ಆ್ಯಪ್ನಗರ

ಬುದ್ಧಿಮಾಂದ್ಯ ಮಕ್ಕಳಿಗೆ ಹಣ್ಣು ವಿತರಣೆ

ಕಾಂಗ್ರೆಸ್‌ ಪಕ್ಷ , ಸ್ವಾತಂತ್ರ್ಯ ಪೂರ್ವದಿಂದಲ್ಲೂ ಹಲವಾರು ಸವಾಲುಗಳನ್ನು ಎದುರಿಸಿ, ದಿಟ್ಟತನದಿಂದ ಹೋರಾಟ ಮಾಡಿಕೊಂಡು ಬಂದಿದೆ. ಪಕ್ಷ ವು ನಿರಂತರವಾಗಿ ಜನರ ನಡುವೆ ಸೇವೆ ಮಾಡುತ್ತಿರುವ ಪಕ್ಷ ವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಾಗೇಶ್‌ ಹೇಳಿದರು.

Vijaya Karnataka 11 Dec 2018, 5:00 am
ವಿಜಯಪುರ: ಕಾಂಗ್ರೆಸ್‌ ಪಕ್ಷ , ಸ್ವಾತಂತ್ರ್ಯ ಪೂರ್ವದಿಂದಲ್ಲೂ ಹಲವಾರು ಸವಾಲುಗಳನ್ನು ಎದುರಿಸಿ, ದಿಟ್ಟತನದಿಂದ ಹೋರಾಟ ಮಾಡಿಕೊಂಡು ಬಂದಿದೆ. ಪಕ್ಷ ವು ನಿರಂತರವಾಗಿ ಜನರ ನಡುವೆ ಸೇವೆ ಮಾಡುತ್ತಿರುವ ಪಕ್ಷ ವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಾಗೇಶ್‌ ಹೇಳಿದರು.
Vijaya Karnataka Web fruit distributed to mentally challenged childen
ಬುದ್ಧಿಮಾಂದ್ಯ ಮಕ್ಕಳಿಗೆ ಹಣ್ಣು ವಿತರಣೆ


ಪಟ್ಟಣದ ಚಂದೇನಹಳ್ಳಿ ಗೇಟ್‌ಬಳಿವಿರುವ ಸರ್ವೋದಯ ಸರ್ವಿಸ್‌ ಸೊಸೈಟಿಯಲ್ಲಿ ಸೋನಿಯ ಗಾಂಧಿ ಅವರ ಹುಟ್ಟುಹಬ್ಬದ ಅಂಗವಾಗಿ ಹಿರಿಯ ನಾಗರಿಕರಿಗೆ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಕೇಕ್‌ ಕತ್ತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರಕಾರವು ಬಡವರ, ರೈತರ ಪರವಾಗಿ ಸಾಕಷ್ಟು ಜನಪರ ಕಾರ್ಯಕ್ರಮಗಳು ಜಾರಿಗೆ ತಂದಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಸಮ್ಮಿಶ್ರ ಸರಕಾರವು ಜನಪರ ಆಡಳಿತ ಮೆಚ್ಚಿ ಬೇರೆ ಪಕ್ಷ ಗಳಿಂದ ಕಾರ್ಯಕರ್ತರು ಸೇರ್ಪಡೆಗೊಳ್ಳುತ್ತಿರುವುದು ಪಕ್ಷ ಮತ್ತೆ ಮುಂದಿನ 2019 ಲೋಕಸಭಾ ಚುನಾವಣೆಗೆ ಅಧಿಕಾರಕ್ಕೆ ಬರುವ ಸಂಕೇತವಾಗಿದೆ ಎಂದರು.

ತಾಲೂಕು ಯುವ ಘಟಕದ ಅಧ್ಯಕ್ಷ ಸುಮಂತ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷ ವು ಇಂದು ಕೇವಲ ಪಕ್ಷ ವಲ್ಲ ಅದು ಜನತೆಯ ಆಶಾಕಿರಣ. ಭಾರತಕ್ಕೆ ಕಾಂಗ್ರೆಸ್‌ ಬಿಟ್ಟರೆ ಪರ್ಯಾಯ ಶಕ್ತಿ ಇಲ್ಲ ಎಂದರು.

ಹರೀಶ್‌, ಅಮೃತರಾಜು, ರಕ್ಷಿತ್‌, ವತ್ಸಬಾಬು, ಅನಿಲ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ