ಆ್ಯಪ್ನಗರ

ವಿಶೇಷಚೇತನರಿಗೆ ಅನುಕಂಪಬೇಡ, ಅವಕಾಶ ನೀಡಿ

ವಿಶೇಷ ಚೇತನರಿಗೆ ಅನುಕಂಪಬೇಡ ಅವಕಾಶ ನೀಡಿ. ಸರಕಾರ ಶೇ.4 ಮೀಸಲಾತಿ ಕಲ್ಪಿಸಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

Vijaya Karnataka 4 Dec 2018, 5:00 am
ದೇವನಹಳ್ಳಿ: ವಿಶೇಷ ಚೇತನರಿಗೆ ಅನುಕಂಪಬೇಡ ಅವಕಾಶ ನೀಡಿ. ಸರಕಾರ ಶೇ.4 ಮೀಸಲಾತಿ ಕಲ್ಪಿಸಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
Vijaya Karnataka Web give opportunity to physically challenged
ವಿಶೇಷಚೇತನರಿಗೆ ಅನುಕಂಪಬೇಡ, ಅವಕಾಶ ನೀಡಿ


ವಿಶ್ವ ವಿಶೇಷಚೇತನರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಶಿಕ್ಷ ಣ ಇಲಾಖೆ ಮತ್ತು ಬೆಂಗ್ರಾ ಜಿಲ್ಲಾ ಪಂಚಾಯತ್‌ ಹಾಗೂ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶೇಷಚೇತನರು ದೇವರ ಮಕ್ಕಳು, ನಾವು ಎಲ್ಲ ಸರಿಯಿದ್ದವರು ಆ ಮಕ್ಕಳನ್ನು ಸರಿದಾರಿಗೆ ತರಲು ಸಹಕರಿಸಬೇಕು. ವಿಶೇಷಚೇತನ ಮಕ್ಕಳೆಂದು ಯಾರೂ ಕಡೆಗಣಿಸಬಾರದು. ಅವರ ಜೀವನದಲ್ಲಿ ಯಾವ ಕ್ಷೇತ್ರದಲ್ಲಿ ಮುಂದುವರಿಯಲು ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಮುಂದುವರಿಯಲು ಸರಕಾರ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅವರಲ್ಲಿರುವ ಕೌಶಲಗಳನ್ನು ಗುರುತಿಸಿ ಪೋಷಕರು ಆ ಕ್ಷೇತ್ರದಲ್ಲಿ ಮಕ್ಕಳನ್ನು ಮುಂದುವರಿಯಲು ಬಿಡಬೇಕು. ತಾಲೂಕಿನಲ್ಲಿ 381 ವಿಶೇಷಚೇತನ ಮಕ್ಕಳಿದ್ದಾರೆ. ವಿಶೇಷಚೇತನ ಮಕ್ಕಳು ನಾವು ಯಾವುದರಲ್ಲೂ ಕಡಿಮೆ ಇಲ್ಲವೆಂದು ಸಾಧಿಸಿ ತೋರಿಸಬೇಕು. ಇಂತಹ ಮಕ್ಕಳಿಗೆ ನನ್ನ ಸಹಕಾರ ಇರುತ್ತದೆ ಎಂದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಗಾಯತ್ರಿ ದೇವಿ ಮಾತನಾಡಿ, ತಾಲೂಕಿನಾದ್ಯಂತ 381 ವಿಶೇಷಚೇತನ ಮಕ್ಕಳಿದ್ದು 10 ನ್ಯೂನತೆಗಳುಳ್ಳ ಮಕ್ಕಳನ್ನು ಗುರುತಿಸಲಾಗಿದೆ. ಕೆಲವು ಮಕ್ಕಳಿಗೆ ಮೆಡಿಕಲ್‌ ಕ್ಯಾಂಪ್‌ ನಡೆಸಿ ಉಪಕರಣಗಳನ್ನು ವಿತರಿಸಲಾಗಿದೆ. ಇಂದು ವಿಶೇಷಚೇತನ ಮಕ್ಕಳಿಗೆ ನಾನಾ ರೀತಿಯ ಸರಳ ಸ್ಪರ್ಧೆಗಳು, ಸಾಂಸಕ್ಕೃತಿಕ ಕಾರ್ಯಕ್ರಮ, ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೋಷಕರು ಮಕ್ಕಳ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆಯ ವಿವರಗಳನ್ನು ನೀಡಬೇಕು ಎಂದರು.

ವಿಶೇಷಚೇತನ ಮಕ್ಕಳಿಗೆ ಶಿಕ್ಷ ಣ, ಸಹೋದರತ್ವ ಸಮಾನತೆ ಕಲ್ಪಿಸಬೇಕು. ಅನುಕಂಪದ ಬದಲು ಅವಕಾಶಗಳನ್ನು ನೀಡಬೇಕು. ಕೆಲವು ಮಕ್ಕಳನ್ನು ಪರೀಕ್ಷಿಸಲಾಗಿ ಅವರನ್ನು ಶಸ್ತ್ರಚಿಕಿತ್ಸೆಗೆ ಕೊಡಿಸಲು ಶಿಪಾರಸ್ಸು ಮಾಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ಮಾತನಾಡಿದರು.

ಇದೇ ವೇಳೆ ವಿಶೇಷಚೇತನ ಮಕ್ಕಳಿಗೆ ಶಾಸಕರು ಸಾಧನ ಸಲಕರಣೆಗಳನ್ನು ವಿತರಿಸಿದರು.

ಇದೇ ವೇಳೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರಾದ ರಾಧಮ್ಮ ಮುನಿರಾಜು, ತಾಪಂ ಉಪಾಧ್ಯಕ್ಷೆ ನಂದಿನಿ ವೆಂಕಟೇಶ್‌, ಗಾಮಾಂತರ ಪ್ರೌಢಶಾಲಾ ಮುಖ್ಯಶಿಕ್ಷ ಕರ ಸಂಘದ ಅಧ್ಯಕ್ಷ ಬಿ.ಎನ್‌.ಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ತಾಲೂಕು ಅಧ್ಯಕ್ಷ ನಾಗೇಶ್‌, ಬಿ.ಆರ್‌.ಪಿ ಪ್ರಸನ್ನ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ