ಆ್ಯಪ್ನಗರ

ಶರತ್‌ ಬಚ್ಚೇಗೌಡ ಬರುವುದಾದರೆ ಹೆಗಲ ಮೇಲೆ ಕೂರಿಸಿಕೊಂಡು ಕಾಂಗ್ರೆಸ್‌ಗೆ ಕರೆ ತರುತ್ತೇನೆ - ರಮೇಶ್‌ ಕುಮಾರ್‌

ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಶರತ್‌ ಬಚ್ಚೇಗೌಡ, "ಈಗ ಒಂದು ಒಳ್ಳೆಯ ಸಮಯ ಎದುರಾಗುತ್ತಿದೆ ಎಂಬುದು ತಿಳಿದುಬಂದಿದೆ. ಆದಷ್ಟು ಶೀಘ್ರವಾಗಿ ನನ್ನ ತೀರ್ಮಾನ ತಿಳಿಸುತ್ತೇನೆ," ಎಂದಿದ್ದಾರೆ.

Vijaya Karnataka 29 Jul 2020, 7:40 pm
ಜಡಿಗೇಹಳ್ಳಿ (ಹೊಸಕೋಟೆ): ದೇವಸ್ಥಾನಕ್ಕೆ ಹೋಗುವವರಿಗೆ ಆಹ್ವಾನ ಬೇಕಾಗಿಲ್ಲ. ಹೋಗುವವರು ಹೋಗುತ್ತಿರುತ್ತಾರೆ, ಬರುವವರು ಬರುತ್ತಿರುತ್ತಾರೆ. ಹಾಗೆಯೇ ಕಾಂಗ್ರೆಸ್‌ ಸಮುದ್ರವಿದ್ದಂತೆ, ಎಲ್ಲವೂ ಸ್ವಾಭಾವಿಕವಾಗಿ ನಡೆಯುತ್ತಿರುತ್ತದೆ. ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಸೇರುವುದಾದರೆ ಸ್ವಾಗತ ಇದ್ದೇ ಇರುತ್ತದೆ ಎಂದು ಮಾಜಿ ಸ್ಪೀಕರ್‌ ರಮೇಶ್ ‌ಕುಮಾರ್‌ ಹೇಳಿದರು.
Vijaya Karnataka Web Sharat Bachegowda


ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮ ಕೆರೆ ತುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.
ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ನನ್ನ ಮಗನಿದ್ದಂತೆ. ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗೋದಾದ್ರೆ ನಾನು ಹೆಗಲ ಮೇಲೆ ಕೂರಿಸಿಕೊಂಡು ಕರೆದುಕೊಂಡು ಬರುತ್ತೇನೆ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚು. ಸೇರ್ಪಡೆಯಾಗೋದಾದ್ರೆ ಇದಕ್ಕಿಂತ ಆನಂದ ಬೇರೊಂದಿಲ್ಲ. ಆದರೆ ಅವರ ತೀರ್ಮಾನ ಏನು ಎಂಬುದನ್ನು ಅವರ ಹಿತೈಷಿಗಳೊಂದಿಗೆ ಚರ್ಚಿಸಲಿ. ಒಳ್ಳೆಯ ತೀರ್ಮಾನ ತಗೋತಾರೆ ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿದ ಶಾಸಕ ಶರತ್‌ ಬಚ್ಚೇಗೌಡ, ಹೊಸಕೋಟೆ ತಾಲೂಕಿನಲ್ಲಿ ಯಾವುದೇ ತೀರ್ಮಾವನ್ನು ನಾವು ಏಕಪಕ್ಷೀಯವಾಗಿ ತೆಗೆದುಕೊಂಡಿಲ್ಲ. ಸಾಮೂಹಿಕವಾಗಿ ಜನರ ತೀರ್ಮಾನ ತೆಗೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಆದರೂ ಈಗ ಒಂದು ಒಳ್ಳೆಯ ಸಮಯ ಎದುರಾಗುತ್ತಿದೆ ಎಂಬುದು ತಿಳಿದುಬಂದಿದೆ. ಆದಷ್ಟು ಶೀಘ್ರವಾಗಿ ನನ್ನ ತೀರ್ಮಾನ ತಿಳಿಸುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ