ಆ್ಯಪ್ನಗರ

ಎಸ್‌ಎಸ್‌ಘಾಟಿ ಕ್ಷೇತ್ರದ ಹುಂಡಿಯಲ್ಲಿ 39.77 ಲಕ್ಷ ಸಂಗ್ರಹ

ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯ ಸಭಾಂಗಣದಲ್ಲಿ ಪ್ರತಿ ತಿಂಗಳಿನಂತೆ, ನವೆಂಬರ್‌ ತಿಂಗಳ ಹುಂಡಿ ಹಣವನ್ನು ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು.

Vijaya Karnataka 30 Nov 2018, 5:00 am
ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯ ಸಭಾಂಗಣದಲ್ಲಿ ಪ್ರತಿ ತಿಂಗಳಿನಂತೆ, ನವೆಂಬರ್‌ ತಿಂಗಳ ಹುಂಡಿ ಹಣವನ್ನು ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು.
Vijaya Karnataka Web ghati subrhamanya temple 39 77 lakhs collected
ಎಸ್‌ಎಸ್‌ಘಾಟಿ ಕ್ಷೇತ್ರದ ಹುಂಡಿಯಲ್ಲಿ 39.77 ಲಕ್ಷ ಸಂಗ್ರಹ


ಹುಂಡಿಯಲ್ಲಿ ಸುಮಾರು ರೂ38.77 ಲಕ್ಷ , 774ರೂಪಾಯಿ, ಬೆಳ್ಳಿ 1 ಕೆಜಿ 900 ಗ್ರಾಂ, ಚಿನ್ನ 2.5 ಗ್ರಾಂ. ಸಂಗ್ರಹವಾಗಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹುಂಡಿ ಹಣ ಎಣಿಕೆಯಲ್ಲಿ ಭಕ್ತರಿಗೂ ಅವಕಾಶ ಕಲ್ಪಿಸಿಕೊಟ್ಟಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಜಲಧಿರಂಗಪ್ಪ, ಮುಜರಾಯಿ ಇಲಾಖೆ ತಹಸೀಲ್ದಾರ್‌ ಕೆ.ಪದ್ಮ, ದೇವಾಲಯ ಅಧಿಕಾರಿ ವರ್ಗದ ನಾರಾಯಣಸ್ವಾಮಿ, ದೇವಾಲಯ ನಿರ್ವಹಣಾ ಸಮಿತಿಯ ಎಂ.ಜಿ.ಜಗನ್ನಾಥ್‌, ಜಿ.ಎಂ.ಚೆನ್ನಪ್ಪ, ಎಸ್‌.ಆರ್‌.ಮುನಿರಾಜು, ಪ್ರಧಾನ ಅರ್ಚಕ ಆರ್‌.ಸುಬ್ರಹ್ಮಣ್ಯ, ಸಮಿತಿಯ ಸದಸ್ಯರಾದ ಕೆ.ಮುನಿಯಪ್ಪ, ಕೆ.ಬಿ.ಭ್ರಮರಾಂಬಿಕಾ ಮುತ್ತಣ್ಣ, ಸುಬ್ರಹ್ಮಣ್ಯ ನಾಯಕ್‌, ರತ್ನಮ್ಮ, ಹೊಬಳಿ ಮುಖಂಡ ಎನ್‌.ಆಂಜಿನಪ್ಪ ಮೆಳೇಕೋಟೆ, ಹಾಗೂ ಪೊಲೀಸ್‌ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಹುಂಡಿಯಲ್ಲಿ ವಿದೇಶಿ ಕರೆನ್ಸಿ; ಹುಂಡಿಯಲ್ಲಿ ವಿದೇಶಿ ಹಣ ಸಿಕ್ಕಿರುವುದು ದೇವಾಲಯದ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿದೆ. ಯುಎಸ್‌ 20, ಇರೋ ಡಾಲರ್‌ 5, ಅರಬ್‌ನ ಧಿರಮ್ಸ್‌ 15, ಥಾಯ್‌ಲ್ಯಾಂಡ್‌ ಬಲ್‌ 100 ಕರೆನ್ಸಿ ನೋಟುಗಳು ಹುಂಡಿಯಲ್ಲಿ ಲಭ್ಯವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ