತ್ಯಂತ ಸುಂದರವಾಗಿ ರೂಪಿಸಿ ಪರಿಸರ ಸಂರಕ್ಷಣೆ, ಸುರಕ್ಷತೆ, ಘನತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛತೆ ಹೊಣೆಗಾರಿಕೆ ಸಮಿತಿ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಕೆ. ಸತೀಶ್‌ ಮಾತನಾಡಿದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶರತ್‌ ಬಚ್ಚೇಗೌಡ, ಹೊಸಕೋಟೆ ಟಿಎಪಿಸಿಎಂಎಸ್‌ ಅಧ್ಯಕ್ಷ ಟಿ. ಸೊಣ್ಣಪ್ಪ, ಉಪಾಧ್ಯಕ್ಷ ಬಿ.ಎನ್‌. ಗೋಪಾಲಗೌಡ, ತಾಪಂ. ಅಧ್ಯಕ್ಷ ಜಯದೇವಯ್ಯ, ಮಾಜಿ ಜಿಪಂ. ಸದಸ್ಯ ಬಿ.ಎಂ. ನಾರಾಯಣಸ್ವಾಮಿ, ಪ್ರಜಾ ಪೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ಬಿ. ಗೋಪಾಲ್‌, ಯೋಜನಾ ಪ್ರಾಧಿಕಾರ ಮಾಜಿ ಸದಸ್ಯ ಬಿ.ವಿ. ಬೈರೇಗೌಡ, ಮಾಜಿ ತಾಪಂ. ಅಧ್ಯಕ್ಷರಾದ ಬಿ.ವಿ. ರಾಜಶೇಖರಗೌಡ, ಟಿ.ಎಸ್‌. ರಾಜಶೇಖರ್‌, ಮಾಜಿ ಅಧ್ಯಕ್ಷರಾದ ಸಿ. ಮುನಿಯಪ್ಪ, ದೇವರಾಜು, ನಿರ್ದೇಶಕರಾದ ಮುನಿರಾಜಪ್ಪ, ಹೆಚ್‌.ಎನ್‌. ಧರ್ಮೇಶ್‌, ಮಾಜಿ ಪ್ರಧಾನ ಹೆಚ್‌.ಕೆ. ರಾಮಚಂದ್ರೇಗೌಡ, ಗ್ರಾಪಂ. ಅಧ್ಯಕ್ಷರಾದ ಶಬರೀನ್‌ ಉನ್ನಿಸಾ, ಅಯೂಬ್‌ ಬೇಗ್‌, ಸದಸ್ಯೆ ರೂಪ ಲಕ್ಷಿತ್ರ್ಮೕನಾರಾಯಣ್‌, ಬೆಂಗಳೂರು ನಗರ ಹಾಗೂ ಗ್ರಾ. ಜಿಲ್ಲಾಉಪನಿರ್ದೇಶಕಿ ಕೆ.ಎಂ. ವಸುಂಧರಾ, ಎಪಿಎಂಸಿ ಕಾರ್ಯದರ್ಶಿ ಕೆ.ವಿ. ರೂಪ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ