ಆ್ಯಪ್ನಗರ

ಕ್ಯಾಟ್‌ ಫಿಶ್‌ ದಂಧೆ ತಡೆಗಟ್ಟುವಲ್ಲಿ ಸ್ಥಳೀಯ ಅಧಿಕಾರಿಗಳು ವಿಫಲ: ಗ್ರಾಮಸ್ಥರ ಆರೋಪ

ಕೃಷಿ ಜಮೀನಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕ್ಯಾಟ್‌ ಫಿಶ್‌ ದಂಧೆಯನ್ನು ತಡೆಗಟ್ಟಲು ಅಧಿಕಾರಿಗಳೇ ಸಹಕರಿಸದಿರುವ ಘಟನೆ ಬೆಳಕಿಗೆ ಬಂದಿದೆ.

Vijaya Karnataka 16 Nov 2018, 4:09 pm
ದಾಬಸ್‌ಪೇಟೆ: ಕೃಷಿ ಜಮೀನಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕ್ಯಾಟ್‌ ಫಿಶ್‌ ದಂಧೆಯನ್ನು ತಡೆಗಟ್ಟಲು ಅಧಿಕಾರಿಗಳೇ ಸಹಕರಿಸದಿರುವ ಘಟನೆ ಬೆಳಕಿಗೆ ಬಂದಿದೆ.
Vijaya Karnataka Web local authorities failed to prevent catfish villagers accused
ಕ್ಯಾಟ್‌ ಫಿಶ್‌ ದಂಧೆ ತಡೆಗಟ್ಟುವಲ್ಲಿ ಸ್ಥಳೀಯ ಅಧಿಕಾರಿಗಳು ವಿಫಲ: ಗ್ರಾಮಸ್ಥರ ಆರೋಪ


ಸ್ಥಳೀಯ ಮಟ್ಟದಲ್ಲಿ ಸ್ಥಳ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಲು ಕಂದಾಯ ಅಧಿಕಾರಿಗಳು ಮತ್ತು ಗ್ರಾಪಂ ಪಿಡಿಒ ಹಿಂದೇಟು ಹಾಕಿದ ಬಗ್ಗೆ ಖುದ್ದು ಮೀನುಗಾರಿಕೆ ಇಲಾಖೆ ಅಧಿಕಾರಿಯೇ ಅಸಮಾಧಾನ ಹೊರ ಹಾಕಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ನಡೆದದ್ದೇನು?: ಸೋಂಪುರ ಹೋಬಳಿಯ ನಿಜಗಲ್‌ ಕೆಂಪೋಹಳ್ಳಿ ವ್ಯಾಪ್ತಿಯಲ್ಲಿ ಮುದ್ದರಾಮ ನಾಯ್ಕನಪಾಳ್ಯದ ಕೃಷಿ ಭೂಮಿಯಲ್ಲಿ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಣೆ ಮಾಡುತ್ತಿದ್ದ ಕೊಳವನ್ನು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಅಮೃತಾ ಅವರು ಬುಧವಾರ ಸಂಜೆ ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್‌ ನೇತೃತ್ವದೊಂದಿಗೆ ದಾಳಿ ನಡೆಸಿ ತೆರವುಗೊಳಿಸಿದ್ದರು.

ಈ ಕುರಿತು ಕಾರ್ಯಾಚರಣೆ ಪೂರ್ಣಗೊಳಿಸಿ ಅಂತಿಮ ವರದಿ ನೀಡಲು ಸ್ಥಳ ಪರಿಶೀಲನೆಗೆ ಗುರುವಾರ ಬಂದು ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸ್ಥಳಕ್ಕೆ ಬರುವಂತೆ ಕರೆ ಮಾಡಿ ತಿಳಿಸಿದರೂ ಯಾವೊಬ್ಬ ಸ್ಥಳೀಯ ಅಧಿಕಾರಿಗಳು ಬರಲಿಲ್ಲ. ಸರಕಾರಿ ಅಧಿಕಾರಿಯೇ ಕರೆ ಮಾಡಿ ತಿಳಿಸಿದರೂ ಬಾರದೇ ಇರುವವರು ಇನ್ನು ರೈತರು, ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವರೇ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಅಮೃತಾ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಹೋಬಳಿಯಲ್ಲಿ ನಡೆಯುತ್ತಿರುವ ಅಕ್ರಮ ಕ್ಯಾಟ್‌ ಫಿಶ್‌ ದಂಧೆಗೆ ಸ್ಥಳೀಯ ಕಂದಾಯ ಮತ್ತು ಗ್ರಾಪಂ ಅಧಿಕಾರಿಗಳ ಕುಮ್ಮಕ್ಕು ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅಗಳಕುಪ್ಪೆ ಗ್ರಾಪಂ ವ್ಯಾಪ್ತಿಯ ನಿಜಗಲ್‌ ಕೆಂಪೋಹಳ್ಳಿಯಲ್ಲಿ ನಡೆಸುತ್ತಿರುವ ಅಕ್ರಮ ಕ್ಯಾಟ್‌ ಫಿಶ್‌ ಸಾಕಣೆ ಮಾಡಿರುವ ಕೊಳದ ಮೇಲೆ ದಾಳಿ ನಡೆದ ಬಗ್ಗೆ ಮಾಹಿತಿ ತಿಳಿದರೂ ಪಿಡಿಒ ಸ್ಥಳಕ್ಕೆ ಬಾರದೇ ಬೇಜವಾಬ್ದಾರಿ ತೋರಿದ್ದಲ್ಲದೆ ಇದರ ಅಕ್ರಮ ಸಾಕಣೆಗೆ ಇವರೇ ಕುಮ್ಮಕ್ಕು ನೀಡಿರಬಹುದು. ಸೋಂಪುರ ಹೋಬಳಿಯಲ್ಲಿ ಅಕ್ರಮವಾಗಿ ಜಮೀನುಗಳಲ್ಲಿ ಕ್ಯಾಟ್‌ಫಿಶ್‌ ಸಾಕಣೆ ಮಾಡುತ್ತಿರುವವರ ಮೇಲೆ ದಾಳಿ ನಡೆಯುತ್ತಿದ್ದರೂ ಹೋಬಳಿಯ ಕಂದಾಯ ಇಲಾಖೆಯ ಅಧಿಧಿಕಾರಿಗಳು ಅಂತಹವರವನ್ನು ಪತ್ತೆ ಹಚ್ಚುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಹಿಂದಿನ ಕಾರಣವೇನು? ತಾಲೂಕು ಮಟ್ಟದ ಅಧಿಕಾರಿಗಳು ನೇರವಾಗಿ ಸ್ಥಳಕ್ಕೆ ಬಂದರೂ ಸ್ಥಳೀಯ ಅಧಿಕಾರಿ ಸಿಬ್ಬಂದಿ ಬಾರದಿರಲು ಏನು ಕಾರಣವಿದೆ ಎಂಬ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ