ಆ್ಯಪ್ನಗರ

ಪ್ರಕೃತಿಯನ್ನು ಪ್ರೀತಿಸಿ ಪೋಷಿಸಿ

ಪ್ರಕೃತಿಯನ್ನು ಪ್ರೀತಿಸಿ ಪೋಷಿಸಬೇಕು. ಪರಿಸರ ಸಂರಕ್ಷಣೆ ಬಗ್ಗೆ ಇನ್ನೊಬ್ಬರಿಂದ ಹೇಳಿಸಿಕೊಳ್ಳುವುದಲ್ಲ, ತಾನಾಗಿಯೇ ಬರಬೇಕು. ಪರಿಸರ, ನಮ್ಮ ಸುತ್ತಲಿನ ಪ್ರಾಣಿ, ಪಕ್ಷಿಗಳ ಬಗ್ಗೆ ಪ್ರೀತಿ ಇರಬೇಕು ಎಂದು ಹಿರಿಯ ನಟಿ ಡಾ. ಲೀಲಾವತಿ ಹೇಳಿದರು.

Vijaya Karnataka 6 Jun 2019, 5:00 am
ವಿಜಯಕರ್ನಾಟಕದಿಂದ ಜರುಗಿದ ವಿಶ್ವ ಪರಿಸರ ದಿನಾಚರಣೆಯಲ್ಲಿ ಹಿರಿಯ ನಟಿ ಲೀಲಾವತಿ ಸಲಹೆ
Vijaya Karnataka Web BRL-04

ಬೆಂಗಳೂರು ಗ್ರಾಮಾಂತರ/ನೆಲಮಂಗಲ

ಪ್ರಕೃತಿಯನ್ನು ಪ್ರೀತಿಸಿ ಪೋಷಿಸಬೇಕು. ಪರಿಸರ ಸಂರಕ್ಷಣೆ ಬಗ್ಗೆ ಇನ್ನೊಬ್ಬರಿಂದ ಹೇಳಿಸಿಕೊಳ್ಳುವುದಲ್ಲ, ತಾನಾಗಿಯೇ ಬರಬೇಕು. ಪರಿಸರ, ನಮ್ಮ ಸುತ್ತಲಿನ ಪ್ರಾಣಿ, ಪಕ್ಷಿಗಳ ಬಗ್ಗೆ ಪ್ರೀತಿ ಇರಬೇಕು ಎಂದು ಹಿರಿಯ ನಟಿ ಡಾ. ಲೀಲಾವತಿ ಹೇಳಿದರು.

ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಫಾರ್ಮ್‌ಹೌಸ್‌ನಲ್ಲಿ ವಿಜಯ ಕರ್ನಾಟಕ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಹಾಘನಿ ಹಾಗೂ ಹಲಸಿನ ಗಿಡಗಳನ್ನು ನೆಟ್ಟು ನೀರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದು ಪರಿಸರ ಸಾಕಷ್ಟು ಮಲೀನವಾಗುತ್ತಿದೆ. ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಯಾಂತ್ರಿಕ ಜೀವನಕ್ಕೆ ಮಾರುಹೋಗಿ ಕೃಷಿ ಹಿಮ್ಮುಖವಾಗುತ್ತಿದೆ. ಪರಿಸರವಿದ್ದರೆ ನಾವು ಎಂಬುದನ್ನು ಮನಗಾಣಬೇಕು. 22 ವರ್ಷಗಳ ಹಿಂದೆ ಈ ಜಾಗ ಖರೀದಿಸಿದಾಗ ಬರೀ ಬಂಡೆಗಳೇ ಇದ್ದವು. ಆಗ ಈ ಬಂಡೆಗಳು ''ಯಾರೋ ಸಿನಿಮಾದವರು ಬಂದಿದ್ದಾರೆ. ನಮ್ಮನ್ನು ಡೈನಾಮೆಟ್‌ ಇಟ್ಟು ಪುಡಿಪುಡಿ ಮಾಡುತ್ತವೆ ಎಂದು ಮಾತನಾಡಿಕೊಂಡವು. ಆಗ ನಾನು ಹೇಳಿದೆ ನಿಮ್ಮ ಪಕ್ಕದಲ್ಲಿ ನನಗೆ ಸ್ವಲ್ಪ ಜಾಗ ಕೊಡಿ ನಿಮ್ಮನ್ನು ಹಾಗೆಯೇ ಉಳಿಸಿಕೊಳ್ಳುತ್ತೇನೆಂದು ಮಾತುಕೊಟ್ಟಿದ್ದೆ,'' ಎಂದು ಹಳೆಯ ನೆನಪು ಮೆಲುಕು ಹಾಕಿದರು.

ನಟ ವಿನೋದ್‌ರಾಜ್‌ ಮಾತನಾಡಿ, ಚಲನಚಿತ್ರ ಬಿಟ್ಟ ಮೇಲೆ ಕೃಷಿಯನ್ನು ಒಂದು ಕಲೆ ಎಂದು ನಮ್ಮ ತಾಯಿ ತೋರಿಸಿದರು. ಇಂತಹ ಪ್ರಕೃತಿ ಸೊಬಗನ್ನು ಸೃಷ್ಟಿಸಲು ವಾತಾವರಣ ಸೃಷ್ಟಿಸಲು 20 ವರ್ಷವಾಯಿತು. ಬಣ್ಣ ಹಚ್ಚಿಕೊಂಡು ರಂಜಿಸುತ್ತೇವೆ. ಆದರೆ ಕೃಷಿ ರಕ್ತಗತವಾಗಿ ಬರಬೇಕು. ಪರಿಸರವನ್ನು ಪ್ರೀತಿಸುವುದು ಮಾತ್ರವಲ್ಲ ಪ್ರಾಣಿಗಳನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದರು.

ಕೃಷಿ ಖುಷಿ ಕೊಡುತ್ತದೆ. ಪ್ರತಿ ಬಾರಿಯೂ ಹೊಸತನ ಕಾಣುತ್ತೇವೆ. ಮಾಡಿದ್ದೇ ಮಾಡಿದ್ದರೆ ಜಿಗುಪ್ಸೆ ಬರುತ್ತದೆ. ಒಂದು ಗಿಡ ನೆಟ್ಟಾಗಿ ಅದು ಹೂ ಬಿಟ್ಟು ನಳನಳಿಸುತ್ತಿದ್ದಗ ಅದನ್ನು ನೋಡುವುದೇ ಒಂದು ಖುಷಿ. ಅಂತಹ ಖುಷಿ ಕೃಷಿಯಿಂದ ಮಾತ್ರ ಸಿಗಲು ಸಾಧ್ಯ ಎಂದರು.

ಬಂಡೆ ಸಿಡಿಸಿದ್ದರೆ ಪ್ರಕೃತಿ ಉಳಿಯುತ್ತಿತ್ತೇ? ಪೂರ್ವಿಕರು ಹಿಂದೆ ಬಂಡೆಗಳು ಸಿಕ್ಕಿದವು ಎಂದು ಸಿಡಿಮದ್ದು ಇಟ್ಟು ಸಿಡಿಸಿದರೆ ಇಂದು ಈ ರೀತಿಯ ಪ್ರಕೃತಿ ಸೌಂದರ್ಯ ಕಾಣಲು ಸಾಧ್ಯವಾಗುತ್ತಿರಲಿಲ್ಲ. ತಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವುದು ಅವರವರ ಜವಾಬ್ದಾರಿಯಾಗಿದೆ. ಇದನ್ನು ಯಾರಿಂದಲೂ ಹೇಳಿಸಿಕೊಂಡು ಮಾಡುವುದಲ್ಲ, ತಾನಾಗಿಯೇ ಬರಬೇಕು ಎಂದು ಲೀಲಾವತಿ ಹೇಳಿದರು.

ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಫಾರ್ಮ್‌ಹೌಸ್‌ನಲ್ಲಿ ವಿಜಯ ಕರ್ನಾಟಕ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಹಿರಿಯ ನಟಿ ಲೀಲಾವತಿ, ವಿನೋದ್‌ರಾಜ್‌ ಮತ್ತಿತರ ಗಣ್ಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ