ಆ್ಯಪ್ನಗರ

ನಕಲಿ ಚಿಕಿತ್ಸಕನ ಸೆರೆ

ಬೀದಿಬದಿಯಲ್ಲಿ ಮಕ್ಕಳಾಗುವ ಔಷಧಿ ಮಾರಾಟಮಾಡಿ, ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದ್ದ ಆರೋಪಿಯನ್ನು ಪಟ್ಟಣ ಠಾಣೆ ಪೊಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಔಷಧಿ ಮಾರಾಟಕ್ಕೆಂದು ಬಳಸುತಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Vijaya Karnataka 5 Aug 2019, 5:00 am
ನೆಲಮಂಗಲ: ಬೀದಿಬದಿಯಲ್ಲಿ ಮಕ್ಕಳಾಗುವ ಔಷಧಿ ಮಾರಾಟಮಾಡಿ, ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದ್ದ ಆರೋಪಿಯನ್ನು ಪಟ್ಟಣ ಠಾಣೆ ಪೊಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಔಷಧಿ ಮಾರಾಟಕ್ಕೆಂದು ಬಳಸುತಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Vijaya Karnataka Web frad doctor arrest
ನಕಲಿ ಚಿಕಿತ್ಸಕನ ಸೆರೆ


ಶಿವಮೊಗ್ಗಜಿಲ್ಲೆ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ನಾರಾಯಣಸ್ವಾಮಿ ಎಂಬುವರ ಮಗ ವಿಜಯ್‌ಕುಮಾರ್‌ (29) ಬಂಧಿತ ಆರೋಪಿ. ಈತ ಕಳೆದ ಜು.21 ರಂದು ಮಧ್ಯಾಹ್ನ 2ಗಂಟೆ ಸಮಯದಲ್ಲಿ ಅರಿಶಿನಕುಂಟೆ ಗ್ರಾಮ ಶಶಿಧರ್‌ ದಂಪತಿಗಳಿಗೆ ಮಕ್ಕಳಾಗುವ ನಾಟಿ ಔಷಧಿಯೆಂದು ವಂಚಿಸಿ ಭೇದಿಯಾಗುವ ಮಾತ್ರೆಯನ್ನು ನೀಡಿದ್ದರು. ಇದರ ಪರಿಣಾಮವಾಗಿ ಶಶಿಧರ್‌ ತೀವ್ರವಾಗಿ ಬೇಧಿಯಾಗಿ ಮೃತಪಟ್ಟಿದ್ದರೆ ಪತ್ನಿ ಗಂಗಾಂಭಿಕೆ ತೀವ್ರವಾಗಿ ಅಸ್ವಸ್ಥಗೊಂಡು ಪಟ್ಟಣದ ವಿಪಿ.ಮ್ಯಾಗ್ನೇಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ. ಘಟನೆಯ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು ವಿಜಯ್‌ಕುಮಾರ್‌ ನನ್ನು ಬಂಧಿಸಿರುವ ಪೊಲೀಸರು ಮತ್ತಿಬ್ಬರ ಆರೋಪಿಗಳನ್ನು ಬಂಧಿಸಲು ಜಾಲ ಬೀಸಿದ್ದಾರೆ.

ಅಭಿನಂದನೆ : ಪ್ರಕರಣದ ಬೆನ್ನತ್ತಿದ ಪಟ್ಟಣ ಪೊಲೀಸ್‌ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಡಿ.ಆರ್‌.ಮಂಜುನಾಥ್‌ ತಂಡದ ಎಎಸ್‌ಐ ಗಂಗಣ್ಣ, ಪೇದೆಗಳಾದ ಶ್ರೀನಿವಾಸ್‌,ಮಂಜುನಾಥ್‌,ನರೇಶ್‌, ಬಸವರಾಜು ತಂಡವನ್ನು ಜಿಲ್ಲಾ ಪೊಲೀಸ್‌ವರಿಷ್ಟಾಧಿಕಾರಿ ಶಿವಕುಮಾರ್‌, ಡಿವೈಎಸ್‌ಪಿ ಪಾಂಡುರಂಗ,ಪರೀಕ್ಷಾರ್ಥಿ ಡಿವೈಎಸ್‌ಪಿ ಚಂದನ್‌ಕುಮಾರ್‌ ವೃತ್ತನಿರೀಕ್ಷಕ ಅನಿಲ್‌ಕುಮಾರ್‌ ಅವರುಗಳು ಅಭಿನಂದಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ