ಆ್ಯಪ್ನಗರ

ಕೈ ಕಾರ‍್ಯಕರ್ತರೇ ಹಿಡಿದ್ರು ಜೆಡಿಎಸ್‌ ಬಾವುಟ !

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮಧ್ಯೆ ಮೈತ್ರಿ ಇನ್ನೂ ಕುದರದೆ ಕಾಂಗ್ರೆಸ್‌ ಕಾರ‍್ಯಕರ್ತರೆ ಜೆಡಿಎಸ್‌ ಭಾವುಟ ಹಿಡಿದು ಪ್ರಚಾರಕ್ಕೆ ಚಾಲನೆ ನೀಡಿದ ವಿಚಿತ್ರ ಪ್ರಸಂಗ ನಡೆದಿದೆ.

Vijaya Karnataka 30 Mar 2019, 5:00 am
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಒಳಬೇಗುದಿ ಮರೆಮಾಚಲು ಕಾಂಗ್ರೆಸ್‌ ತಂತ್ರ
Vijaya Karnataka Web jds flags holded by congress party workers
ಕೈ ಕಾರ‍್ಯಕರ್ತರೇ ಹಿಡಿದ್ರು ಜೆಡಿಎಸ್‌ ಬಾವುಟ !


ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮಧ್ಯೆ ಮೈತ್ರಿ ಇನ್ನೂ ಕುದರದೆ ಕಾಂಗ್ರೆಸ್‌ ಕಾರ‍್ಯಕರ್ತರೆ ಜೆಡಿಎಸ್‌ ಭಾವುಟ ಹಿಡಿದು ಪ್ರಚಾರಕ್ಕೆ ಚಾಲನೆ ನೀಡಿದ ವಿಚಿತ್ರ ಪ್ರಸಂಗ ನಡೆದಿದೆ.

ಕ್ಷೇತ್ರ ವ್ಯಾಪ್ತಿಯ ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಮುಖಂಡರು ಕೈ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲು ಇನ್ನೂ ಮೀನಮೇಷ ಎಣಿಸುತ್ತಿದ್ದು, ಶುಕ್ರವಾರ ತಾಲೂಕಿನ ರಾಜಘಟ್ಟ ಆಂಜನೇಯಸ್ವಾಮಿ ದೇವಾಲಯದಿಂದ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯ ಚಾಲನೆಗೆ ಜೆಡಿಎಸ್‌ ಮುಖಂಡರು ಗೈರಾಗಿದ್ದರು. ಆದರೆ ಮತದಾರರ ಮುಂದೆ ಈ ಒಳಬೇಗುದಿ ಕಾಣಿಸಿಕೊಳ್ಳಬಾರದೆಂದು ಕಾಂಗ್ರೆಸ್‌ ಕಾರ‍್ಯಕರ್ತರೇ ಜೆಡಿಎಸ್‌ ಭಾವುಟ ಹಿಡಿದು ಪ್ರದರ್ಶಿಸಿದ್ದು, ಚುನಾವಣೆಯ ತಂತ್ರಗಾರಿಕೆಗೆ ಸಾಕ್ಷಿ ಎನಿಸಿತು.

ಜೆಡಿಎಸ್‌ನವ್ರು ಪ್ರಚಾರಕ್ಕೆ ಸಮಯ ಕೇಳಿದ್ದಾರೆ: ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಶಾಸಕ ಟಿ.ವೆಂಣಕಟರಮಣಯ್ಯ, ಚಿಕ್ಕಬಳ್ಳಾಪುರ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲೂ ಜೆಡಿಎಸ್‌-ಕಾಂಗ್ರೆಸ್‌ ಜೊತೆಗೂಡಿ ಮೊಯ್ಲಿ ಪರವಾಗಿ ಪ್ರಚಾರ ಆರಂಭ ಮಾಡಿದ್ದಾರೆ. ಆದರೆ ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್‌ ಪಕ್ಷ ದವರು ನಮಗೆ ಎರಡು ದಿನ ಸಮಯ ಕೇಳಿದ್ದಾರೆ. ಆದರೆ ಚುನಾವಣೆ ಸಮೀಪ ಇರುವುದರಿಂದ ನಾವು ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ದ ಕಾರ್ಯಕರ್ತರು ನೇರವಾಗಿ ನಮ್ಮ ಪ್ರಚಾರಕ್ಕೆ ಹಿಂದೆ ಹೋಗುವವರಿಗೆ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ದೇವೇಗೌಡ ಅವರು ಮಾತನಾಡಿ ಬಗೆಹರಿಸಬೇಕಾಗಿದೆ. ಈ ಕುರಿತು ಅವರಲ್ಲಿ ಸಚಿವ ಶಿವಶಂಕರರೆಡ್ಡಿ, ಡಾ.ಎಂ.ವೀರಪ್ಪಮೋಯ್ಲಿ ಸೇರಿದಂತೆ ನಾನು ಚರ್ಚಿಸಿದ್ದೇನೆæ. ದೊಡ್ಡಬಳ್ಳಾಪುರದ ಜೆಡಿಎಸ್‌ ಪಾಳಯದಲ್ಲಿ 2-3 ಪಂಗಡಗಳಿರುವುದರಿಂದ ಅವರನ್ನು ಸೇರಿಸಿ ಮಾತನಾಡಿ ಒಮ್ಮತಕ್ಕೆ ಬಂದು ನಿಮ್ಮ ಜೊತೆ ಪ್ರಚಾರಕ್ಕೆ ಬರುತ್ತೇವೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ