ಆ್ಯಪ್ನಗರ

ಯಾರೇ ಸ್ಪರ್ಧಿಸಲಿ, ಭಯ ಎಂಟಿಬಿ ಜಾಯಮಾನದಲ್ಲಿಲ್ಲ: ಹೊಸಕೋಟೆಯಲ್ಲಿ ಎಂ.ಟಿ.ಬಿ. ನಾಗರಾಜ್‌ ಹೇಳಿಕೆ

ದೀಪಾವಳಿ ಶುಭಾಶಯ ಹೇಳಿ ಹೂಗುಚ್ಛ ನೀಡಿ, ನವೆಂಬರ್‌ 4 ರಂದು ಹೊಸಕೋಟೆಯಲ್ಲಿ ನೀರಾವರಿ ಯೋಜನೆಗಳ ಶಂಕುಸ್ಥಾಪನೆ ಮಾಡುವ ವಿಚಾರವಾಗಿ ಮಾತನಾಡಿದ್ದೆ ವಿನಃ ಬೇರೆ ಏನೂ ಇಲ್ಲ,'' ಎಂದು ​​ಹೋಬಳಿ ಮಟ್ಟದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಹೇಳಿಕೊಂಡಿದ್ದಾರೆ.

Vijaya Karnataka 31 Oct 2019, 11:43 am
ನಂದಗುಡಿ: ಯಾರು ಬೇಕಾದರೂ ಯಾವುದೇ ಪಕ್ಷದಿಂದ ಸ್ಪರ್ಧಿಸಲಿ, ಭಯ ಬೀಳುವುದು ಗೋಗೆರೆಯುವದು ಎಂಟಿಬಿ ಜಾಯಮಾನದಲ್ಲಿ ಇಲ್ಲ. ನನಗೆ ಕಾರ್ಯಕರ್ತರ ಬಲ ಬೆಂಬಲ ಇದೆ. ಧೈರ್ಯವಾಗಿ ಚುನಾವಣೆ ಎದುರಿಸಲು ಸಿದ್ಧನಿದ್ದೇನೆ. ಜನರ ಅಶೀರ್ವಾದದಿಂದ ಮತ್ತೊಮ್ಮೆ ಗೆದ್ದು ಬರುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು.
Vijaya Karnataka Web mtb nagaraj speech


ನಂದಗುಡಿಯ ಸೂರ್ಯ ಕನ್ವೆನ್‌ಷನ್‌ ಹಾಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ನವೆಂಬರ್‌ 4ರಂದು ಸಿಎಂ ಹೊಸಕೋಟೆಗೆ ಆಗಮಿಸುತ್ತಿರುವ ಹಿನ್ನೆಲೆ ನಡೆದ ಹೋಬಳಿ ಮಟ್ಟದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ''ತಾಲೂಕಿನಲ್ಲಿ 4 ಚುನಾವಣೆಗಳನ್ನು ಎದುರಿಸಿ 3 ಬಾರಿ ಶಾಸಕನಾಗಿ, ಮಂತ್ರಿಯಾಗಿದ್ದೇನೆ. ನಾನು ಭಯ ಪಡುವುದು ದೇವರಿಗೆ ಹಾಗೂ ತಾಲೂಕಿನ ಮತದಾರರಿಗೆ ಮಾತ್ರ. ಮತದಾರರ ಅಶೀರ್ವಾದ ನನ್ನ ಪರವಾಗಿಯೇ ಇದೆ. '' ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಬಿಜೆಪಿಗೆ ಸೇರ್ಪಡೆ: ಎಂಟಿಬಿ ನಾಗರಾಜ್‌

ಇನ್ನು, ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದನ್ನು ಸಮರ್ಥಿಸಿಕೊಂಡ ಎಂಟಿಬಿ ನಾಗರಾಜ್‌, ''ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ನಿಜ. ದೀಪಾವಳಿ ಶುಭಾಶಯ ಹೇಳಿ ಹೂಗುಚ್ಛ ನೀಡಿ, ನವೆಂಬರ್‌ 4 ರಂದು ಹೊಸಕೋಟೆಯಲ್ಲಿ ನೀರಾವರಿ ಯೋಜನೆಗಳ ಶಂಕುಸ್ಥಾಪನೆ ಮಾಡುವ ವಿಚಾರವಾಗಿ ಮಾತನಾಡಿದ್ದೆ ವಿನಃ ಬೇರೆ ಏನೂ ಇಲ್ಲ,'' ಎಂದು
ಹೋಬಳಿ ಮಟ್ಟದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಹೇಳಿಕೊಂಡಿದ್ದಾರೆ.

undefinedಗೃಹ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿ ಸಡ್ಡು ಹೊಡೆದ ಶರತ್ ಬಚ್ಚೇಗೌಡ

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ನಿಜ, ದೀಪಾವಳಿ ಶುಭಾಶಯ ಹೇಳಿ ಹೂಗುಚ್ಛ ನೀಡಿ, ನವೆಂಬರ್‌ 4 ರಂದು ಹೊಸಕೋಟೆಯಲ್ಲಿ ನೀರಾವರಿ ಯೋಜನೆಗಳ ಶಂಕುಸ್ಥಾಪನೆ ಮಾಡುವ ವಿಚಾರವಾಗಿ ಮಾತನಾಡಿದ್ದೆ ವಿನಃ ಬೇರೆ ಏನೂ ಇಲ್ಲ,'' ಎಂದರು. ''ನಾನು ಯಾರಿಗೂ 120 ಕೋಟಿ ರೂ. ಆಫರ್‌ ಕೊಟ್ಟಿಲ್ಲ. ನಾನೇ ಸರಿಯಾಗಿ ನೂರು ಕೋಟಿ ಹಣ ನೋಡಿಲ್ಲ. ಇದುವರೆಗೂ ನಾನು ಬಚ್ಚೇಗೌಡ - ಶರತ್‌ ಮುಖಾಮುಖಿಯಾಗಿ ಭೇಟಿ ಮಾಡಿಲ್ಲ. ಇದು ನಾನು ನಂಬಿರುವ ದೇವರ ಮೇಲೆ ಆಣೆ ಮಾಡುತ್ತೇನೆ. ಆಫರ್‌ ಕೊಡುವ ಅಗತ್ಯವೂ ನನಗಿಲ್ಲ. ಶರತ್‌ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿಯಾಗುವುದೋ, ಕಾಂಗ್ರೆಸ್‌ಗೆ ಸೇರಿ ಚುನಾವಣೆ ಎದುರಿಸುವುದೋ ಎಂಬಿತ್ಯಾದಿ ಗೊಂದಲ ಸೃಷ್ಟಿಯಾಗಿ ಮನಸ್ಸು ಚಂಚಲವಾಗಿದ್ದು, ಜನರನ್ನು ಮರುಳು ಮಾಡಲು ಇಲ್ಲಸಲ್ಲದ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್‌ನವರು ಚುನಾವಣೆ ಗೆಲ್ಲಲು ಬಂದಿಲ್ಲ. ಎಂಟಿಬಿಯನ್ನು ಸೋಲಿಸಲು ಪ್ರಚಾರ ನಡೆಸುತ್ತಿದ್ದಾರೆ,’’ ಎಂದು ಟೀಕಿಸಿದರು.

ನಾನು ಗುಳ್ಳೆ ನರಿನೇ, ಅವರು ಹುಲಿ ಸಿಂಹಗಳಾಗಲಿ: ಎಂಟಿಬಿ ನಾಗರಾಜ್‌

‘‘ಇದೇ ನವೆಂಬರ್‌ 4 ರಂದು ಹೊಸಕೋಟೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ 100 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯಡಿ ಅನುಗೊಂಡನಹಳ್ಳಿ ಹಾಗೂ ಜಡಿಗೇನಹಳ್ಳಿ ವ್ಯಾಪ್ತಿಯ 30 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು,’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ