ಆ್ಯಪ್ನಗರ

ಅನುದಾನ ಬಿಡುಗಡೆಯಾದರೂ ಅತಿಥಿ ಶಿಕ್ಷ ಕರಿಗೆ ಇನ್ನೂ ಕೈಸೇರದ ವೇತನ

ಸರಕಾರಿ ಶಾಲೆಗಳಲ್ಲಿ ಗೌರವ ಸಂಭಾವನೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷ ಕರಿಗೆ ಕಳೆದ 6 ತಿಂಗಳಿಂದ ವೇತನವಿಲ್ಲದೆ ಸಂಕಷ್ಟ ಎದುರಾಗಿದೆ. ಸರಕಾರದಿಂದ ವೇತನ ಅನುದಾನ ಬಿಡುಗಡೆಯಾಗಿ ತಿಂಗಳಾದರೂ ಸಂಬಳ ಕೈಗೆ ಸಿಕ್ಕಿಲ್ಲ ಎಂದು ಅತಿಥಿ ಶಿಕ್ಷ ಕರು ಅಳಲು ತೋಡಿಕೊಂಡಿದ್ದಾರೆ.

Vijaya Karnataka 21 Nov 2018, 4:27 pm
ಎಂ. ಪ್ರಶಾಂತ್‌ ಸೂಲಿಬೆಲೆ: ಸರಕಾರಿ ಶಾಲೆಗಳಲ್ಲಿ ಗೌರವ ಸಂಭಾವನೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷ ಕರಿಗೆ ಕಳೆದ 6 ತಿಂಗಳಿಂದ ವೇತನವಿಲ್ಲದೆ ಸಂಕಷ್ಟ ಎದುರಾಗಿದೆ. ಸರಕಾರದಿಂದ ವೇತನ ಅನುದಾನ ಬಿಡುಗಡೆಯಾಗಿ ತಿಂಗಳಾದರೂ ಸಂಬಳ ಕೈಗೆ ಸಿಕ್ಕಿಲ್ಲ ಎಂದು ಅತಿಥಿ ಶಿಕ್ಷ ಕರು ಅಳಲು ತೋಡಿಕೊಂಡಿದ್ದಾರೆ.
Vijaya Karnataka Web grant is released the guest teachers not getting salary
ಅನುದಾನ ಬಿಡುಗಡೆಯಾದರೂ ಅತಿಥಿ ಶಿಕ್ಷ ಕರಿಗೆ ಇನ್ನೂ ಕೈಸೇರದ ವೇತನ


ರಾಜ್ಯಾದ್ಯಂತ ಸರಕಾರಿ ಶಾಲೆಗಳಲ್ಲಿರುವ ಶಿಕ್ಷ ಕರ ಕೊರತೆ ್ನನೀಗಿಸುವ ದೃಷ್ಟಿಯಿಂದ ಗೌರವ ಸಂಭಾವನೆ ಆಧಾರದ ಮೇಲೆ ಅತಿಥಿ ಶಿಕ್ಷ ಕರನ್ನು ಶೈಕ್ಷ ಣಿಕ ವರ್ಷದ ಪ್ರಾರಂಭದಿಂದಲೇ ನೇಮಕ ಮಾಡಿಕೊಂಡಿದ್ದು, ಶಿಕ್ಷ ಕರು ಕೆಲಸ ಮಾಡುತ್ತಿದ್ದಾರೆ. ಕಡಿಮೆ ವೇತನವಾದರೂ ಇಂದಲ್ಲ ನಾಳೆ ಸಿಗುತ್ತೆ ಎಂಬ ವಿಶ್ವಾಸದ ಮೇಲೆ ಅತಿಥಿ ಶಿಕ್ಷ ಕರು ಕಳೆದ 6 ತಿಂಗಳಿಂದ ಕೆಲಸ ಮಾಡುತ್ತಿದ್ದರೂ, ಪ್ರತಿ ತಿಂಗಳು ಸಮರ್ಪಕವಾಗಿ ವೇತನ ನೀಡುವಲ್ಲಿ ಇಲಾಖೆ ವಿಫಲವಾಗಿದೆ. ಅತಿಥಿ ಶಿಕ್ಷ ಕರ ವೇತನ ಪಾವತಿಗೆ ಸರಕಾರ ಅನುದಾನ ಬಿಡುಗಡೆ ಮಾಡಿ ಅದು ಖಜಾನೆ-2 ಮುಖಾಂತರ ಬರುವಷ್ಟರಲ್ಲಿ ಶಿಕ್ಷ ಕರ ಪರಿಸ್ಥಿತಿ ಅಧ್ವಾನವಾಗುತ್ತಿದೆ.

ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷ ಕರ ಗೌರವಧನದ ಅನುದಾನವನ್ನು ರಾಜ್ಯ ಸರಕಾರ ಕಳೆದ ತಿಂಗಳು ಅ.23ರಂದು ಬಿಡುಗಡೆ ಮಾಡಿದ್ದರೂ ಆಯಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಬಿಡುಗಡೆಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅನುದಾನ ನೇರವಾಗಿ ಖಜಾನೆ ತಲುಪಿದ್ದು ಸಕಾಲಕ್ಕೆ ಬಿಡುಗಡೆಯಾಗುತ್ತಿಲ್ಲ. ಸರಕಾರ ಅನುದಾನ ಬಿಡುಗಡೆ ಆದೇಶ ನೀಡಿ ಸಂಭಾವನೆ ಬಿಡುಗಡೆಗೆ ಅಗತ್ಯ ಮಾರ್ಗಸೂಚಿಗಳನ್ನು ಇಲಾಖೆ ಅಧಿಕಾರಿಗಳಿಗೆ ನೀಡಿದೆ. ಅಲ್ಲದೆ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ, ಯಾವುದೇ ದೂರುಗಳಿಗೆ ಅವಕಾಶವಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇದರ ಬಗ್ಗೆ ತುರ್ತು ಕ್ರಮ ಕೈಗೊಳ್ಳದ ಕಾರಣ ಅತಿಥಿ ಶಿಕ್ಷ ಕರಿಗೆವೇತನ ಕೈ ಸೇರುತ್ತಿಲ್ಲ ಎಂಬ ದೂರುಗಳು ವ್ಯಕ್ತವಾಗುತ್ತಿವೆ.

ಅತಿಥಿ ಶಿಕ್ಷ ಕರ ವೇತನ ವಿಳಂಬವಾದ್ರೂ ಯಾರೊಬ್ಬರು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲ ಶಿಕ್ಷ ಕರಂತೆ ಇವರು ಸಹ ಅರ್ಹತೆ ಹೊಂದಿರುವ ಶಿಕ್ಷ ಕರಾದ್ರೂ ಸಂಬಳ ಇತ್ಯಾದಿ ಸಮಸ್ಯೆಗಳು ಬಂದಾಗ ಯಾರು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಕೆಲಸ ಕಾಯಂ ಇಲ್ಲ. ಕೆಲಸ ಮಾಡುವ ಶಾಲೆಯಲ್ಲಿ ಕಾಯಂ ಶಿಕ್ಷ ಕರು ಬಂದರೆ ಅತಿಥಿ ಶಿಕ್ಷ ಕರನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸುತ್ತಾರೆ. ಗೌರವ ಸಂಭಾವನೆಯಾದ್ರೂ ಪ್ರತಿ ತಿಂಗಳು ನೀಡಿದರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ. ಆರು ತಿಂಗಳಿಂದ ಸಂಬಳವಿಲ್ಲ ಎಂದರೆ ಜೀವನ ನಡೆಸೋದು ಹೇಗೆ? ಮಕ್ಕಳ ವಿದ್ಯಾಭ್ಯಾಸ, ಮನೆ ಸಂಸಾರ ಇತ್ಯಾದಿ ಕೆಲಸಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಇಲಾಖೆ ನಮ್ಮಿಂದ ಕೆಲಸ ತೆಗೆದುಕೊಂಡು ಆ ಕೆಲಸಕ್ಕೆ ತಕ್ಕಂತೆ ಸಕಾಲಕ್ಕೆ ಸಂಬಳ ನೀಡಿದರೆ ತುಂಬಾ ಅನುಕೂಲವಾಗುತ್ತದೆ. ಅನುದಾನ ಬಿಡುಗಡೆಯಾದ್ರೂ ಖಜಾನೆಯಿಂದ ಅತಿಥಿ ಶಿಕ್ಷ ಕರಿಗೆ ಪಾವತಿಯಾಗುವಂತೆ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಅನುಕೂಲ ಮಾಡಿಕೊಡಬೇಕು ಎಂದು ಅತಿಥಿ ಶಿಕ್ಷ ಕರು ಒತ್ತಾಯಿಸಿದ್ದಾರೆ.

ಅನುದಾನ ಬಿಡುಗಡೆಯಾಗಿದ್ದು, ಸರಕಾರದ ನಿಯಮನುಸಾರ ಖಜಾನೆಗೆ ತಲುಪಿದೆ. ಅಲ್ಲಿಂದ ವೇತನ ಬಿಡುಗಡೆಯಾಗಬೇಕು. ಕೆಲವು ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿರಬಹುದು. ಇದರ ಬಗ್ಗೆ ಪರಿಶೀಲನೆ ಮಾಡಿ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು.

- ಕನ್ನಯ್ಯ, ಕ್ಷೇತ್ರ ಶಿಕ್ಷ ಣಾಧಿಕಾರಿ

ಶೈಕ್ಷ ಣಿಕ ವರ್ಷದ ಪ್ರಾರಂಭದಿಂದಲೂ ಅತಿಥಿ ಶಿಕ್ಷ ಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇನ್ನೂ ವೇತನ ನೀಡಿಲ್ಲ. ವೇತನವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.

- ಅತಿಥಿ ಶಿಕ್ಷ ಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ